Friday, 22nd November 2024

KEA Exam: ಸೆ.29ಕ್ಕೆ VAO ಕಡ್ಡಾಯ ಕನ್ನಡ ಪರೀಕ್ಷೆ; ಪ್ರವೇಶ ಪತ್ರಕ್ಕಾಗಿ ಅರ್ಜಿ ಸಂಖ್ಯೆ ಪಡೆಯಲು ಲಿಂಕ್‌ ಬಿಡುಗಡೆ

KEA Exam

ಬೆಂಗಳೂರು: ಗ್ರಾಮ ಆಡಳಿತಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಸೆ. 29ರಂದು ಕನ್ನಡ ಕಡ್ಡಾಯ ಪರೀಕ್ಷೆ ಇದೆ. ಆದರೆ, ಕೆಲವರಿಗೆ ಅರ್ಜಿ ಸಂಖ್ಯೆ ಇಲ್ಲದೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಂತಹವರಿಗೆ ಅರ್ಜಿ ಸಂಖ್ಯೆ ಪಡೆಯಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA Exam) ಲಿಂಕ್ ಬಿಡುಗಡೆ ಮಾಡಿದೆ.

ಗ್ರಾಮ ಆಡಳಿತಾಧಿಕಾರಿ ಹುದ್ದೆ ನೇಮಕಾತಿಯ ಅರ್ಜಿ ಸಂಖ್ಯೆ ಹೊಂದಿಲ್ಲದವರು, ಕೆಇಎ ವೆಬ್‌ಸೈಟ್‌ನ ಈ ಲಿಂಕ್‌ https://karnemakaone.kar.nic.in/varec/Cand_ApplicationIDDetails.aspx ಮೂಲಕ ಅರ್ಜಿ ಸಂಖ್ಯೆ ಪಡೆದು, ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಲಿಂಕ್‌ ತೆರೆದ ಬಳಿಕ ಅಭ್ಯರ್ಥಿ ಜನ್ಮ ದಿನಾಂಕ, ಎಸ್‌ಎಸ್‌ಎಲ್‌ಸಿ ನೋಂದಣಿ ಸಂಖ್ಯೆ, ಆಧಾರ್‌ನ ಕೊನೆ 4 ಸಂಖ್ಯೆಗಳನ್ನು ನಮೂದಿಸಿ ಅರ್ಜಿ ಸಂಖ್ಯೆ ಪಡೆಯಬಹುದು.

ಕಡ್ಡಾಯ ಕನ್ನಡ ಪರೀಕ್ಷೆ ಪ್ರವೇಶ ಪತ್ರವನ್ನು ಈಗಾಗಲೇ ಕೆಇಎ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಪ್ರವೇಶ ಪತ್ರ ಡೌನ್‌ಲೋಡ್‌ ಮಾಡಿಕೊಳ್ಳಲು ಈ ಲಿಂಕ್‌ ಕ್ಲಿಕ್‌ ಮಾಡಿ

ಒಂದಕ್ಕಿಂತ ಹೆಚ್ಚು ಪ್ರವೇಶ ಪತ್ರ ಬಂದಿದ್ದರೆ ಏನು ಮಾಡಬೇಕು?

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ಹುದ್ದೆಗಳಿಗೆ ಮತ್ತು ಜಿಟಿಟಿಸಿ ಸಂಸ್ಥೆಯ ವಿವಿಧ ವೃಂದದ ಹುದ್ದೆಗಳಿಗೆ ಸೆ. 29ರಂದು ಕಡ್ಡಾಯ ಕನ್ನಡ ಪರೀಕ್ಷೆಯನ್ನು ನಡೆಸುತ್ತಿದೆ. ಕಡ್ಡಾಯ ಕನ್ನಡ ಪರೀಕ್ಷೆಯ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಲು ಈಗಾಗಲೇ ಲಿಂಕ್‌ನ್ನು ಬಿಡುಗಡೆಮಾಡಲಾಗಿದೆ. ಆದರೆ, ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸಿರುವ ಕಾರಣ ಒಂದಕ್ಕಿಂತ ಹೆಚ್ಚು ಪ್ರವೇಶ ಪತ್ರಗಳು ಬಿಡುಗಡೆಯಾಗಿವೆ.

ಒಂದೇ ದಿನಾಂಕದಂದು ಒಂದಕ್ಕಿಂತ ಹೆಚ್ಚು ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ಪತ್ರ ಹೊಂದಿರುವ ಅಭ್ಯರ್ಥಿಗಳು ಯಾವುದಾದರೂ ಒಂದು ಪರೀಕ್ಷಾ ಕೇಂದ್ರದಲ್ಲಿ ಮಾತ್ರ ಪರೀಕ್ಷೆಗೆ ಹಾಜರಾಗಬೇಕು ಮತ್ತು ಪರೀಕ್ಷೆ ನಂತರ ಪರೀಕ್ಷೆಗೆ ಹಾಜರಾದ ಪ್ರವೇಶ ಪತ್ರದೊಂದಿಗೆ ಅಭ್ಯರ್ಥಿಯು ಹಾಜರಾಗದೆ ಉಳಿದ ಇನ್ನೊಂದು ಪರೀಕ್ಷಾ ಕೇಂದ್ರದ ಪ್ರವೇಶ ಪತ್ರವನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ಅ. 5ರೊಳಗೆ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಕೆಇಎ ತಿಳಿಸಿದೆ.

ಸದ್ಯ ಸೆ. 29ರಂದು ನಡೆಯಲಿರುವ ಕಡ್ಡಾಯ ಕನ್ನಡ ಪರೀಕ್ಷಾ ಪ್ರವೇಶ ಪತ್ರಗಳನ್ನು ಡೌನ್‌ಲೋಡ್ ಮಾಡಿಕೊಳ್ಳಲು ಮಾತ್ರ ಅವಕಾಶ ನೀಡಲಾಗಿದ್ದು, ಅ. 26 ಮತ್ತು 27 ರಂದು ನಡೆಸಲು ಉದ್ದೇಶಿಸಿರುವ ಪರೀಕ್ಷೆಯ ಪ್ರವೇಶ ಪತ್ರವನ್ನು ನಂತರದ ದಿನಗಳಲ್ಲಿ ಕೆಇಎ ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ತಿಳಿಸಿದೆ.