Thursday, 19th September 2024

ನ.30 ರವರೆಗೆ ಈ ರಾಜ್ಯಗಳಲ್ಲಿ ಪಟಾಕಿಗಳ ಮಾರಾಟ, ಬಳಕೆ ನಿಷೇಧ

ನವದೆಹಲಿ : ರಾಷ್ಟ್ರ ರಾಜಧಾನಿ ನವದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೋನ ವೈರಸ್ ಸಾಂಕ್ರಾಮಿಕ ಮತ್ತು ಹದಗೆಡುತ್ತಿರುವ ಗಾಳಿಯ ಗುಣಮಟ್ಟವನ್ನು ಗಮನದಲ್ಲಿಟ್ಟುಕೊಂಡು, ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೋಮವಾರ ಮಧ್ಯರಾತ್ರಿಯಿಂದ ನ.30 ರವರೆಗೆ ದೆಹಲಿ-ಎನ್‌ಸಿಆರ್‌ನಲ್ಲಿ ಎಲ್ಲಾ ರೀತಿಯ ಪಟಾಕಿಗಳನ್ನು ಮಾರಾಟ ಮಾಡಲು ಅಥವಾ ಬಳಸುವುದನ್ನು ಸಂಪೂರ್ಣ ವಾಗಿ ನಿಷೇಧಿಸಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಾರ, ಸತತ ಮೂರನೇ ದಿನವೂ ದೆಹಲಿಯ ಹಲವಾರು ಸ್ಥಳಗಳ ವಾಯುಗುಣ ಮಟ್ಟ ಕುಸಿದಿದೆ. ರಾಷ್ಟ್ರೀಯ ರಾಜಧಾನಿ ಕ್ಷೀಣಿಸುತ್ತಿರುವ ಗಾಳಿಯ ಗುಣಮಟ್ಟದಲ್ಲಿ ಮುಂದುವರಿಯುತ್ತಿದೆ.

ರಾಜಧಾನಿಯ ಕೆಲವು ಭಾಗಗಳು ಹೊಗೆಯಿಂದ ಕೂಡಿದ್ದವು, ದೆಹಲಿ-ಎನ್‌ಸಿಆರ್ ಪ್ರತಿ ಚಳಿಗಾಲದಲ್ಲೂ ಈ ಸಮಸ್ಯೆ ಎದುರಿಸು ತ್ತದೆ. ನೆರೆಯ ರಾಜ್ಯಗಳಾದ ಪಂಜಾಬ್ ಮತ್ತು ಹರಿಯಾಣಗಳಲ್ಲಿ ಕೃಷಿ ತ್ಯಾಜ್ಯ ಸುಡುವಿಕೆಯಿಂದ ಉಲ್ಬಣಗೊಂಡಿದೆ.

Leave a Reply

Your email address will not be published. Required fields are marked *