-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಬ್ಲೇಜರ್ ಸ್ಕರ್ಟ್ ಫ್ಯಾಷನ್ ಈ ಸೀಸನ್‌ಗೆ ಎಂಟ್ರಿ ನೀಡಿದೆ. ಸೆಲೆಬ್ರೆಟಿ ಲುಕ್ (Celebrity Look) ನೀಡುವ ನಾನಾ ಬಗೆಯ ಬ್ಲೇಜರ್ ಸ್ಕರ್ಟ್ ಫ್ಯಾಷನ್ (Blazer Skirt Fashion), ಇದೀಗ ನಾನಾ ರೂಪದಲ್ಲಿ ಮರಳಿದ್ದು, ಮಾನಿನಿಯರನ್ನು ಆಕರ್ಷಿಸಿದೆ. ವಿಭಿನ್ನ ಲುಕ್ ನೀಡುವ ಇದು ಇಂಡೋ-ವೆಸ್ಟರ್ನ್ ಫ್ಯಾಷನ್ ಕೆಟಗರಿಗೆ ಸೇರಿದೆ. “ಬ್ಲೇಜರ್ ಎಂದಾಕ್ಷಣಾ ವೆಸ್ಟರ್ನ್ ಲುಕ್ ಗ್ಯಾರಂಟಿ ಎಂದು ಎಲ್ಲರೂ ಅಂದುಕೊಳ್ಳುವುದು ಸಹಜ. ಆದರೆ, ಇದರೊಂದಿಗೆ ಮ್ಯಾಚ್ ಮಾಡುವ ಸ್ಕರ್ಟ್ ಅದರಲ್ಲೂ ರಫಲ್, ವ್ರಿಂಕಲ್, ಫ್ಲೀಟ್ ಡ್ರೇಪ್ ಆಗಿರುವಂತಹ ಸ್ಕರ್ಟ್‌ಗಳು ಪಕ್ಕಾ ಇಂಡಿಯನ್ ಲುಕ್ ನೀಡುತ್ತವೆ. ಬ್ಲೇಜರ್ ಹಾಗೂ ಸ್ಕರ್ಟ್‌ನ ಸಮಾಗಮವೇ ಈ ಬ್ಲೇಜರ್ ಸ್ಕರ್ಟ್ ಫ್ಯಾಷನ್” ಎನ್ನುತ್ತಾರೆ ಫ್ಯಾಷನ್ ಡಿಸೈನರ್ ಜಿಯಾ.
ಟ್ರೆಂಡಿಯಾಗಿರುವ ಬ್ಲೇಜರ್ ಸ್ಕರ್ಟ್ಸ್
ಈ ಸೀಸನ್‌ನಲ್ಲಿ ನಾನಾ ಬಗೆಯ ಬ್ಲೇಜರ್ ಸ್ಕರ್ಟ್‌ಗಳು ಮಾರುಕಟ್ಟೆಯಲ್ಲಿ ದೊರೆಯುತ್ತಿವೆ. ಅವುಗಳಲ್ಲಿ ಇದೀಗ ಬ್ಲೇಜರ್ ಡ್ರೇಪ್ಡ್ ಸ್ಕರ್ಟ್, ಬ್ಲೇಜರ್ ರಫಲ್ ಸ್ಕರ್ಟ್, ಬ್ಲೇಜರ್ ಅಸ್ಸೆಮ್ಮಿಟ್ರಿಕಲ್ ಸ್ಕರ್ಟ್, ಬ್ಲೇಜರ್ ಪೆನ್ಸಿಲ್ ಸ್ಕರ್ಟ್, ಬ್ಲೇಜರ್ ಮಿಡಿ ಸ್ಕರ್ಟ್, ಬ್ಲೇಜರ್ ಮಿನಿ ಸ್ಕರ್ಟ್‌ಗಳು ಟ್ರೆಂಡಿಯಾಗಿವೆ.
ಬ್ಲೇಜರ್ ಸ್ಕರ್ಟ್ ಕೋ -ಆರ್ಡ್ ಸೆಟ್
ಬ್ಲೇಜರ್ ಟಾಪ್ ಹಾಗೂ ಡ್ರೇಪ್ಡ್ ಸ್ಕರ್ಟ್ ಕೋ ಆರ್ಡ್ ಸೆಟ್‌ಗಳು ಈ ಸೀಸನ್‌ನ ಟಾಪ್ ಲಿಸ್ಟ್‌ನಲ್ಲಿ ಇವೆ. ಈ ಸೀಸನ್ ಕಂಪ್ಲೀಟ್ ಕೋ ಆರ್ಡ್ ಸೆಟ್ ಫ್ಯಾಷನ್ ಕಾಲ. ಯಾವ ಬಗೆಯ ಡ್ರೆಸ್‌ಗಳನ್ನು ನೋಡಿದರೂ ಮಾನೋಕ್ರೋಮ್ ಕೋ ಆರ್ಡ್ ಸೆಟ್ ವಿನ್ಯಾಸದಲ್ಲಿ ನೋಡಬಹುದು. ಇದಕ್ಕೆ ಪೂರಕ ಎಂಬಂತೆ, ಬ್ಲೇಜರ್ ಸ್ಕರ್ಟ್ ಕೋ ಆರ್ಡ್ ಸೆಟ್ ಫ್ಯಾಷನ್ ಕೂಡ ಸೆಲೆಬ್ರಿಟಿ ಲುಕ್ ಪ್ರಿಯರನ್ನು ಸೆಳೆದಿವೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಬ್ಲೇಜರ್ ಸ್ಕರ್ಟ್ ಸ್ಟೈಲಿಂಗ್‌ಗೆ 5 ಸಿಂಪಲ್ ಟಿಪ್ಸ್
ಆದಷ್ಟೂ ಮರು ಬಳಕೆ ಮಾಡುವಂತಹ ಬ್ಲೇಜರ್ ಸ್ಕರ್ಟ್ ಖರೀದಿಸಿ.
ನಿಯಾನ್ ಶೇಡ್‌ನವು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ.
ಬ್ಲ್ಯಾಕ್ ಶೇಡ್‌ನ ಬ್ಲೇಜರ್ ಸ್ಕರ್ಟ್ ಈ ಸೀಸನ್‌ನಲ್ಲಿಲ್ಲ.
ಇಂಡೋ-ವೆಸ್ಟರ್ನ್ ಲುಕ್ ನೀಡಿ.
ಹೈ ಹೀಲ್ಸ್ ಮ್ಯಾಚ್ ಮಾಡಿದಲ್ಲಿ ಈ ಉಡುಪಲ್ಲಿ ಉದ್ದನಾಗಿ ಕಾಣಿಸಬಹುದು.
(ಲೇಖಕಿ ಫ್ಯಾಷನ್ ಪತ್ರಕರ್ತೆ)