-ಶೀಲಾ ಸಿ. ಶೆಟ್ಟಿ, ಬೆಂಗಳೂರು
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಧರಿಸಿದ ಸಾಲಿಡ್ ಬೂಟ್‌ಕಟ್ ಪ್ಯಾಂಟ್ ಕೋ ಆರ್ಡ್ ಸೆಟ್ ಇದೀಗ ಯುವತಿಯರನ್ನು ಆಕರ್ಷಿಸಿದೆ. ಅದರಲ್ಲೂ ಕಾರ್ಪೋರೇಟ್ ಕ್ಷೇತ್ರದ ಯುವತಿಯರು, ಈ ಔಟ್‌ಫಿಟ್‌ಗೆ ಫಿದಾ (Star Fashion) ಆಗಿದ್ದಾರೆ. ನೋಡಲು ಸಿಂಪಲ್ ಹಾಗೂ ಎಲಿಗೆಂಟ್ ಲುಕ್ ನೀಡುವ ಈ ಔಟ್‌ಫಿಟ್, ಯಾವುದೇ ವಿಶೇಷ ವಿನ್ಯಾಸ ಹೊಂದಿರದಿದ್ದರೂ, ಹೆಚ್ಚೆನೋ ವಿನ್ಯಾಸವಿಲ್ಲದಿದ್ದರೂ, ಬೇಡಿಕೆ ಸೃಷ್ಟಿಸಿಕೊಂಡಿದೆ.
ಬೂಟ್ ಕಟ್ ಪ್ಯಾಂಟ್ ಕೋ ಆರ್ಡ್ ಸೆಟ್
ಅಂದಹಾಗೆ, ಸಮಂತಾ ಧರಿಸಿದ ಈ ಔಟ್‌ಫಿಟ್ ಹೊಸ ಆವಿಷ್ಕಾರವೇನಲ್ಲ. ಆದರೆ, ಕೆಲವೊಮ್ಮೆ ಸೆಲೆಬ್ರಿಟಿಗಳು ಧರಿಸಿದ ಸಿಂಪಲ್ ಉಡುಗೆಗಳು ಬಹುಬೇಗ ಟ್ರೆಂಡಿಯಾಗುತ್ತವೆ. ಫೋಟೋಗಳು ಬಿಡುಗಡೆಯಾದ ತಕ್ಷಣ ಫ್ಯಾಷನ್‌ಲೋಕದಲ್ಲಿ ಹಂಗಾಮ ಎಬ್ಬಿಸುತ್ತವೆ. ಈ ಔಟ್‌ಫಿಟ್ ಹಂಗಾಮ ಎಬ್ಬಿಸದಿದ್ದರೂ, ಈಗಾಗಲೇ ಆನ್‌ಲೈನ್ ಶಾಪ್‌ಗಳಲ್ಲಿ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ ಎನ್ನುತ್ತಾರೆ ಫ್ಯಾಷನ್ ವಿಶ್ಲೇಷಕರು. ಇನ್ನು, ತೀರಾ ಸಿಂಪಲ್ ಆಗಿ ಕಾಣಿಸುವ ಈ ಬೂಟ್‌ಕಟ್ ಪ್ಯಾಂಟ್ ಕೋ ಆರ್ಡ್ ಸೆಟ್‌ಗಳು ಬೋಟಿಕ್‌ಗಳಲ್ಲೂ ಸಿದ್ಧಗೊಳ್ಳುತ್ತಿವೆಯಂತೆ ಹಾಗೆನ್ನುತ್ತಾರೆ ಡಿಸೈನರ್ ಟೀನಾ.
ಏನಿದು ಬೂಟ್ ಕಟ್/ವೈಡ್ ಲೆಗ್ ಪ್ಯಾಂಟ್ ಕೋ ಆರ್ಡ್?
ಈ ಸೀಸನ್‌ನಲ್ಲಿ ಕೋ ಆರ್ಡ್ ಸೆಟ್ ಫ್ಯಾಷನ್ ಯಾವ ಮಟ್ಟದಲ್ಲಿ ಚಾಲ್ತಿಯಲ್ಲಿದೆ ಎಂದರೆ, ಎಲ್ಲಾ ಬಗೆಯ ಉಡುಪುಗಳು ಈ ಫ್ಯಾಷನ್‌ನಲ್ಲಿ ಟ್ರೆಂಡಿಯಾಗಿವೆ. ಎಲ್ಲರಿಗೂ ಗೊತ್ತಿರುವಂತೆ ಇದು ರೆಟ್ರೊ ಸ್ಟೈಲ್ ಉಡುಪು. ಇದೀಗ ಈ ಪ್ಯಾಂಟನ್ನು ಮೊದಲಿಗಿಂತ ಕೊಂಚ ಸ್ಲೀಕಾಗಿ ವಿನ್ಯಾಸಗೊಳಿಸಲಾಗಿದೆ. ಸ್ಲಿಮ್ ಫಿಟ್ ಟಚ್ ನೀಡಲಾಗಿದೆ. ಒಂದೇ ಬಣ್ಣದಲ್ಲಿ ಸೆಟ್ ರೂಪಿಸಲಾಗಿದೆ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.
ಈ ಸುದ್ದಿಯನ್ನೂ ಓದಿ | Blazer Skirt Fashion: ಸೀಸನ್ ಫ್ಯಾಷನ್‌ಗೆ ಎಂಟ್ರಿ ನೀಡಿದ ಬ್ಲೇಜರ್ ಸ್ಕರ್ಟ್ ಫ್ಯಾಷನ್!
ಇನ್ನು, ನಟಿ ಸಮಂತಾ ರುತ್ ಪ್ರಭು ಅವರಿಗೆ ಈ ಔಟ್‌ಫಿಟ್ ಪರ್ಫೆಕ್ಟ್ ಫಿಟ್ ಆಗಿದೆ ಎನ್ನುವ ಸ್ಟೈಲಿಸ್ಟ್ ರಿಯಾ, ಈ 7 ಸಿಂಪಲ್ ಟಿಪ್ಸ್ ಫಾಲೋ ಮಾಡಿದಲ್ಲಿ ನೀವೂ ಕೂಡ ಅವರಂತೆಯೇ ಕಾಣಬಹುದು ಎನ್ನುತ್ತಾರೆ.
ಬಾಡಿ ಮಾಸ್ ಇಂಡೆಕ್ಸ್‌ಗೆ ತಕ್ಕಂತೆ ವಿನ್ಯಾಸವಿರಲಿ.
ನಿಮ್ಮ ಎತ್ತರಕ್ಕೆ ತಕ್ಕಂತೆ ಬೂಟ್‌ಕಟ್ ಉದ್ದ ಇರಬೇಕು.
ಆದಷ್ಟೂ ಮಂಡಿ ಕೆಳಗೆ ಬೂಟ್‌ಕಟ್ ಡಿಸೈನ್ ಇದ್ದರೇ ಉತ್ತಮ.
ತೆಳ್ಳಗೆ ಕಾಣಿಸಲು ಸಾಫ್ಟ್ ಫ್ಯಾಬ್ರಿಕ್ ಆಯ್ಕೆ ಮಾಡಿ.
ಟ್ರೆಂಡಿಯಾಗಿರುವ ಸಾಲಿಡ್ ಶೇಡ್ ಚೂಸ್ ಮಾಡಿ.
ಡಿಸೈನರ್ ಬಳಿ ಹೊಲೆಸುವಾಗ ನಿಮ್ಮ ಪರ್ಸನಾಲಿಟಿಗೆ ಮ್ಯಾಚ್ ಆಗುವಂತಹ ಟಾಪ್ ಡಿಸೈನ್ ತಿಳಿಸಿ.
ಹೈ ಹೀಲ್ಸ್ ಪಾದರಕ್ಷೆಗಳು ಈ ಔಟ್‌ಫಿಟ್‌ಗೆ ಧರಿಸಿ.
(ಲೇಖಕಿ: ಫ್ಯಾಷನ್ ಪತ್ರಕರ್ತೆ)