Friday, 22nd November 2024

Expensive Condom: ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಇದು! ಇದರ ದರ ಎಷ್ಟಿರಬಹುದು ಊಹಿಸಿ!

Expensive Condom

ಲೈಂಗಿಕ ಸುರಕ್ಷತೆಗಾಗಿ ಕಾಂಡೋಮ್‌ (Expensive Condom) ಅನ್ನು ಬಳಸುತ್ತಾರೆ. ಇದು ಅನೇಕ ಲೈಂಗಿಕ ಕಾಯಿಲೆಗಳಿಂದ ಕಾಪಾಡುವುದಲ್ಲದೇ, ಅನಗತ್ಯ ಗರ್ಭ ಧರಿಸುವುದು ತಡೆಯುತ್ತದೆ. ಹಾಗಾಗಿ ಮಕ್ಕಳನ್ನು ಬಯಸದೆ ಇರುವ ಪ್ರತಿಯೊಬ್ಬ ದಂಪತಿ ಲೈಂಗಿಕತೆಯ ವೇಳೆ ಕಾಂಡೋಮ್‌ ಅನ್ನು ಬಳಸುತ್ತಾರೆ. ಸಾಮಾನ್ಯವಾಗಿ ನಾವು ಬಳಸುವಂತಹ ಕಾಂಡೋಮ್‌ ಬೆಲೆ 100-200 ಆಗಿರಬಹುದು. ಆದರೆ ಇಲ್ಲೊಂದು ಕಾಂಡೋಮ್‌ ಬೆಲೆ ಕೇಳಿದ್ರೆ ನೀವು ಶಾಕ್‌ ಆಗ್ತೀರಾ. ಹೌದು 200 ವರ್ಷಗಳಷ್ಟು ಹಳೆಯದಾದ ಕಾಂಡೋಮ್ ಇತ್ತೀಚೆಗೆ ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಎಂದು ಗುರುತಿಸಲ್ಪಟ್ಟಿದೆ. ಯಾಕೆಂದರೆ ಇದನ್ನು ಇತ್ತೀಚೆಗೆ  44,000 ರೂ.ಗೆ ಮಾರಾಟ ಮಾಡಲಾಗಿದೆ.

ಆಧುನಿಕ ಲ್ಯಾಟೆಕ್ಸ್ ಕಾಂಡೋಮ್‌ಗಳಿಗಿಂತ ಭಿನ್ನವಾಗಿರುವ ಈ ಐತಿಹಾಸಿಕ ಗರ್ಭನಿರೋಧಕ ಕಾಂಡೋಮ್‌ ಅನ್ನು  ಕುರಿ ಕರುಳಿನಿಂದ ತಯಾರಿಸಲಾಗಿದೆಯಂತೆ. ಇದು 18 ಅಥವಾ 19ನೇ ಶತಮಾನದಷ್ಟು ಹಿಂದಿನದು ಎನ್ನಲಾಗಿದೆ. ಆ ಕಾಲದಲ್ಲಿ, ಕುರಿ, ಹಂದಿ, ಕರು ಮತ್ತು ಮೇಕೆಗಳಂತಹ ಪ್ರಾಣಿಗಳ ಕರುಳಿನಿಂದ ಕಾಂಡೋಮ್‌ಗಳನ್ನು ತಯಾರಿಸುತ್ತಿದ್ದರು. ಆದರೆ ಇದು ತುಂಬಾ ದುಬಾರಿಯಾಗಿದ್ದ ಕಾರಣ ಈ ಕಾಂಡೋಮ್‌ಗಳು ಶ್ರೀಮಂತರಿಗೆ ಮಾತ್ರ ಲಭ್ಯವಿರುತ್ತಿದ್ದವು. ಹಾಗಾಗಿ ಇವು ಐಷಾರಾಮಿ ಕಾಂಡೋಮ್‌ಗಳೆಂದು ಕರೆಸಿಕೊಳ್ಳುತ್ತಿದ್ದವು.

19ನೇ ಶತಮಾನದಲ್ಲಿ ಅಗ್ಗದ ರಬ್ಬರ್ ಕಾಂಡೋಮ್‌ಗಳು ವ್ಯಾಪಕವಾಗಿ ಲಭ್ಯವಾದ ಕಾರಣ ಪ್ರಾಣಿಗಳ ಕರುಳುಗಳನ್ನು ಬಳಸಿ ಕಾಂಡೋಮ್‌ ತಯಾರಿಸುವುದನ್ನು ನಿಲ್ಲಿಸಲಾಗಿದೆ. ಆದರೆ 19 ಸೆಂ.ಮೀ (7 ಇಂಚು) ಅಳತೆಯ ಕಾಂಡೋಮ್ ಅನ್ನು ಫ್ರಾನ್ಸ್‌ನಲ್ಲಿ ಕಂಡುಹಿಡಿಯಲಾಗಿದೆ ಮತ್ತು ನಂತರ ಅದನ್ನು ಹರಾಜು ಹಾಕಲಾಗಿದೆ. ಇದನ್ನು ಬಿಡ್ ಆಮ್ಸ್ಟರ್ಡ್ಯಾಮ್  ಹರಾಜಿನ ಮೂಲಕ ಖರೀದಿಸಿದ್ದಾರೆ.

ಇದನ್ನೂ ಓದಿ: ಬ್ರಾ ಧರಿಸಿ ‌ನಡುರಸ್ತೆಯಲ್ಲಿ ತಿರುಗಾಡಿದ ಯುವತಿ; ಎದೆಗಾರಿಕೆ ಅಂದರೆ ಇದು ಎಂದ ನೆಟ್ಟಿಗರು!

ಹರಾಜು ವೇದಿಕೆಯಾದ ಕ್ಯಾಟವಿಕಿಯಲ್ಲಿ ಕುರಿಯ ಕರುಳಿನಿಂದ ತಯಾರಿಸಿದ ಈ ಪ್ರಾಚೀನ ಕಾಂಡೋಮ್ ಎಲ್ಲರ ಗಮನ ಸೆಳೆದಿದೆ. ಹರಾಜಿನ ಸಮಯದಲ್ಲಿ, ವಿವಿಧ ವಸ್ತುಸಂಗ್ರಹಾಲಯಗಳಿಗೆ ಈ ಕಾಂಡೋಮ್‌ ಖರೀದಿಸಲು ಸಿಕ್ಕಾಪಟ್ಟೆ ಆಸಕ್ತಿ ಇತ್ತು. ಅವರು ತಮ್ಮ ವಸ್ತು ಸಂಗ್ರಹಾಲಯದಲ್ಲಿ ಈ ವಿಶಿಷ್ಟ ಕಾಂಡೋಮ್‌ ಅನ್ನು ಪ್ರದರ್ಶಿಸಲು ಉತ್ಸುಕರಾಗಿದ್ದರು. ಆದರೆ ಕೊನೆಗೆ ಇದು ಬಿಡ್ ಆಮ್ಸ್ಟರ್ಡ್ಯಾಮ್ ಪಾಲಾಗಿದೆ ಎನ್ನಲಾಗಿದೆ.