Sunday, 24th November 2024

Riya Barde : ಭಾರತದಲ್ಲಿ ಅಕ್ರಮವಾಗಿ ನೆಲೆಸಿದ್ದ ವಯಸ್ಕರ ಸಿನಿಮಾ ನಟಿ ರಿಯಾ ಬಾರ್ಡೆ ಬಂಧನ

Riya Barde Arrest

ಮಹಾರಾಷ್ಟ್ರ:  ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಆರೋಪದ ಮೇಲೆ ವಯಸ್ಕರ ಚಿತ್ರದ ಸ್ಟಾರ್‌ ನಟಿ ರಿಯಾ ಬಾರ್ಡೆಯನ್ನು (Riya Barde) ಪೊಲೀಸರು ಬಂಧಿಸಿದ್ದಾರೆ. ಆಕೆ ಬಾಂಗ್ಲಾದೇಶದ ನಿವಾಸಿಯಾಗಿದ್ದು, ನಕಲಿ ದಾಖಲೆಗಳ ಆಧಾರದ ಮೇಲೆ ತನ್ನ ಕುಟುಂಬದೊಂದಿಗೆ ಭಾರತದಲ್ಲಿ ವಾಸವಾಗಿದ್ದಳು. ಹಾಗಾಗಿ  ದಾಖಲೆಗಳನ್ನು ಪರಿಶೀಲಿಸಿದ ಮಹಾರಾಷ್ಟ್ರ ಪೊಲೀಸರಿಗೆ ಅದು ನಕಲಿ ಎಂದು ತಿಳಿದ ತಕ್ಷಣ ರಿಯಾ ಬಾರ್ಡೆಯನ್ನು ಬಂಧಿಸಿದ್ದಾರೆ. ಹಾಗೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ  ಆಕೆಯ ತಾಯಿ, ಸಹೋದರಿ, ಸಹೋದರ ಮತ್ತು ತಂದೆಯನ್ನು ಪೊಲೀಸರು ಹುಡುಕುತ್ತಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಅಡಲ್ಟ್‌ ಇಂಡಸ್ಟ್ರಿಯಲ್ಲಿ ಫೇಮಸ್‌ ಆಗಿದ್ದ ರಿಯಾ ಬಾರ್ಡೆ ಅವಳನ್ನು ಅರೋಹಿ ಬಾರ್ಡೆ ಮತ್ತು ಬನ್ನಾ ಶೇಖ್ ಎಂದು ಕರೆಯಲಾಗುತ್ತಿತ್ತು. ರಿಯಾ ಬಾರ್ಡೆಯನ್ನು ಮಹಾರಾಷ್ಟ್ರ ಪೊಲೀಸರು ರಾಜ್ಯದ ಉಲ್ಲಾಸ್‌ ನಗರದಿಂದ ಬಂಧಿಸಿದ್ದಾರೆ. ಹಾಗೇ ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 420, 465, 468, 479, 34 ಮತ್ತು 14 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಿಯಾಳ ಸ್ನೇಹಿತರಲ್ಲಿ ಒಬ್ಬರಾದ ಪ್ರಶಾಂತ್ ಮಿಶ್ರಾ ಈ ವಿಷಯವನ್ನು ವರದಿ ಮಾಡಿದ್ದು, ರಿಯಾ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅವರ ದೂರಿನ ಆಧಾರದ ಮೇರೆಗೆ ಪೊಲೀಸರು ಪ್ರಕರಣದ ತನಿಖೆ ನಡೆಸಿ ಆಕೆಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆಗ ಆ ದಾಖಲೆಗಳು ನಕಲಿ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ಪತ್ನಿ ಬೀಚ್‌ನಲ್ಲಿ ಬಿಕಿನಿ ಧರಿಸಿ ಓಡಾಡಲೆಂದು 418 ಕೋಟಿ ರೂ. ಕೊಟ್ಟು ಇಡೀ ದ್ವೀಪವನ್ನೇ ಖರೀದಿಸಿದ ಪತಿ!

ರಿಯಾ ಬಾರ್ಡೆಯ ತಾಯಿ ಮೂಲತಃ ಬಾಂಗ್ಲಾದೇಶದವರಾಗಿದ್ದು, ಮಹಾರಾಷ್ಟ್ರದ ಅಮರಾವತಿಗೆ ಸೇರಿದ ಅರವಿಂದ್ ಬಾರ್ಡೆ (ರಿಯಾ ಅವರ ತಂದೆ) ಅವರನ್ನು ವಿವಾಹವಾಗಿದ್ದರು. ನಂತರ, ಅವರು ಭಾರತೀಯರು ಎಂದು ಸಾಬೀತುಪಡಿಸಲು ನಕಲಿ ದಾಖಲೆಗಳನ್ನು ಸಲ್ಲಿಸಿದರು. ಆಕೆಯ ಕುಟುಂಬ ಸದಸ್ಯರನ್ನು ಅಂಜಲಿ ಬಾರ್ಡೆ ಅಲಿಯಾಸ್ ರೂಬಿ ಶೇಖ್ (ತಾಯಿ), ಅರವಿಂದ್ ಬಾರ್ಡೆ (ತಂದೆ), ರವೀಂದ್ರ ಅಲಿಯಾಸ್ ರಿಯಾಜ್ ಶೇಖ್ (ಸಹೋದರ) ಮತ್ತು ರಿತು ಅಲಿಯಾಸ್ ಮೋನಿ ಶೇಖ್ (ಸಹೋದರಿ) ಎಂದು ಗುರುತಿಸಲಾಗಿದೆ.

ಆಕೆಯ ಪೋಷಕರು ಪ್ರಸ್ತುತ ಕತಾರ್‌ನಲ್ಲಿದ್ದಾರೆ ಎಂದು ವರದಿಯಾಗಿದೆ. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆಯೂ ಕೂಡ ರಿಯಾ ಬಾರ್ಡೆಯನ್ನು ಬಂಧಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.