Friday, 22nd November 2024

Devara Movie Review: ಜ್ಯೂ.ಎನ್‌ಟಿಆರ್‌ ಅಭಿಮಾನಿಗಳಿಗೆ ಹಬ್ಬ, ಜಾನ್ವಿ ಕಪೂರ್‌ ಫ್ಯಾನ್‌ಗಳಿಗೆ ನಿರಾಶೆ

Devara movie Review

ಜೂನಿಯರ್ ಎನ್‌ಟಿಆರ್ (Junior NTR) ಮತ್ತು ಜಾನ್ವಿ ಕಪೂರ್ (Janhvi Kapoor) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಬಹು ನಿರೀಕ್ಷಿತ ಚಿತ್ರ ‘ದೇವರ: ಭಾಗ 1’ (Devara Movie Review) ತೆರೆಗೆ ಬಂದಿದೆ. ಶಿವ ಕೊರಟಾಲ ನಿರ್ದೇಶನದ ಈ ಹೈ-ಬಜೆಟ್ ಎಂಟರ್‌ಟೈನರ್ ಸಾಕಷ್ಟು ಸಕಾರಾತ್ಮಕ ಹವಾ ಸೃಷ್ಟಿಸಿದೆ.

ಚಿತ್ರದ ಕಥೆ ಕರಾವಳಿ ಗ್ರಾಮವೊಂದರಲ್ಲಿ ನಡೆಯುತ್ತದೆ. ರತ್ನಗಿರಿಯಲ್ಲಿ ಎಂಬ ಊರಿನ ಗಣ್ಯರಾದ ದೇವರ (ಜೂನಿಯರ್ ಎನ್‌ಟಿಆರ್), ಭೈರಾ (ಸೈಫ್ ಅಲಿ ಖಾನ್), ರಾಯಪ್ಪ (ಶ್ರೀಕಾಂತ್) ಮತ್ತು ಇತರರು ಮುರುಗ (ಮುರಳಿ ಶರ್ಮಾ) ಎಂಬಾತನಿಗೆ ಹಡಗುಗಳಲ್ಲಿ ಸರಕುಗಳ ಕಳ್ಳಸಾಗಣೆ ಮಾಡಲು ಸಹಾಯ ಮಾಡುತ್ತಾರೆ. ಇದು ತಪ್ಪು ಎಂದು ಅರಿತುಕೊಂಡ ದೇವರಾ ಇದರಿಂದ ಹಿಂದೆ ಸರಿಯುತ್ತಾನೆ. ಆದರೆ ಇದನ್ನು ಒಪ್ಪದ ಭೈರಾ ದೇವರನನ್ನು ಕೊಲ್ಲಲು ಯೋಜಿಸುತ್ತಾನೆ. ದೇವರ ಕಣ್ಮರೆಯಾಗುತ್ತಾನೆ. ಹನ್ನೆರಡು ವರ್ಷಗಳು ಕಳೆಯುತ್ತವೆ. ಭೈರಾ ರತ್ನಗಿರಿಯನ್ನು ಆಳುತ್ತಾನೆ. ದೇವರನನ್ನು ಹುಡುಕಲು ಮತ್ತು ಕೊಲ್ಲಲು ಬೈರಾ ನಿರ್ಧರಿಸುತ್ತಾನೆ. ದೇವರನ ಮಗ ವರಾ, ಭೈರಾ ಜೊತೆ ಸೇರುತ್ತಾನೆ. ಉಂದೇನಾಗುತ್ತದೆ, ದೇವರ ಸಿಗುತ್ತಾನಾ? ಮಗ ತಂದೆಯನ್ನು ಕೊಲ್ಲುತ್ತಾನಾ? ದೇವರ ಎಲ್ಲಿದ್ದಾನೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸುತ್ತ ಸಿನಿಮಾ ಸಾಗುತ್ತದೆ.

ಜ್ಯೂನಿಯರ್ ಎನ್ಟಿಆರ್ ʼದೇವರ: ಭಾಗ 1ʼರಲ್ಲಿ ಉತ್ತಮ ಅಭಿನಯದೊಂದಿಗೆ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಎರಡು ವಿಭಿನ್ನ ಪಾತ್ರಗಳಲ್ಲಿ ಪ್ರೇಕ್ಷಕರನ್ನು ಆಕರ್ಷಿಸುತ್ತಾರೆ- ದೇವರ ಮತ್ತು ವರ. ದೇವರನಾಗಿ ನಮ್ರತೆ ಮತ್ತು ವಿನಾಶಕಾರಿತ್ವ, ವರ ಆಗಿ ಮುಗ್ಧತೆ ಮತ್ತು ಹೇಡಿತನವನ್ನು ತೋರಿಸಿದ್ದಾರೆ. ಎರಡೂ ಪಾತ್ರಗಳನ್ನು ಪರಿಣಾಮಕಾರಿಯಾಗಿ ಸಮತೋಲನಗೊಳಿಸಿದ್ದಾರೆ.

ಸೈಫ್ ಅಲಿ ಖಾನ್ ಭೈರಾ ಪಾತ್ರದಲ್ಲಿ ಮಿಂಚಿದ್ದಾರೆ. ಇದು ದೇವರ ವಿರುದ್ಧ ಸೇಡು ತೀರಿಸಿಕೊಳ್ಳುವ ಪಾತ್ರ. ಟಾಲಿವುಡ್‌ನಲ್ಲಿ ಸೈಫ್‌ಗೆ ಇದು ಚೊಚ್ಚಲ ಪ್ರವೇಶ. ಜಾನ್ವಿ ಕಪೂರ್‌ಗೆ ಹೆಚ್ಚಿನ ಅವಕಾಶವಿಲ್ಲ. ಇರುವ ಅವಕಾಶದಲ್ಲಿ ಒಳ್ಳೆಯ ಅಭಿನಯ. ಜ್ಯೂ.ಎನ್‌ಟಿಆರ್‌ನೊಂದಿದೆ ಕೆಮಿಸ್ಟ್ರಿ ಅವರ ಚೆನ್ನಾಗಿದೆ.

ಆಕ್ಷನ್ ಸೀಕ್ವೆನ್ಸ್‌ಗಳು ಅಸಾಧಾರಣವಾಗಿವೆ. ಪ್ರೇಕ್ಷಕರನ್ನು ಆಕರ್ಷಿಸುವಂತೆ, ಉತ್ಸಾಹಭರಿತ ಪ್ರತಿಕ್ರಿಯೆಗಳನ್ನು ಪ್ರಚೋದಿಸುವಂತೆ ಇವೆ. ಹಲವಾರು ಸಂಭಾಷಣೆಗಳು ದೇವರ ಪಾತ್ರವನ್ನು ಹಿಗ್ಗಿಸಿವೆ ಮತ್ತು ಮನರಂಜನೆ ಟಚ್‌ ಕೊಟ್ಟಿವೆ. ಪ್ರಕಾಶ್ ರೈ ಮುಂತಾದವರ ಪೋಷಕ ಪಾತ್ರಗಳು ಚಿತ್ರಕ್ಕೆ ಧನಾತ್ಮಕ ಕೊಡುಗೆ ನೀಡಿವೆ.

ನಿರ್ದೇಶಕ ಕೊರಟಾಲ ಶಿವ ಕೆಲವು ಭಾಗಗಳನ್ನು ಸುಧಾರಿಸಬಹುದಿತ್ತು. ವಿಶೇಷವಾಗಿ ದ್ವಿತೀಯಾರ್ಧದಲ್ಲಿ ಚಿತ್ರಕಥೆಯು ಹೆಚ್ಚು ಆಕರ್ಷಕವಾಗಿರಬಹುದಿತ್ತು. ಕೆಲವು ದೃಶ್ಯಗಳು ಪರಿಣಾಮಕಾರಿ ನಿರ್ವಹಣೆಯನ್ನು ಹೊಂದಿಲ್ಲ. ಆ ದೃಶ್ಯಗಳನ್ನು ಮತ್ತಷ್ಟು ಪರಿಣಾಮಕಾರಿ ಆಗಿಸಬಹುದಿತ್ತು. ಜಾನ್ವಿ ಕಪೂರ್ ಅವರ ಪಾತ್ರ ಕೆಲವು ದೃಶ್ಯಗಳಿಗೆ ಸೀಮಿತವಾಗಿದೆ. ಅವರ ಪ್ರತಿಭೆಯನ್ನು ಪ್ರದರ್ಶಿಸಲು ಕನಿಷ್ಠ ಅವಕಾಶವಿಲ್ಲ. ಇದು ಅವರ ಅಭಿಮಾನಿಗಳನ್ನು ನಿರಾಶೆಗೊಳಿಸಬಹುದು. ಪ್ರಕಾಶ್ ರಾಜ್ ಅಭಿನಯ ಚೆನ್ನಾಗಿದೆ. ಆದರೆ ಅವರ ಪಾತ್ರದ ಹಿನ್ನೆಲೆಯನ್ನು ಇನ್ನೂ ಅಭಿವೃದ್ಧಿಪಡಿಸಬಹುದಿತ್ತು. ಸೈಫ್ ಅಲಿ ಖಾನ್ ಪಾತ್ರ ದ್ವಿತೀಯಾರ್ಧದಲ್ಲಿ ಕಡಿಮೆ ಇದೆ. ಕ್ಲೈಮ್ಯಾಕ್ಸ್ ಥಟ್ಟನೆ ಬಂದು ಪ್ರೇಕ್ಷಕರನ್ನು ಆಘಾತಕ್ಕೆ ತಳ್ಳುತ್ತದೆ.

ಶಿವ ಕೊರಟಾಲ ಬರಹಗಾರ ಮತ್ತು ನಿರ್ದೇಶಕರಾಗಿ ಯಶಸ್ವಿಯಾಗುತ್ತಾರೆ. ಆದರೆ ಬರವಣಿಗೆಯು ಇನ್ನಷ್ಟು ಪರಿಷ್ಕರಣೆ ಪಡೆಯಬಹುದಿತ್ತು. ಕಥೆಯ ಭಾವನಾತ್ಮಕ ಆಳವನ್ನು ಹೆಚ್ಚು ಪರಿಶೋಧಿಸಬಹುದಿತ್ತು. ರತ್ನವೇಲು ಅವರ ಛಾಯಾಗ್ರಹಣ ಮತ್ತು ಅನಿರುದ್ಧ್ ರವಿಚಂದರ್ ಅವರ ಸಂಗೀತ ಅಸಾಧಾರಣವಾಗಿದ್ದು, ಒಟ್ಟಾರೆ ಸಿನಿಮಾ ಅನುಭವವನ್ನು ಹೆಚ್ಚಿಸಿದೆ.

ಇದನ್ನೂ ಓದಿ: Devara First Review: ಬಿಡುಗಡೆ ಮುನ್ನವೇ ಹೊರಬಿತ್ತು ‘ದೇವರʼ ವಿಮರ್ಶೆ; ಜೂನಿಯರ್‌ ಎನ್‌ಟಿಆರ್‌ ಚಿತ್ರ ಹೇಗಿದೆ?