Sunday, 24th November 2024

Viral Video: ನಿಲ್ಲಿಸಿದ್ದ ಕಾರಿನ ಪಕ್ಕದಲ್ಲಿ ರೊಮ್ಯಾನ್ಸ್‌ ಮಾಡಿದ ಪ್ರೇಮಿಗಳು; ವಿಲನ್‌ ಥರ ಬಂದ ಪೊಲೀಸಪ್ಪ… ಮುಂದೇನಾಯಿತು?

Viral Video

ಬೆಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳ ಸರಸ ಸಲ್ಲಾಪ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. . ಇಂದಿನ ಪ್ರೇಮಿಗಳಿಗೆ ಪ್ರಣಯದಲ್ಲಿ ತೊಡಗಿಕೊಂಡರೆ ತಮ್ಮ ಅಕ್ಕಪಕ್ಕ ಯಾರು ಇದ್ದಾರೆ ಎಂಬುದೇ ತಿಳಿಯುವುದಿಲ್ಲ. ಪ್ರೀತಿಯಲ್ಲಿ ಅಷ್ಟೊಂದು ಮಗ್ನರಾಗಿ ಹೋಗಿರುತ್ತಾರೆ. ಇತ್ತೀಚೆಗೆ ಆಂತಹ ಪ್ರೇಮಿಗಳಿಬ್ಬರು ಪಾರ್ಕ್‌ ಮಾಡಿದ್ದ ಕಾರೊಂದರ ಪಕ್ಕದಲ್ಲಿ ಕುಳಿತು ಪ್ರಣಯದಲ್ಲಿ ತೊಡಗಿದ್ದಾಗ ಕಾರಿಂದ ಇಳಿದು ಬಂದ ವ್ಯಕ್ತಿಯನ್ನು ನೋಡಿ ದಂಗಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ (Viral Video)ಆಗಿದ್ದು, ವಿಡಿಯೊ ನೋಡಿದವರು ಪ್ರೇಮಿಗಳ ಪರಿಸ್ಥಿತಿ ಕಂಡು ಹೊಟ್ಟೆ ಹು‍ಣ್ಣಾಗುವಷ್ಟು ನಕ್ಕಿದ್ದಾರೆ.

ರಾಗಿಣಿ ಸಿಂಗ್ ಎಂಬುವವರು ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿದ ಈ ವಿಡಿಯೊದಲ್ಲಿ ಯುವ ಪ್ರೇಮಿಗಳಿಬ್ಬರು ನಿಲ್ಲಿಸಿದ್ದ ಕಾರಿನ ಹಿಂದೆ ಪ್ರಣಯದಲ್ಲಿ ತೊಡಗಿದ್ದಾರೆ. ಆದರೆ ಅವರಿಗೆ ಕಾರಿನ ಒಳಗೆ ಯಾರಿದ್ದಾರೆ ಎಂಬುದು ಸಹ ತಿಳಿದಿಲ್ಲ.  ಅವರು ಒಬ್ಬರಿಗೊಬ್ಬರು ಕಿಸ್‌ ಮಾಡುತ್ತಾ ತಮ್ಮ ಖಾಸಗಿ ಕ್ಷಣದಲ್ಲಿ ನಿರತರಾಗಿದ್ದಾಗ ಅಲ್ಲಿ ಅನಿರೀಕ್ಷಿತವಾದದ್ದು ಸಂಭವಿಸಿದೆ. ಅದೇನೆಂದರೆ ಇದ್ದಕ್ಕಿದ್ದಂತೆ  ಕಾರಿನ ಒಳಗಿನಿಂದ ಪೊಲೀಸ್ ಅಧಿಕಾರಿಯೊಬ್ಬರು ಇಳಿದಿದ್ದಾರೆ. ಇದನ್ನು ಕಂಡು ಹುಡುಗ ಆಘಾತಕ್ಕೊಳಗಾಗಿದ್ದಾನೆ.

ಖುಷಿಯ ಕ್ಷಣದಲ್ಲಿ ತೊಡಗಿದ್ದ ಹುಡುಗ ಪೊಲೀಸ್‌ ಕಂಡು ಒಮ್ಮೆಲೆ ಆತನ ಇಡೀ ದೇಹ ಬೆವರಿದೆ. ಆದರೆ ಅಷ್ಟೇ ದಿಗ್ಭ್ರಮೆಗೊಂಡಿದ್ದ ಹುಡುಗಿ ಮಾತ್ರ ಹುಡುಗನ ಪರಿಸ್ಥಿತಿ ಕಂಡು ನಗಲು ಶುರುಮಾಡಿದ್ದಾಳೆ. ಪೊಲೀಸರು ಹುಡುಗನನ್ನು ತರಾಟೆಗೆ ತೆಗೆದುಕೊಂಡಿದ್ದು, ಅದನ್ನು ಹಾಸ್ಯಮಯವಾಗಿ ವಿಡಿಯೊದಲ್ಲಿ ತೋರಿಸಿದ್ದಾರೆ.

ಈ ವಿಡಿಯೊಗೆ ಸಾವಿರಾರು ವೀವ್ಸ್‌ ಬಂದಿದೆ ಮತ್ತೆ ಅನೇಕರು ಇದನ್ನು  ಶೇರ್‌ ಕೂಡ ಮಾಡಿದ್ದಾರೆ. ಪ್ರೇಮಿಗಳು ತಮ್ಮ ಸುತ್ತಮುತ್ತಲು ಗಮನಿಸದೆ ಈ ಬಗ್ಗೆ ನಿರ್ಲಕ್ಷ್ಯ ತೋರಿದ್ದಕ್ಕಾಗಿ ಹಾಗೂ ಸರಿಯಾದ ಸಮಯಕ್ಕೆ ಹೊರಗೆ ಬಂದ ಅಧಿಕಾರಿಯನ್ನು ಹೊಗಳುವ ಮೂಲಕ ಜನರು ಚರ್ಚೆ ಶುರುಮಾಡಿದ್ದಾರೆ.  “ಕೆಟ್ಟ ಸಮಯದ ಬಗ್ಗೆ ಮಾತನಾಡಿ!” ಎಂದು ಒಬ್ಬ ಬಳಕೆದಾರರು ಕಾಮೆಂಟ್ ಮಾಡಿದರೆ, ಇನ್ನೊಬ್ಬರು “ಅವರಿಗೆ ಎಚ್ಚರಿಕೆ ನೀಡಿದ್ದಾರೆ ಹೊರತು ದಂಡ ಪಾವತಿಸಲು ಹೇಳಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ವಿಶ್ವದ ಅತ್ಯಂತ ದುಬಾರಿ ಕಾಂಡೋಮ್ ಇದು! ಇದರ ದರ ಎಷ್ಟಿರಬಹುದು ಊಹಿಸಿ!

ಪ್ರೀತಿಯಲ್ಲಿ ಬಿದ್ದ ಪ್ರೇಮಿಗಳಿಗೆ ತಮ್ಮ ಸುತ್ತಮುತ್ತಲಿನ ಪ್ರಪಂಚದ ಬಗ್ಗೆ ಗಮನವಿರಬೇಕು, ಇಲ್ಲವಾದರೆ ಈ ರೀತಿ ಫಜೀತಿಗೆ ಸಿಲುಕುತ್ತಾರೆ ಎಂಬುವುದರ ಮೂಲಕ  ಈ ವಿಡಿಯೊ ಪ್ರೇಮಿಗಳಿಗೆ ಎಚ್ಚರಿಕೆ ನೀಡುತ್ತಿದೆ ಎನ್ನಲಾಗಿದೆ.