ಚಿಂಚೋಳಿ: ತಹಸೀಲ್ ಕಾರ್ಯಾಲಯದ ಮುಂದೆ ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ಮಾಡಿ, ತಾಲೂಕಿನ ಪರಿಶಿಷ್ಟ ಜಾತಿಯ ಬಡಾವಣೆಗಳ ಸಮಸ್ಯೆಗಳನ್ನು ಕೂಡಲೇ ಬಗೆಹರಿಸುವಂತೆ ಕೋರಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಅವರಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಿತು.
ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಸಿಯಲು ಕಾರಣಿ ಭೂತರನ್ನು ಕಂಡುಹಿಡಿದು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವಂತೆ ಚಿಂಚೋಳಿ ಕ್ಷೇತ್ರ ಶಿಕ್ಷಣಾ ಧಿಕಾರಿಗಳಿಗೆ ಸೂಚಿಸಿ ಕ್ರಮಕೈಗೊಳಬೇಕು.
ಫಾರ್ಮ್ ನಂಬರ್ 54 ನ್ನು ಪರಿಶೀಲನೆ ಮಾಡಿ ಪರಿಶಿಷ್ಟ ಜಾತಿಯ ಕೃಷಿ ರಹಿತ ಜನರು ಸಲ್ಲಿಸಿದವರಿಗೆ ಜಮೀನು ವಿತರಣೆ ಮಾಡಬೇಕು.
ಪರಿಶಿಷ್ಟ ಜಾತಿಯ ಬಡಾವಣೆಗೆ ಹೋಗುವ ಮುಖ್ಯರಸ್ತೆಯಲ್ಲಿ ಬರುವ ಲಂಡೇನ ನಾಲದ ಬ್ರೀಡ್ಜನ್ನು ಮೇಲ್ಮಟ ಕ್ಕೇರಿಸುವಂತೆ ಹಲವಾರು ಬಾರಿ ಮನವಿ ಮಾಡಿದರು ಸ್ಪಂದಿಸಿದ ತಾಲೂಕಾಡಳಿತದ ನಿರ್ಲಕ್ಷ್ಯತನಕ್ಕೆ ಚಿಮ್ಮನ ಚೋಡ ಗ್ರಾಮ ದಲಿತ ವ್ಯಕ್ತಿ ಮನೆಗೆ ಹೋಗುವಾಗ ಸುರಿದ ಮಳೆಗೆ ನೀರಲ್ಲಿ ಕೊಚ್ಚಿಕೊಂಡು ಮೃತಪಟ್ಟ ಬಾಬು ನೂಲ್ಕರ ರವರ ಕುಟುಂಬಕ್ಕೆ ಪರಿಹಾರ ಮತ್ತು ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು.
ಎಸ್.ಸಿ.ಪಿ- ಟಿ ಎಸ್ ಪಿ ವಿಶೇಷ ಘಟಕ ಯೋಜನೆ ಅಡಿಯಲ್ಲಿನ ಅನುದಾನವನ್ನು ಪರಿಶಿಷ್ಟ ಜಾತಿ ಜನರು ವಾಸಿಸುವ ಬಡಾವಣೆಗಳಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡಬೇಕು.
ದೋಟಿಕೋಳ, ಕನಕಪೂರ, ಗಣಾಪೂರ, ತಾಡಪಳ್ಳಿ, ಪಸ್ತಪೂರ, ಗಂಜಗಿರಿ ಗ್ರಾಮಗಳಲ್ಲಿ ಅರ್ಧಕ್ಕೆ ನಿಂತಿರುವ ಡಾ. ಬಿ. ಆರ್ ಅಂಬೇಡ್ಕರ ಭವನ ಕಾಮಗಾರಿಗಳು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿ ನಡೆಯುತ್ತಿರುವ ಅಕ್ರಮ ಮಧ್ಯ ಮಾರಾಟ ತಡೆಯಬೇಕು.
ಪುರಸಭೆ ವ್ಯಾಪ್ತಿಯಲ್ಲಿ ಬರುವ ಮತ್ತು ಗ್ರಾಮಗಳಲ್ಲಿನ ಪರಿಶಿಷ್ಟ ಜಾತಿಯ ಬಡಾವಣೆಗಳ ಅಂಗನವಾಡಿ ಕೇಂದ್ರಗಳಿಗೆ ಮತ್ತು ಸರಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಿ ಮಕ್ಕಳ ಶೈಕ್ಷಣಿಕ ಗುಣಮಟ್ಟ ಬಲಪಡಿಸಬೇಕು
ಬಿ.ಸಿ ಎಮ್. ಮೈನಾರಿಟಿ.ಸಮಾಜ ಕಲ್ಯಾಣ ಇಲಾಖೆಗಳ ವಸತಿ ನಿಲಯಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಮತ್ತು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವಂತಹ ಮಾಸಪತ್ರಿಕೆ ಹಾಗೂ ಕನ್ನಡ, ಇಂಗ್ಲಿಷ್ ದಿನಪತ್ರಿಕೆಗಳನ್ನು ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಬೇಕು.
ಐನೋಳ್ಳಿ ಮತ್ತು ಹೋಡೆಬೀರನಳ್ಳಿ ಗ್ರಾಮದ ಪರಿಶಿಷ್ಟ ಬಡಾವಣೆಗಳಲ್ಲಿ ಸಾಮೂಹಿಕ ಮಹಿಳಾ ಶೌಚಾಲಯ ನಿರ್ಮಿಸಬೇಕು.
ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಜೆಜೆಎಮ್ ಅಡಿಯಲ್ಲಿ ನಡೆದ ಕಾಮಗಾರಿಗಳಿಂದ ಪರಿಶಿಷ್ಟ ಜಾತಿಯ ಬಡಾವಣೆಗಳಲ್ಲಿ ರಸ್ತೆ ಮದ್ಯ ಅಗೆದಿರುವುದು ಮುಚ್ಚದೆಯಿರುವುದರಿಂದ ಸಾರ್ವಜನಿಕರಿಗೆ ವಯೋವೃದ್ದರಿಗೆ ಓಡಾಡಲು ಸಮಸ್ಯೆಯಾಗುತ್ತಿರುವುದರಿಂದ ಕೂಡಲೆ ಸಮಸ್ಯೆ ಬಗೆಹರಿಸಬೇಕು. ಸ್ಥಳೀಯ ಆದರ್ಶ ಶಾಲೆಯ ವಿದ್ಯಾರ್ಥಿಗಳಿಗೆ ಸಮಯಕ್ಕೆ ಅನುಗುಣವಾಗಿ ಬಸ್ ಸೌಕರ್ಯ ಕಲ್ಪಿಸಬೇಕೇನ್ನುವ ಹಕ್ಕೊತ್ತಾಯದ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿ, ವಾರದೊಳಗಡೆ ಈ ಎಲ್ಲಾ ಸಮಸೆಗಳಿಗೆ ಸಂಬಂಧಪಟ್ಟ ತಾಲೂಕಾಧಿಕಾರಿಗಳಿಗೆ ಮತ್ತು ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರಿಗೆ ಕರೆಯಿಸಿ ಸಮಾಲೋಚನೆ ಸಭೆ ನಡೆಸಬೇಕೇಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾರುತಿ ಗಂಜಗಿರಿ, ಗೌತಮ್ ಭೋಮ್ನಳ್ಳಿ, ರಾಜಶೇಖರ ಹೋಸಮನಿ, ಪಂಡರಿ ಲೋಡ್ಡನೂರ್, ಜಗನ್ನಾಥ , ರಾಮರಾವ್ , ಸತೀಷ್ ,,, ವಿಠಲ್ ಟಿಕೆ, ಗೋಪಾಲ ಗಾರಂಪಳ್ಳಿ, ಉಲ್ಲಾಸ ಕೆರೊಳ್ಳಿ, ಅಭಿಜಿತ್ ಕುಮಾರ್ ಕೊರವಿ, ಮಹೇಶ್ ಕೆಳಕೇರಿ, ಚೇತನ್ ನಿರಾಳ್ಕರ್, ಮಹೇಶಕುಮಾರ, ಉಮೇಶ್, ಕಾಶಿರಾಂ, ನಾಗಶೇನ್, ಬಾಬುರಾವ್, ಅಮೃತರಾವ್, ದೀಲಿಪಕುಮಾರ, ಪ್ರವೀಣ ಮೇತ್ರಿ, ರಾಜು, ಮೌನೇಶ್, ರವಿಕುಮಾರ ,ಮನೋಜ್ ,ಉಪಸ್ಥಿತರಿದ್ದರು.