ಬೆಂಗಳೂರು: ಕಾನ್ಪುರದ ಗ್ರೀನ್ ಪಾಕ್ ಸ್ಟೇಡಿಯಂನಲ್ಲಿ ಭಾರತ ಮತ್ತು ಬಾಂಗ್ಲಾದೇಶ (INDvsBAN) ಕ್ರಿಕೆಟ್ ತಂಡಗಳು (INDvsBAN) ಶುಕ್ರವಾರ ಅಭ್ಯಾಸ ನಡೆಸುತ್ತಿರುವ ವೇಳೆ ಬಾಂಗ್ಲಾದೇಶದ ಅಭಿಮಾನಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಬಾಂಗ್ಲಾದೇಶ ತಂಡದ ಸೂಪರ್ ಫ್ಯಾನ್ ಟೈಗರ್ ರಾಬಿ ಅವರನ್ನು ಟೀಮ್ ಇಂಡಿಯಾದ ಕೆಲವು ಅಭಿಮಾನಿಗಳು ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಮಧ್ಯಪ್ರವೇಶಿಸಿ ರಾಬಿಯನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಭಯ ತಂಡಗಳ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನ ಈ ಘಟನೆ ನಡೆದಿದೆ. ಸ್ಥಳೀಯ ಅಭಿಮಾನಿಗಳು ಮತ್ತು ರಾಬಿನ್ ನಡುವೆ ಜಗಳಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
A Kanglu Bangladeshi supporter got thrashed by Indian fans in Kanpur for using abusive words for Indian players on boundary line pic.twitter.com/OM9I9LAc4L
— Spitting Facts (@SoldierSaffron7) September 27, 2024
ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯದ ವೇಳೆ ಬಾಂಗ್ಲಾದೇಶ ಕ್ರಿಕೆಟ್ ತಂಡದ ‘ಸೂಪರ್ ಫ್ಯಾನ್’ ಟೈಗರ್ ರಾಬಿ ಅವರನ್ನು ಕೆಲವರು ಥಳಿಸಿದ್ದಾರೆ ಎಂಬುದಾಗಿ ವರದಿಯಾಗಿದೆ. ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
ತನ್ನನ್ನು ಸೂಪರ್ ಫ್ಯಾನ್ ರಾಬಿನ್ ಎಂದು ಕರೆದುಕೊಳ್ಳುವ ವ್ಯಕ್ತಿ ಈ ಘಟನೆ ನಡೆದಾಗ ಹುಲಿ ವೇಷ ಧರಿಸಿ ಸಿ ಸ್ಟ್ಯಾಂಡ್ ಬಳಿ ಕುಳಿತಿದ್ದರು. ಘಟನೆಗಳ ನಿಖರ ವಿವರ ತಿಳಿಸಲು ರಾಬಿಗೆ ಸಾಧ್ಯವಾಗಲಿಲ್ಲ. ಅವರು ಅಸ್ವಸ್ಥಗೊಂಡಿದ್ದರು ಎಂದು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ವಾಗ್ವಾದದ ಸಮಯದಲ್ಲಿ ತನ್ನ ಹೊಟ್ಟೆಗೆ ಚುಚ್ಚಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: United Nations : ವಿಶ್ವ ಸಂಸ್ಥೆಯಲ್ಲಿ ಭಾರತದ ಕಾಯಂ ಸದಸ್ಯತ್ವಕ್ಕೆ ಫ್ರಾನ್ಸ್ ಬಳಿಕ ಇದೀಗ ಬ್ರಿಟನ್ ಬೆಂಬಲ
ಅವರಿಗೆ ಯಾರು ಹೊಡೆದಿದ್ದಾರೆಯೇ ಎಂದು ನಮಗೆ ತಿಳಿದಿಲ್ಲ. ಅಭಿಮಾನಿಗಳ ಮೇಲೆ ಕಣ್ಣಿಡಲು ನಾವು ಆ ಸ್ಟ್ಯಾಂಡ್ನಲ್ಲಿ ಕಾನ್ಸ್ಟೇಬಲ್ ಒಬ್ಬರನ್ನು ನಿಯೋಜಿಸಿದ್ದೆವು. ಆದಾಗ್ಯೂ ಏನಾಗಿದೆ ಎಂಬುದು ಗೊತ್ತಾಗಲಿಲ್ಲ ಎಂದು ಅವರು ಹೇಳಿದ್ದಾರೆ.
ಆಂಬ್ಯುಲೆನ್ಸ್ ಬರಲು ಸ್ವಲ್ಪ ಸಮಯ ತೆಗೆದುಕೊಂಡಿತು. ವೈದ್ಯಕೀಯ ತಂಡವು ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.