Friday, 22nd November 2024

Storing Meat: ಮಾಂಸ ತಂದು ಫ್ರಿಜ್‌ನಲ್ಲಿ ಇಡುವಾಗ ಈ ರೂಲ್ಸ್‌ ಪಾಲಿಸಿ…

Storing Meat

ಬೆಂಗಳೂರು : ಮಾಂಸವನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದು ನಿಜ. ಮತ್ತು ಮಾಂಸದ ಅಡುಗೆ ತುಂಬಾ ರುಚಿಕರವಾಗಿರುತ್ತದೆ. ಹಾಗಾಗಿ  ಕೆಲವರು ಕೆ.ಜಿಗಟ್ಟಲೆ ಮಾಂಸವನ್ನು ತಂದು ಪ್ರಿಜ್‌ನಲ್ಲಿ ಸಂಗ್ರಹಿಸಿಡುತ್ತಾರೆ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸಿಡುವುದು(Storing Meat) ಅಗತ್ಯ. ಇಲ್ಲವಾದರೆ ಅದರಿಂದ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಯಾಕೆಂದರೆ ಮಾಂಸ ಹಾಳಾಗಿ ಅದರಲ್ಲಿ ಬ್ಯಾಕ್ಟೀರಿಯಾದ ಸೋಂಕು ಅಥವಾ ಆಹಾರ ವಿಷದಿಂದಾಗಿ ಅದು ಅನಾರೋಗ್ಯಕ್ಕೆ ಕಾರಣವಾಗಬಹುದು. ಹಾಗಾಗಿ ಹಸಿ ಮಾಂಸವನ್ನು ಸರಿಯಾಗಿ ಸಂಗ್ರಹಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ. ಹಾಗೂ ಫ್ರಿಜ್‌ನಲ್ಲಿ ಮಾಂಸವನ್ನು ಸಂಗ್ರಹಿಸಿಡುವಾಗ ಈ ಸಲಹೆಗಳನ್ನು ಪಾಲಿಸಿ.

Storing Meat

ಗಾಳಿಯಾಡದ ಪ್ಯಾಕೇಜಿಂಗ್ ಬಳಸಿ:

ಮಾಂಸವನ್ನು ಫ್ರಿಜ್‌ನಲ್ಲಿ ಇಡುವ ಮೊದಲು ಅದನ್ನು ಬಿಗಿಯಾಗಿ ಗಾಳಿಯಾಡದ ಚೀಲದಲ್ಲಿ ಸುತ್ತಿಡಿ. ಒಂದು ವೇಳೆ ಚೀಲದಲ್ಲಿ ಗಾಳಿ ಇದ್ದರೆ, ಅದು ಮಾಂಸ ಹಾಳಾಗಲು ಕಾರಣವಾಗಬಹುದು. ಮತ್ತು ಫ್ರಿಜ್‌ ಗಲೀಜಾಗಬಹುದು.  ಹಾಗಾಗಿ ಕಚ್ಚಾ ಮಾಂಸವನ್ನು ಸಂಗ್ರಹಿಸುವಾಗ, ಫ್ರಿಜ್‌ ಹಾಳಾಗದಂತೆ ಇಡುವಂತಹ ಚೀಲಗಳು ಅಥವಾ ಪಾತ್ರೆಗಳನ್ನು ಬಳಸುವುದನ್ನು ಉತ್ತಮ.  ಹಾಗೇ ಮಾಂಸವನ್ನು ಕಟ್ಟಲು ಫಾಯಿಲ್ ಬಳಸುತ್ತಿದ್ದರೆ, ಅದು ಹೆಚ್ಚು ಸುರಕ್ಷಿತವಾಗಿರಲು ಅದನ್ನು ಡಬಲ್-ರಾಪ್ ಮಾಡಿ.

ಪ್ಯಾಕೇಟ್‌ಗಳಲ್ಲಿ  ದಿನಾಂಕಗಳನ್ನು ಬರೆದಿಡಿ

ಹಸಿ  ಮಾಂಸವನ್ನು ಫ್ರಿಜ್‌ನಲ್ಲಿ ಸಂಗ್ರಹಿಸಿದಾಗ ಕೆಲವರು ಅದನ್ನು ಮರೆತು ಬಿಡುತ್ತಾರೆ. ಆದರೆ ಅದನ್ನು ನೋಡಿದ ದಿನ ಅದನ್ನು ಬಳಸಲು ಮುಂದಾಗುತ್ತಾರೆ. ಆದರೆ ನೀವು ಅದನ್ನು ಸಂಗ್ರಹಿಸಿಟ್ಟ ದಿನಾಂಕಗಳನ್ನು ಬರೆದಿಡುವುದರಿಂದ ಅದನ್ನು ಫ್ರಿಜ್‌ನಲ್ಲಿಟ್ಟು ಎಷ್ಟು ಸಮಯವಾಗಿದೆ, ಈಗ ಅದನ್ನು ಬಳಸಬಹುದೇ ಎಂಬುದು ನಿಮಗೆ ತಿಳಿಯುತ್ತದೆ. ಮಾಂಸವು ಸಾಮಾನ್ಯವಾಗಿ ಫ್ರಿಜ್‌ನಲ್ಲಿ ಆರು ತಿಂಗಳವರೆಗೆ ತಾಜಾವಾಗಿರುತ್ತದೆ, ಆದರೆ ಅಡುಗೆ ಮಾಡುವ ಮೊದಲು ಯಾವಾಗಲೂ ಅದರ ಗುಣಮಟ್ಟವನ್ನು ಪರಿಶೀಲಿಸಿ.

Storing Meat

ಫ್ರಿಜ್‌ನಲ್ಲಿಡುವ ಮೊದಲು ಮಾಂಸವನ್ನು ಕತ್ತರಿಸಿಡಿ:

ಕೆಲವರು ಅಡುಗೆಗೆ ಬಳಸದಿರುವ ಮಾಂಸವನ್ನು ಫ್ರಿಜ್‌ನಲ್ಲಿಡುವಾಗ  ಇಡೀ ಮಾಂಸವನ್ನು ಹಾಗೇ ಇಡುತ್ತಾರೆ. ಆದರೆ ಅದನ್ನು ಫ್ರಿಜ್‌ನಲ್ಲಿಡುವ ಮೊದಲು  ಮಾಂಸವನ್ನು ಸಣ್ಣದಾಗಿ ಕತ್ತರಿಸಿಡುವುದರಿಂದ ಅದು ಹಾಳಾಗದೆ ಹೆಚ್ಚು ಸಮಯದವರೆಗೆ ತಾಜಾವಾಗಿರುತ್ತದೆ.

ಮಾಂಸವನ್ನು ಸರಿಯಾದ ತಾಪಮಾನದಲ್ಲಿ ಫ್ರೀಜ್ ಮಾಡಿ:

ಮಾಂಸವನ್ನು ಫ್ರಿಜ್‌ನಲ್ಲಿಡುವಾಗ ಅದು ಹೆಪ್ಪುಗಟ್ಟುವಂತೆ ಫ್ರಿಜ್‌ನ ತಾಪಮಾನವನ್ನು ಸರಿಯಾದ ಮಟ್ಟದಲ್ಲಿ ಇಡಿ. ಇದರಿಂದ ಮಾಂಸ ಸರಿಯಾಗಿ ಫ್ರೀಜ್ ಆಗಿ ಹಾಳಾಗುವುದಿಲ್ಲ. ಹಾಗಾಗಿ ಮಾಂಸ ಕೆಡದಂತೆ ಇಡಲು ಫ್ರಿಜ್‌ನ ತಾಪಮಾನವನ್ನು -18 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಕಡಿಮೆ ಮಟ್ಟದಲ್ಲಿ ಇಡಬೇಕು. ತಾಪಮಾನವು ಕಡಿಮೆಯಾದಷ್ಟೂ ಬ್ಯಾಕ್ಟೀರಿಯಾ ಮತ್ತು ಕೀಟಾಣುಗಳು ಬೆಳೆಯುತ್ತವೆ. ಹಾಗಾಗಿ ಮಾಂಸವು ತಾಜಾವಾಗಿ ಉಳಿಯಲು ಈ ಸಲಹೆ ಪಾಲಿಸಿ. ಅಲ್ಲದೇ ಮಾಂಸವನ್ನು ಮತ್ತೆ ಮತ್ತೆ ಫ್ರೀಜ್ ಮಾಡುವುದನ್ನು ತಪ್ಪಿಸಿ. ಇದು ಮಾಂಸದಲ್ಲಿರುವ ಪೋಷಕಾಂಶವನ್ನು ನಾಶ ಮಾಡುತ್ತದೆ.

ಇದನ್ನೂ ಓದಿ: ಪತ್ನಿ ಬೀಚ್‌ನಲ್ಲಿ ಬಿಕಿನಿ ಧರಿಸಿ ಓಡಾಡಲೆಂದು 418 ಕೋಟಿ ರೂ. ಕೊಟ್ಟು ಇಡೀ ದ್ವೀಪವನ್ನೇ ಖರೀದಿಸಿದ ಪತಿ!

ಈ ರೀತಿಯಲ್ಲಿ ಮಾಂಸವನ್ನು ಫ್ರಿಜ್‌ನಲ್ಲಿ ಸರಿಯಾಗಿ ಸಂಗ್ರಹಿಸಿ. ಅದರಿಂದ ಮಾಂಸ ಕೂಡ ತಾಜಾವಾಗಿರುತ್ತದೆ ಮತ್ತು ಅದರಿಂದ ಮಾಡಿದ ಅಡುಗೆಯೂ ರುಚಿಕರವಾಗಿರುತ್ತದೆ, ಮತ್ತು ಇದು ಆರೋಗ್ಯವನ್ನು ಕೆಡಿಸುವುದಿಲ್ಲ.