Friday, 27th September 2024

Tirupati Laddu Row: ಜಗನ್ ತಿರುಪತಿ ಭೇಟಿ ರದ್ದು; ಮಾನವೀಯತೆಯೇ ನನ್ನ ಧರ್ಮ ಎಂದು ಟಿಡಿಪಿ ಟಾಂಗ್‌

Tirupati laddu raw

ಹೈದರಾಬಾದ್‌: ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ(Jagan Mohan Reddy) ನಾಳಿನ ತಿರುಪತಿ ತಿರುಮಲ ದೇಗುಲ ಭೇಟಿಯನ್ನು ರದ್ದುಗೊಳಿಸಿದ್ದಾರೆ. ತಿರುಪತಿ ದೇಗುಲದ ಲಡ್ಡುಗಳಲ್ಲಿ ಪ್ರಾಣಿಗಳ ಕೊಬ್ಬು ಕಲಬೆರಕೆ (Tirupati Laddu Row) ವಿವಾದದ ನಡುವೆ ಜಗನ್‌ ನಾಳೆ ತಿರುಪತಿ ದೇಗುಲಕ್ಕೆ ಭೇಟಿ ನೀಡುವುದಾಗಿ ಘೋಷಿಸಿದ್ದರು. ಆದರೆ ನಾಳೆ ದೇಗುಲದ ಭೇಟಿ ನೀಡುತ್ತಿಲ್ಲ ಎಂದು ಘೋಷಿಸಿದ್ದಾರೆ.

ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಜಗನ್‌, ತಮಗೆ ದೇಗುಲಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಲಾಗಿದೆ ಟಿಡಿಪಿ ತಮಗೆ ಅನುಮತಿ ನೀಡುತ್ತಿಲ್ಲ ಎಂದಿದ್ದಾರೆ. ನಾಯ್ಡು ಅವರು ತಮ್ಮ ಮೊದಲ 100 ದಿನಗಳ ಆಡಳಿತದ ವೈಫಲ್ಯವನ್ನು ಬೇರೆಡೆ ಸೆಳೆಯುವ ನಿಟ್ಟಿನಲ್ಲಿ ತಿರುಪತಿ ಲಡ್ಡೂ ಬಗ್ಗೆ ವಿವಾದ ಸೃಷ್ಟಿಸುತ್ತಿದ್ದಾರೆ. ಲಡ್ಡೂಗಳ ಬಗ್ಗೆ ಅವರು ನೀಡುತ್ತಿರುವ ಹೇಳಿಕೆಗಳೆಲ್ಲವೂ ಒಂದರ ಹಿಂದೆ ಒಂದು ಸುಳ್ಳು ಎಂದು ಸಾಬೀತಾಗುತ್ತಿದೆ, ಅವರು ತಪ್ಪು ಮಾಡಿದ್ದಾರೆ ಮತ್ತು ದೇವಾಲಯದ ಪಾವಿತ್ರ್ಯತೆಗೆ ಧಕ್ಕೆ ತಂದಿದ್ದಾರೆ. ಇದೀಗ ಮತ್ತೊಮ್ಮೆ ವಿಷಯವನ್ನು ಬೇರೆಡೆಗೆ ತಿರುಗಿಸಲು ಅವರು ಘೋಷಣೆಯ ವಿಷಯವನ್ನು ತರುತ್ತಿದ್ದಾರೆ. ಅದರೊಂದಿಗೆ ಬೇರೆ ರಾಜಕೀಯ ಮಾಡುತ್ತಿದ್ದಾರೆ. ತಿರುಮಲ ಲಡ್ಡೂ ಪರಿಶುದ್ಧವಾಗಿದೆ, ಮತ್ತು ರಾಜಕೀಯ ಉದ್ದೇಶದಿಂದ ಅವರು ಇದನ್ನು ಪ್ರಾಣಿಗಳ ಕೊಬ್ಬಿನಿಂದ ಮಾಡಲಾಗಿದೆ ಎಂದು ಹೇಳಿದ್ದಾರೆ ಎಂದು ಜಗನ್‌ ಆರೋಪಿಸಿದ್ದಾರೆ.

ಮುಖ್ಯಮಂತ್ರಿ ಕುರ್ಚಿ ಹಿಡಿದವರು ಈ ರೀತಿ ಸುಳ್ಳು ಹೇಳಬಾರದು… ಮುಖ್ಯಮಂತ್ರಿಯೊಬ್ಬರು ದೇವಸ್ಥಾನ ಹಾಗೂ ದೇವರ ಕೆಡಿಸುವುದಕ್ಕಿಂತ ಧರ್ಮಕ್ಕೆ ವಿರುದ್ಧವಾದ ಕ್ರಿಯೆ ಮತ್ತೊಂದಿಲ್ಲ. ಆರು ತಿಂಗಳಿಗೊಮ್ಮೆ ತುಪ್ಪ ಖರೀದಿಗೆ ಟೆಂಡರ್‌ ಕರೆಯಲಾಗುತ್ತಿದೆ. ದಶಕಗಳಿಂದ ದೇವಸ್ಥಾನ ಆಡಳಿತ ಮಂಡಳಿಯೇ ಇದನ್ನು ನಿರ್ಧರಿಸುತ್ತದೆ. ಅದರಲ್ಲಿ ಸರ್ಕಾರವು ಯಾವುದೇ ಪಾತ್ರವನ್ನು ಹೊಂದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಮಾನವೀಯತೆಯೇ ನನ್ನ ಧರ್ಮ

ಇಡೀ ದೇಶ, ರಾಜ್ಯ, ನನ್ನ ಧರ್ಮವನ್ನು ತಿಳಿದಿದೆ. ನನ್ನ ದಿವಂಗತ ತಂದೆ ಎರಡು ಬಾರಿ ಮುಖ್ಯಮಂತ್ರಿಯಾದರು ಮತ್ತು ಅವರು ಭಗವಾನ್ ಬಾಲಾಜಿಯ ಭಕ್ತರು. ನಾನು ಬೈಬಲ್ ಓದುತ್ತೇನೆ, ನಾನು ಹಿಂದೂ ಧರ್ಮ, ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಗೌರವಿಸುತ್ತೇನೆ. ನಾನು ಇಸ್ಲಾಂ ಮತ್ತು ಸಿಖ್ ಧರ್ಮವನ್ನೂ ಗೌರವಿಸುತ್ತೇನೆ. ನನ್ನ ಧರ್ಮ ಮಾನವೀಯತೆ ಎಂದು ವೈಎಸ್ ಜಗನ್ ಮೋಹನ್ ರೆಡ್ಡಿ ಟಿಡಿಪಿಗೆ ಟಾಂಗ್‌ ಕೊಟ್ಟರು.

ಈ ಸುದ್ದಿಯನ್ನೂ ಓದಿ: Tirupati Laddu Row: ತಿರುಪತಿ ಲಡ್ಡು ಕಲಬೆರಕೆ ಕೇಸ್‌; 9 ಜನರ SIT ರಚಿಸಿದ ಆಂಧ್ರ ಸರ್ಕಾರ