Saturday, 28th September 2024

Bhagat Singh Birth Anniversary: ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಭಗತ್ ಸಿಂಗ್ ಕುರಿತ ಕುತೂಹಲಕರ ಸಂಗತಿಗಳಿವು

Martyrs Day 2024

ವಸಾಹತುಶಾಹಿ (Bhagat Singh Birth Anniversary) ವಿರೋಧಿ, ಕ್ರಾಂತಿಕಾರಿಯಾಗಿದ್ದ ಭಗತ್ ಸಿಂಗ್ (Bhagat Singh) ಅತ್ಯಂತ ಸಣ್ಣ ವಯಸ್ಸಿನಲ್ಲೇ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಚಿಕ್ಕ ವಯಸ್ಸಿನಲ್ಲೇ ಗಲ್ಲಿಗೇರಿಸಲ್ಪಟ್ಟ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾಗಿದ್ದ ( youngest freedom fighter) ಅವರ ಜನ್ಮ ದಿನವನ್ನು ಹುತಾತ್ಮರ ದಿನ (Martyrs Day 2024) ಅಥವಾ ಶಹೀದ್ ದಿವಸ್ ಎಂದು ಕರೆಯಲಾಗುತ್ತದೆ.

ಭಗತ್ ಸಿಂಗ್ ಅವರನ್ನು ಶಹೀದ್-ಎ-ಅಜಮ್ ಭಗತ್ ಸಿಂಗ್ ಎಂದು ಕರೆಯಲಾಗುತ್ತದೆ. ಇವರ ಕ್ರಾಂತಿಕಾರಿ ಜೀವನ ಯುವ ಜನರಲ್ಲಿ ದೇಶ ಪ್ರೇಮವನ್ನು ಮೂಡುವಂತೆ ಮಾಡುತ್ತದೆ ಮಾತ್ರವಲ್ಲದೆ ದೇಶಕ್ಕಾಗಿ ಹೋರಾಡಲು ಇತರರನ್ನು ಪ್ರೇರೇಪಿಸುತ್ತದೆ.

ಈಗಿನ ಪಾಕಿಸ್ತಾನದ ಭಾಗವಾಗಿರುವ ಭಾರತದ ಪಂಜಾಬ್ ನಲ್ಲಿ ಸಿಕ್ಖ್ ಕುಟುಂಬದಲ್ಲಿ ಭಗತ್ ಸಿಂಗ್ 1907ರ ಸೆಪ್ಟೆಂಬರ್ 28ರಂದು ಜನಿಸಿದರು. ಅವರ ಜನ್ಮ ದಿನವನ್ನು ಹುತಾತ್ಮರ ದಿನಾವಾಗಿ ಆಚರಿಸಲಾಗುತ್ತದೆ.

ಭಾರತದಲ್ಲಿ ಹಲವಾರು ಸಂದರ್ಭಗಳಲ್ಲಿ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. ಅವುಗಳಲ್ಲಿ ಮಾರ್ಚ್ 23 ಕೂಡ ಒಂದು. ಈ ದಿನವು ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಶಿವರಾಮ ರಾಜಗುರು ಅವರ ಪುಣ್ಯತಿಥಿಯನ್ನು ಸೂಚಿಸುತ್ತದೆ.

ಭಾರತೀಯ ಸ್ವಾತಂತ್ರ್ಯ ಚಳವಳಿಯ ಅತ್ಯಂತ ಶಕ್ತಿಶಾಲಿ ಕ್ರಾಂತಿಕಾರಿ ಎಂದೇ ಕರೆಯಲ್ಪಡುವ ಭಗತ್ ಸಿಂಗ್ ಸ್ವಾತಂತ್ರ್ಯ ಚಳವಳಿಯಲ್ಲಿ ಅನೇಕರು ಪಾಲ್ಗೊಳ್ಳುವಂತೆ ಪ್ರೇರೇಪಿಸಿದರು.

ವೀರ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಅವರ ದೇಶಪ್ರೇಮದ ಭಾವನೆಗಳು ಬ್ರಿಟಿಷ್ ಆಡಳಿತದ ವಿರುದ್ಧ ಮಾತ್ರವಲ್ಲ ಕೋಮುವಾದದ ಆಧಾರದ ಮೇಲೆ ಭಾರತವನ್ನು ವಿಭಜಿಸುವುದನ್ನು ವಿರೋಧಿಸಿದ್ದರು.

ಮಾರ್ಕ್ಸ್ ವಾದಿ ಸಿದ್ಧಾಂತಗಳಿಂದ ಆಕರ್ಷಿತರಾಗಿದ್ದ ಅವರಲ್ಲಿ ಕ್ರಾಂತಿಕಾರಿ ವಿಚಾರಗಳೇ ತುಂಬಿದ್ದವು. ಅತ್ಯತ್ತಮ ವಿದ್ಯಾರ್ಥಿಯಾಗಿಯೂ ಹೆಸರುಗಳಿಸಿದ್ದ ಅವರು ಉತ್ತಮ ಓದುಗರಾಗಿದ್ದರು ಮಾತ್ರವಲ್ಲ ಪಠ್ಯೇತರ ಚಟುವಟಿಕೆಗಳಲ್ಲಿ ಯಾವಾಗಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ತಮ್ಮ ಸಂಪೂರ್ಣ ಜೀವನವನ್ನು ಭಾರತೀಯ ಸ್ವಾತಂತ್ರ್ಯಕ್ಕಾಗಿ ಮುಡಿಪಾಗಿಡಲು ಹದಿಮೂರನೇ ವಯಸ್ಸಿನಲ್ಲಿ ಶಾಲೆಯನ್ನು ತೊರೆದ ಅವರು 23 ನೇ ವಯಸ್ಸಿನಲ್ಲಿ ಬ್ರಿಟಿಷರಿಂದ ಮರಣ ದಂಡನೆಗೆ ಗುರಿಯಾದರು. ಬ್ರಿಟಿಷ್ ಪೋಲೀಸ್ ಅಧಿಕಾರಿಯನ್ನು ಕೊಂದ ಆರೋಪದಲ್ಲಿ ಅವರನ್ನು 1931ರ ಮಾರ್ಚ್ 23ರಂದು ಗಲ್ಲಿಗೇರಿಸಲಾಯಿತು.

Martyrs Day 2024

Pandit Deendayal Upadhyaya Birthday: ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ಪಂಡಿತ್ ದೀನದಯಾಳ್ ಉಪಾಧ್ಯಾಯರ ಬದುಕು ಕುತೂಹಲಕರ

ಭಗತ್ ಸಿಂಗ್ ಕುರಿತ 10 ಪ್ರಮುಖ ಸಂಗತಿಗಳಿವು:

  1. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಿಂದ ಭಗತ್ ಸಿಂಗ್ ತುಂಬಾ ವಿಚಲಿತರಾಗಿದ್ದರು. ರಕ್ತಪಾತದ ಸ್ಥಳಕ್ಕೆ ಭೇಟಿ ನೀಡಲು ಅವರು ಶಾಲೆಯನ್ನು ತೊರೆದು ಹೋಗಿದ್ದರು. ಭಾರತೀಯರ ರಕ್ತ ಮಿಶ್ರಿತ ಮಣ್ಣನ್ನು ಬಾಟಲಿಯಲ್ಲಿ ಸಂಗ್ರಹಿಸಿ ಜೀವನ ಪರ್ಯಂತ ಅದನ್ನು ಪೂಜಿಸುತ್ತಿದ್ದರು.
  2. ಅತ್ಯುತ್ತಮ ನಟರಾಗಿದ್ದ ಅವರು ಶಾಲಾ ದಿನಗಳಲ್ಲಿ ‘ರಾಣಾ ಪ್ರತಾಪ್’ ಮತ್ತು ‘ಭಾರತ- ದುರ್ದಶ’ ನಾಟಕಗಳಲ್ಲಿ ಹಲವು ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.
  3. ಭಗತ್ ಸಿಂಗ್ ಬಾಲ್ಯದಲ್ಲಿ ಯಾವಾಗಲೂ ಬಂದೂಕುಗಳ ಬಗ್ಗೆ ಮಾತನಾಡುತ್ತಿದ್ದರು. ಬ್ರಿಟಿಷರೊಂದಿಗೆ ಹೋರಾಡಲು ಹೊಲಗಳಲ್ಲಿ ಬಂದೂಕುಗಳನ್ನು ತಯಾರಿಸಲು ಬಯಸಿದ್ದರು. 8 ವರ್ಷ ವಯಸ್ಸಿನವರಾಗಿದ್ದಾಗ ಆಟಿಕೆಗಳು ಅಥವಾ ಆಟಗಳ ಬಗ್ಗೆ ಮಾತನಾಡುವ ಬದಲು ಅವರು ಯಾವಾಗಲೂ ಬ್ರಿಟಿಷರನ್ನು ಭಾರತದಿಂದ ಓಡಿಸುವ ಬಗ್ಗೆ ಮಾತನಾಡುತ್ತಿದ್ದರು.
  4. ಭಗತ್ ಸಿಂಗ್ ಪೋಷಕರು ಅವರಿಗೆ ಮದುವೆ ಮಾಡಿಸಲು ಮುಂದಾದಾಗ ಅವರು ಕಾನ್ಪುರಕ್ಕೆ ಓಡಿಹೋದರು. ಬಳಿಕ ಅವರು ಹೆತ್ತವರಿಗೆ ಹೀಗೆ ಹೇಳಿದರು.. ಬ್ರಿಟೀಷ್ ರಾಜ್ ಇರುವ ವಸಾಹತುಶಾಹಿ ಭಾರತದಲ್ಲಿ ನಾನು ಮದುವೆಯಾದರೆ ನನ್ನ ವಧು ನನ್ನ ಮರಣ ನೋಡಬೇಕಾಗುತ್ತದೆ. ಆದ್ದರಿಂದ ಈಗ ನನಗೆ ಯಾವುದೇ ವಿಶ್ರಾಂತಿ ಬೇಕಿಲ್ಲ ಮತ್ತು ಲೌಕಿಕ ಬಯಕೆಗಳಿಲ್ಲ ಎಂದು ಹೇಳಿದರು. ಅವರು ಬಳಿಕ “ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್”ಗೆ ಸೇರಿದರು.
  5. ಚಿಕ್ಕ ವಯಸ್ಸಿನಲ್ಲೇ ಲೆನಿನ್ ನೇತೃತ್ವದ ಸಮಾಜವಾದದಿಂದ ಆಕರ್ಷಿತರಾದರು. ಅವುಗಳ ಬಗ್ಗೆ ಓದಲು ಪ್ರಾರಂಭಿಸಿದರು. ಭಗತ್ ಸಿಂಗ್ ಯಾವಾಗಲು ಹೇಳುತ್ತಿದ್ದ ಮಾತು ಇದು.. ಬ್ರಿಟಿಷರು ನನ್ನನ್ನು ಕೊಲ್ಲಬಹುದು. ಆದರೆ ನನ್ನ ಆಲೋಚನೆಗಳನ್ನಲ್ಲ. ಅವರು ನನ್ನ ದೇಹವನ್ನು ಪುಡಿಮಾಡಬಹುದು ಆದರೆ ನನ್ನ ಆತ್ಮವನ್ನು ಹತ್ತಿಕ್ಕಲು ಸಾಧ್ಯವಾಗುವುದಿಲ್ಲ.
  6. “ಗಲ್ಲಿಗೇರಿಸುವ ಬದಲು ಗುಂಡು ಹಾರಿಸಿ” ಎಂದು ಬ್ರಿಟಿಷರಿಗೆ ಭಗತ್ ಸಿಂಗ್ ಅಂತಿಮ ಸಮಯದಲ್ಲಿ ಹೇಳಿದ್ದರು ಆದರೆ ಬ್ರಿಟಿಷರು ಅದನ್ನು ಪರಿಗಣಿಸಲಿಲ್ಲ. ಇದನ್ನು ಅವರು ತಮ್ಮ ಕೊನೆಯ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
  7. ಅಂದಿನ ಬ್ರಿಟಿಷ್ ಸಂಸತ್‌‌ನಲ್ಲಿ ಸಹಚರರೊಂದಿಗೆ ಭಗತ್ ಸಿಂಗ್ ಬಾಂಬ್ ಎಸೆದರು. ಇದು ಯಾರನ್ನೂ ಗಾಯಗೊಳಿಸಲಿಲ್ಲ. ಯಾಕೆಂದರೆ ಈ ಬಾಂಬ್‌ಗಳನ್ನು ಕಡಿಮೆ ದರ್ಜೆಯ ಸ್ಫೋಟಕಗಳಿಂದ ತಯಾರಿಸಲಾಗಿತ್ತು.
  8. ಭಗತ್ ಸಿಂಗ್ ಜೈಲಿನಲ್ಲಿದ್ದಾಗ 116 ದಿನಗಳ ಕಾಲ ಉಪವಾಸ ಮಾಡಿದರು. ಹಾಡುವುದು, ಪುಸ್ತಕಗಳನ್ನು ಓದುವುದು ಮತ್ತು ಬರೆಯುವುದು, ಪ್ರತಿದಿನ ನ್ಯಾಯಾಲಯಕ್ಕೆ ಭೇಟಿ ನೀಡುವುದು ಅವರ ನಿತ್ಯದ ಚಟುವಟಿಕೆಯಾಗಿತ್ತು.
  9. ‘ಇಂಕ್ವಿಲಾಬ್ ಜಿಂದಾಬಾದ್’ ಎಂಬ ಘೋಷಣೆಯನ್ನು ಭಗತ್ ಸಿಂಗ್ ರಚಿಸಿದರು, ಇದು ಬಳಿಕ ಭಾರತದ ಸಶಸ್ತ್ರ ಹೋರಾಟದ ಘೋಷಣೆಯಾಯಿತು.
  10. 1931ರ ಮಾರ್ಚ್ 23ರಂದು ಅಧಿಕೃತ ಸಮಯಕ್ಕಿಂತ ಒಂದು ಗಂಟೆ ಮುಂಚಿತವಾಗಿ ಅವರನ್ನು ಗಲ್ಲಿಗೇರಿಸಲಾಯಿತು.
  11. ಭಗತ್ ಸಿಂಗ್ ಜೈಲಿನಲ್ಲಿದ್ದಾಗ ಅವರ ತಾಯಿ ಭೇಟಿ ಮಾಡಲು ಬಂದರು. ಈ ವೇಳೆ ಭಗತ್ ಸಿಂಗ್ ಜೋರಾಗಿ ನಗುತ್ತಿದ್ದರು. ಇದನ್ನು ನೋಡಿದ ಜೈಲು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದರು. ಸಾವಿಗೆ ಹತ್ತಿರವಿದ್ದರೂ ಹೀಗೆ ನಗುತ್ತಿರುವುದು ಅವರಿಗೆ ಆಶ್ಚರ್ಯ ಉಂಟು
    ಮಾಡಿತ್ತು.
  12. ಹುಟ್ಟಿನಿಂದ ಸಿಖ್ ಆಗಿದ್ದರೂ ಕೊಲೆಗಾಗಿ ಗುರುತಿಸಲ್ಪಡುವುದನ್ನು ಮತ್ತು ಬಂಧಿಸುವುದನ್ನು ತಪ್ಪಿಸಲು ಅವರು ತಮ್ಮ ಕೂದಲನ್ನು ಕತ್ತರಿಸಿ ಗಡ್ಡವನ್ನು ಬೋಳಿಸಿಕೊಂಡಿದ್ದರು.
  13. ಗಾಂಧಿಯವರು ಅಸಹಕಾರ ಚಳವಳಿಯನ್ನು ನಿಲ್ಲಿಸಿದ ಬಳಿಕ ಹಿಂದೂ- ಮುಸ್ಲಿಂ ಗಲಭೆಗಳನ್ನು ನೋಡಿದ ಭಗತ್ ಸಿಂಗ್ ಸಮಾಜದಲ್ಲಿ ಧಾರ್ಮಿಕ ಸಿದ್ಧಾಂತಗಳನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಬಳಿಕ ಅವರು ನಾಸ್ತಿಕರಾದರು.