Friday, 22nd November 2024

Ujjain Mahakal Temple : ಉಜ್ಜಯಿನಿ ಮಹಾಕಾಳ ದೇಗುಲದ ಗೋಡೆ ಕುಸಿತ; ಇಬ್ಬರು ಸಾವು, ಕಾಲ್ತುಳಿತ

Ujjain’s Mahakal temple

ಬೆಂಗಳೂರು: ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳ ದೇವಾಲಯದ (Ujjain Mahakal Temple) ಗಡಿ ಗೋಡೆ ಕುಸಿದು ಕನಿಷ್ಠ ಇಬ್ಬರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಈ ಘಟನೆ ನಡೆದಿದೆ ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿದೆ. ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಪ್ರಯತ್ನಗಳು ನಡೆಯುತ್ತಿವೆ. “ನಾಲ್ಕು ಜನರನ್ನು ಆಸ್ಪತ್ರೆಗೆ ಕರೆತರಲಾಯಿತು. ಅವರಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಮ್ಮ ತಂಡವು ಇಲ್ಲಿ ಪ್ರಾಥಮಿಕ ಚಿಕಿತ್ಸೆಗಾಗಿ ಕಾಯುತ್ತಿದೆ ಮುಖ್ಯ ವೈದ್ಯಕೀಯ ಅಧಿಕಾರಿ ಅಶೋಕ್ ಪಟೇಲ್ ಎಎನ್ಐಗೆ ತಿಳಿಸಿದ್ದಾರೆ.

ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್, ಉಜ್ಜೈನಿಯ ಮಹಾಕಾಳ ದೇವಾಲಯದ ಗೇಟ್ ಸಂಖ್ಯೆ 4 ರ ಬಳಿ ಗೋಡೆ ಕುಸಿದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. “ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ” ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.

ಇದನ್ನೂ ಓದಿ: Clean Ganga Mission : ಕುಂಭ ಮೇಳಕ್ಕೆ ಸಿದ್ಧತೆ; ಸ್ವಚ್ಛ ಗಂಗಾ ಮಿಷನ್‌ಗಾಗಿ 1,062 ಕೋಟಿ ರೂ. ಬಿಡುಗಡೆ

ಮಾರ್ಚ್‌ನಲ್ಲಿ ಭಸ್ಮ ಆರತಿ ಸಂದರ್ಭದಲ್ಲಿ ದೇವಾಲಯದ ಗರ್ಭಗುಡಿಯಲ್ಲಿ ಬೆಂಕಿ ಕಾಣಿಸಿಕೊಂಡು ಸೇವಕರು (ಸಹಾಯಕರು) ಸೇರಿದಂತೆ 14 ಅರ್ಚಕರು ಗಾಯಗೊಂಡಿದ್ದರು. ಈ ತಿಂಗಳ ಆರಂಭದಲ್ಲಿ, ಹರತಾಲಿಕಾ ತೀಜ್ ಸಂದರ್ಭದಲ್ಲಿ ಪ್ರಾರ್ಥನೆ ಸಲ್ಲಿಸಲು ಹಲವಾರು ಭಕ್ತರು ಮಹಾಕಾಲೇಶ್ವರ ದೇವಸ್ಥಾನಕ್ಕೆ ಜಮಾಯಿಸಿದ್ದರು.

ಭಸ್ಮಾ ಆರತಿ ಇಲ್ಲಿನ ಪ್ರಸಿದ್ಧ ಆಚರಣೆಯಾಗಿದೆ. ಇದನ್ನು ‘ಬ್ರಹ್ಮ ಮುಹೂರ್ತ’ದ ಸಮಯದಲ್ಲಿ ಮುಂಜಾನೆ 3:30 ರಿಂದ 5:30 ರ ನಡುವೆ ನಡೆಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಸ್ಮ ಆರತಿಯಲ್ಲಿ ಭಾಗವಹಿಸುವ ಭಕ್ತನ ಬಯಕೆಗಳು ಈಡೇರುತ್ತವೆ.