Friday, 22nd November 2024

Arunachal Pradesh : 21 ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದ ಹಾಸ್ಟೆಲ್ ವಾರ್ಡನ್‌ಗೆ ಮರಣ ದಂಡನೆ

Arunachal Pradesh

ಗುವಾಹಟಿ: 2014 ರಿಂದ 2022 ರವರೆಗೆ ಸರ್ಕಾರಿ ವಸತಿ ಶಾಲೆಯಲ್ಲಿ 21 ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಹಾಸ್ಟೆಲ್ ವಾರ್ಡನ್ ಗೆ ಅರುಣಾಚಲ ಪ್ರದೇಶದ (Arunachal Pradesh) ವಿಶೇಷ ನ್ಯಾಯಾಲಯ (Court News) ಗುರುವಾರ ಮರಣದಂಡನೆ ವಿಧಿಸಿದೆ. ವಾರ್ಡನ್ ಯುಮ್ಕೆನ್ ಬಾಗ್ರಾ ಶಿಕ್ಷೆಗೆ ಒಳಗಾದವ. ಇದು ಪೋಕ್ಸೊ ಕಾಯ್ದೆಯಡಿ ಮರಣದಂಡನೆಗೆ ಒಳಗಾದ ಮೊದಲ ಪ್ರಕರಣವಾಗಿದೆ.

ವಿಶೇಷ ನ್ಯಾಯಾಧೀಶ ಜವೇಪ್ಲು ಚಾಯ್ ಶಿಕ್ಷೆ ವಿಧಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಅಪರಾಧಕ್ಕೆ ಪ್ರಚೋದನೆ ನೀಡಿದ ಮತ್ತು ಅದನ್ನು ವರದಿ ಮಾಡಲು ವಿಫಲವಾದ ಆರೋಪದ ಮೇಲೆ ಮುಖ್ಯೋಪಾಧ್ಯಾಯ ಸಿಂಗ್ತುಂಗ್ ಯೋರ್ಪೆನ್ ಮತ್ತು ಹಿಂದಿ ಶಿಕ್ಷಕ ಮಾರ್ಬೊಮ್ ಎನ್ಗೊಮ್ದಿರ್‌ಗೂ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದ್ದಾರೆ. ಕೆಲವು ವಿದ್ಯಾರ್ಥಿಗಳು ಮಾಹಿತಿಯನ್ನು ಯೋರ್ಪೆನ್ ಗೆ ಹೇಳಿದ್ದರು. ಆದರೆ ಶಾಲೆಯ ಪ್ರತಿಷ್ಠೆಗೆ ಧಕ್ಕೆಯಾಗದಂತೆ ಅವರು ಮಕ್ಕಳನ್ನು ಸುಮ್ಮನಿರುವಂತೆ ಹೇಳಿದ್ದರು.

ನಮ್ಮ ಮನವಿಗಳನ್ನು ನ್ಯಾಯಾಲಯ ಆಲಿಸಿದ್ದರಿಂದ ನಾವು ತೀರ್ಪಿನಿಂದ ಸಂತೋಷಗೊಂಡಿದ್ದೇವೆ ಎಂದು ಪೋಕ್ಸೊ ವಿಶೇಷ ನ್ಯಾಯಾಲಯದ ಮುಂದೆ 21 ಮಕ್ಕಳ ಪರವಾಗಿ ಹಾಜರಾದ ಓಯಮ್ ಬಿಂಗೆಪ್ ಹೇಳಿದರು.

ಇದನ್ನೂ ಓದಿ: Shankaracharya Swami : ಶಂಕರಾಚಾರ್ಯ ಸ್ವಾಮೀಜಿಯ ಗೋಧ್ವಜ ಯಾತ್ರೆಗೆ ಮೇಘಾಲಯ ಪ್ರವೇಶಕ್ಕೆ ತಡೆ

“ಪೋಕ್ಸೊ ಕಾಯ್ದೆಯಡಿ ಸಂತ್ರಸ್ತರ ಮೇಲೆ ಉಲ್ಬಣಗೊಂಡ ಲೈಂಗಿಕ ದೌರ್ಜನ್ಯಕ್ಕಾಗಿ ಆರೋಪಿಗೆ ಭಾರತದಲ್ಲಿ ವಿಧಿಸಲಾದ ಮೊದಲ ಮರಣದಂಡನೆ ಇದಾಗಿದೆ ಎಂದು ಬಿಂಗಪ್ಪ ಹೇಳಿದರು. ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಪೋಕ್ಸೊ ಕಾಯ್ದೆಯಡಿ ನ್ಯಾಯಾಧೀಧ ಜವೇಪ್ಲು ಚಾಯ್ ಮೂವರನ್ನು ತಪ್ಪಿತಸ್ಥರೆಂದು ಘೋಷಿಸಿದ್ದಾರೆ.

ಇತರ ಇಬ್ಬರು ಆರೋಪಿಗಳಾದ ಅದೇ ಶಾಲೆಯ ಇನ್ನೊಬ್ಬ ಶಿಕ್ಷಕ ತಾಜುಂಗ್ ಯೋರ್ಪೆನ್ ಮತ್ತು ಹಾಸ್ಟೆಲ್ ವಾರ್ಡನ್ ಪರಿಚಯಸ್ಥ ಡೇನಿಯಲ್ ಪೆರ್ಟಿನ್ ಅವರನ್ನು ಖುಲಾಸೆಗೊಳಿಸಲಾಗಿದೆ.