ಲೇಖನಿ ಸ್ಥಗಿತಗೊಳಿಸಿ ಅನಿರ್ಧಿಷ್ಟ ಮುಷ್ಕರಕ್ಕೆ ಮುಂದಾದ ಗ್ರಾಮಾಡಳಿತ ಅಧಿಕಾರಿಗಳು
ಬಾಗೇಪಲ್ಲಿ: ತಾಂತ್ರಿಕ ಹುದ್ದೆಯ ವೇತನ ನೀಡಿ ಕೆಲಸದ ಒತ್ತಡ ಕಡಿಮೆ ಮಾಡಬೇಕು. ಎಲ್ಲಾ ಇಲಾಖೆಗಳ ಕೆಲಸ ವನ್ನು ನಮ್ಮ ಮೇಲೆ ಇದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ನೀಡದಿರುವುದು ಸರಿಯಲ್ಲ. ಕೂಡಲೇ ಸರಕಾರ ನಮ್ಮ ಮನವಿಗೆ ಸ್ಪಂಧಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಎಲ್ಲಾ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಕಛೇರಿ ಎದುರು ಪ್ರತಿಭಟನೆ ಮಾಡಿದರು.
ನಗರ ಹೊರವಲಯ ಜಿಲ್ಲಾಡಳಿತ ಕಛೇರಿ ಎದುರು ಶುಕ್ರವಾರ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾ ಪದಾಧಿಕಾರಿಗಳು ಕಾರ್ಯಕರ್ತರು ಒಟ್ಟಿಗೆ ನೂರಾರು ಸಂಖ್ಯೆಯಲ್ಲಿ ಸೇರಿ ಎಲ್ಲಾ ಬಗೆಯ ಮೊಬೈಲ್ ಆಪ್ ಹಾಗೂ ವೆಬ್ ಅಪ್ಲಿಕೇಶನ್ ಕಾರ್ಯಕ್ಕೆ ವಿರಾಮ ನೀಡಿ, ಲೇಖನಿ ಸ್ಥಗಿತಗೊಳಿಸುವ ಮೂಲಕ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡಿದರು.
ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಚೇತನ್ ಮಾತನಾಡಿ, ಸರಕಾರವು ಮೊಬೈಲ್ ಆಫ್ಗಳ ಮೂಲಕ ಲ್ಯಾಂಡ್ ಬೀಟ್, ಆಧಾರ್ ಸಂಖ್ಯೆ ಸಂಯೋಜನೆ ಸೇರಿದಂತೆ ನಾನಾ ಕೆಲಸಗಳನ್ನು ನಿಗದಿಪಡಿಸಲಾಗಿದೆ. ಇಂತಹ ಕೆಲಸಗಳನ್ನು ನಿರ್ವಹಿಸಲು ಕನಿಷ್ಟ ಸೌಲಭ್ಯಗಳನ್ನೂ ಒದಗಿಸಿಲ್ಲ. ಲ್ಯಾಪ್ ಟ್ಯಾಪ್, ಪ್ರಿಂಟರ್ ಸ್ಕ್ಯಾನರ್, ಇಂಟರ್ ನೆಟ್ ಸೌಲಭ್ಯ, ಪೀಟೋಪಕರಣಗಳ ವ್ಯವಸ್ಥೆ, ಸುಸಜ್ಜಿತವಾದ ಕಚೇರಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ಒದಗಿಸದೇ ಕಾರ್ಯದೊತ್ತಡ ಹೇರಲಾಗುತ್ತಿದೆ. ಹಾಗಾಗಿ ರಾಜ್ಯ ಸಂಘಟನೆಯ ನಿರ್ಧಾರಂತೆ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದೇವೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರವನ್ನು ಮುಂದುವರೆಸುತ್ತೇವೆ ಎಂದು ತಿಳಿಸಿದರು.
ಗ್ರಾಮ ಆಡಳಿತ ಅಧಿಕಾರಿ ಪ್ರೀತಮ್ ಮಾತನಾಡಿ, ಬಗರ್ ಹುಕ್ಕುಂ ಸಾಗುವಳಿ, ಭೂಮಿ, ಹಕ್ಕುಪತ್ರ, ಆಧಾರ್ ಸೀಡಿಂಗ್, ಚುನಾವಣೆ, ಆದಾಯ ತೆರಿಗೆ ಇಲಾಖೆ, ಬ್ಯಾಂಕ್ ಕೆಲಸಗಳನ್ನು ಸೇರಿದಂತೆ 21 ಮೊಬೈಲ್ ತಂತ್ರಾಂಶ ಗಳನ್ನು ನಿರ್ವಹಣೆ ಮಾಡಬೇಕಿದೆ. ಇವೆಲ್ಲವನ್ನು ಒಟ್ಟಿಗೆ ನಿರ್ವಹಿಸುವುದು ಕಷ್ಟಕರವಾಗಿದೆ. ಅಂತರ ಜಿಲ್ಲಾ ವರ್ಗಾವಣೆ, ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ ಅವಕಾಶ ನೀಡಬೇಕ ಎಂದು ತಿಳಿಸಿದರು.
ಮುಷ್ಕರ ನಿರತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಅಶ್ವಿನ್ ಮಾತನಾಡಿ ನಿಮ್ಮ ಬೇಡಿಕೆ ಗಳನ್ನು ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಸರಕಾರದ ಗಮನಕ್ಕೆ ತರುತ್ತೇವೆ. ಗ್ರಾಮ ಆಡಳಿತ ಅಧಿಕಾರಿಗಳು ಕಂದಾಯ ಇಲಾಖೆಗೆ ಆಧಾರ ಸ್ಥಂಭವಿದ್ದಂತೆ. ಹಾಗಾಗಿ ಸರಕಾರದ ಯೋಜನೆಗಳ ಅನುಷ್ಟಾನದಲ್ಲಿ ಅವರ ಪಾತ್ರ ಮುಖ್ಯವಾಗಿದೆ.ನ್ಯಾಯಯುತವಾದ ನಿಮ್ಮ ಬೇಡಿಕೆ ಈಡೇರಲಿ, ಸಾರ್ವಜನಿಕರ ಸೇವೆಗೆ ನಿಮ್ಮ ಹಾಜರಾತಿ ಆದಷ್ಟು ಬೇಗ ಬರಲಿ ಎಂದು ತಿಳಿಸಿದರು.
ಈ ವೇಳೆ ಶಿಡ್ಲಘಟ್ಟ ತಾಲೂಕು ಗ್ರಾಮಾಡಳಿತಾಧಿಕಾರಿಗಳ ಸಂಘದ ಖಜಾಂಚಿ ತ್ರಿಮೂರ್ತಿ, ಗ್ರಾಮ ಆಡಳಿತಾಧಿಕಾರಿ ಗಳಾದ ಬಿ.ಸಿ ನರಸಿಂಹಪ್ಪ, ರೋಶಿನಿ, ಅಭಿಷೇಕ್, ಸಂತೋಷ್ ಕುಮಾರ್, ಕೆ.ಎನ್ ವೇಣುಗೋಪಾಲ್, ಕಿರಣ್, ಪ್ರಿಯಾಂಕ, ಕೀರ್ತಿ, ರಂತಾ, ಈಶ್ವರ್, ಮಾಳಪ್ಪ, ಜಕ್ಕು, ವೆಂಕಟೇಶ್, ಶ್ರೀಧರ್, ಯಶೋಧ ಮತ್ತು ಜಯರಾಮ್ ಸೇರಿದಂತೆ ಹಲವಾರು ಮಂದಿ ಇದ್ದರು.
ಇದನ್ನೂ ಓದಿ: Chikkaballapur News: ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ-ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ