ತುಮಕೂರು: ಮಗನ ಆಕಸ್ಮಿಕ ಸಾವಿಗೆ ಮನನೊಂದು ತಂದೆ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಪತ್ರಕರ್ತ ಹಾಗೂ ಲೇಖಕ ನಾಗೇಶ್ ಗುಬ್ಬಿ (44) ಹಾಗೂ ತಂದೆ ಜಿ.ಎನ್. ಸುಬ್ರಹ್ಮಣ್ಯ ಸ್ವಾಮಿ (84) ಮೃತಪಟ್ಟ ದುರ್ದೈವಿಗಳು.
ಮನೆಗೆ ದಿನಸಿ ತರಲೆಂದು ಹೋದ ನಾಗೇಶ್ ಗುಬ್ಬಿ ಅವರು ರೈಲು ಹಳಿ ದಾಟುವಾಗ ಸಾವನ್ನಪ್ಪಿದ್ದಾರೆ . ರಾತ್ರಿಯಾದರೂ ಮನೆಗೆ ಬಾರದ ಹಿನ್ನೆಲೆಯಲ್ಲಿ ಅವರ ತಾಯಿ ತಮ್ಮ ಮಗಳಿಗೆ ಸುದ್ದಿ ಮುಟ್ಟಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ತಿಳಿಸಿದಾಗ ರೈಲಿಗೆ ಸಿಲುಕಿದ ವಿಷಯ ಬಹಿರಂಗಗೊಂಡಿದೆ. ಶುಕ್ರವಾರ ಸಂಜೆ ಗಾರ್ಡನ್ ರಸ್ತೆಯಲ್ಲಿರುವ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು. ಮಗನ ಸಾವಿನಿಂದ ಆಘಾತಗೊಂಡ ತಂದೆ ಜಿ.ಎನ್. ಸುಬ್ರಹ್ಮಣ್ಯ ಸ್ವಾಮಿ (84) ಅವರು ಸಹ ನಿಧನರಾಗಿದ್ದಾರೆ.
ನಾಗೇಶ್ ಗುಬ್ಬಿ ಅವರು
ಕನ್ನಡ ಪ್ರಭ, ಪ್ರಜಾ ಪ್ರಗತಿ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಬರವಣಿಗೆಯ ಮೂಲಕ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ್ದರು.