Saturday, 28th September 2024

Toilet Button: ಟಾಯ್ಲೆಟ್‌ ಫ್ಲಶ್ ಟ್ಯಾಂಕ್ ಮೇಲೆ 2 ಬಟನ್ ಇಡಲು ಕಾರಣವೇನು? ಯಾವ ಬಟನ್‌ ಯಾವಾಗ ಬಳಸಬೇಕು?

Toilet Button

ಹೆಚ್ಚಾಗಿ ಜನರು ಎರಡು ರೀತಿಯ ಶೌಚಾಲಯಗಳನ್ನು ಬಳಸುತ್ತಾರೆ.  ಒಂದು ವೆಸ್ಟರ್ನ್‌ ಟಾಯ್ಲೆಟ್‌ ಮತ್ತು ಇನ್ನೊಂದು ಇಂಡಿಯನ್‌ ಟಾಯ್ಲೆಟ್‌. ವೆಸ್ಟರ್ನ್‌ ಟಾಯ್ಲೆಟ್‌ನಲ್ಲಿ ಕಮೋಡ್ ಇರುತ್ತದೆ. ಹಾಗಾಗಿ ನೀವು ಇದರಲ್ಲಿ ಕೆಳಗೆ  ಕುಳಿತುಕೊಳ್ಳಬೇಕಾಗಿಲ್ಲ. ಆದರೆ ಇಂಡಿಯನ್‌ ಟಾಯ್ಲೆಟ್‌ನಲ್ಲಿ  ನೀವು ಕೆಳಗೆ ಕುಳಿತುಕೊಳ್ಳಬೇಕಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರ ಮನೆಯಲ್ಲಿ ಇಂಡಿಯನ್‌ ಟಾಯ್ಲೆಟ್‌ ವಿಧಾನ ಮಾಯವಾಗಿದೆ. ಹೆಚ್ಚಿನ ಜನರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ವೆಸ್ಟರ್ನ್‌ ಟಾಯ್ಲೆಟ್‌  ಬಳಸುತ್ತಿರುತ್ತಾರೆ. ಆದರೆ ಈ ಟಾಯ್ಲೆಟ್ ಫ್ಲಶ್‌ನಲ್ಲಿ ಎರಡು ಬಟನ್‌ (Toilet Button)ಗಳಿರುತ್ತದೆ. ಅದು ಯಾಕೆ ಇದೆ? ಅದನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿಯಿರಿ.

Toilet Button

ಟಾಯ್ಲೆಟ್ ಫ್ಲಶ್‌ನಲ್ಲಿರುವ ಎರಡು ಬಟನ್‌ಗಳನ್ನು ಯಾವಾಗ ಬಳಸಬೇಕು?

ಫ್ಲಶ್‌ನಲ್ಲಿ ನೀರು ತುಂಬಿರುತ್ತದೆ. ಫ್ಲಶ್ ಮೇಲೆ ಎರಡು ಬಟನ್‌ಗಳಿರುತ್ತವೆ. ಟಾಯ್ಲೆಟ್ ಫ್ಲಶ್‌ನಲ್ಲಿರುವ ಒಂದು ಬಟನ್ ಚಿಕ್ಕದಾಗಿದೆ ಮತ್ತು ಇನ್ನೊಂದು ದೊಡ್ಡದಾಗಿದೆ ಎಂದು ನೀವು ಗಮನಿಸಿರಬಹುದು. ಕೆಲವರು ಎರಡೂ ಬಟನ್‌ಗಳನ್ನು ಏಕಕಾಲದಲ್ಲಿ ಒತ್ತುತ್ತಾರೆ. ಕೆಲವರು ಒಂದು ಸಮಯದಲ್ಲಿ ಒಂದನ್ನು ಮಾತ್ರ ಒತ್ತುತ್ತಾರೆ. ಎರಡನ್ನೂ ಒತ್ತುವುದರಿಂದ ಹೆಚ್ಚಿನ ನೀರು ಬಿಡುಗಡೆಯಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ ದೊಡ್ಡ ಬಟನ್‌ ಒತ್ತುವುದರಿಂದ ಒಮ್ಮೆಗೆ 5-7 ಲೀಟರ್ ನೀರು ಬಿಡುಗಡೆಯಾಗುತ್ತದೆ.

Toilet Button

ಇನ್ನು ಸಣ್ಣ ಒತ್ತಿದಾಗ ಕೇವಲ ಮೂರರಿಂದ ನಾಲ್ಕು ಲೀಟರ್ ನೀರು ಮಾತ್ರ ಕಮೋಡ್‌ಗೆ ಹೋಗುತ್ತದೆ. ಅಂದರೆ  ನೀವು ಮೂತ್ರ ವಿಸರ್ಜಿಸಲು ಹೋದಾಗ ಸಣ್ಣ ಬಟನ್ ಅನ್ನು ಬಳಸಬೇಕು, ಏಕೆಂದರೆ ಅದನ್ನು ಹೊರಹಾಕಲು ಹೆಚ್ಚು ನೀರು ಅಗತ್ಯವಿಲ್ಲ. ಅದೇ ಸಮಯದಲ್ಲಿ, ಮಲ ವಿಸರ್ಜನೆ ಮಾಡಿದಾಗ ದೊಡ್ಡ ಬಟನ್ ಒತ್ತಬೇಕು. ಏಕೆಂದರೆ ಇದರ ಸ್ವಚ್ಛತೆಗೆ ಹೆಚ್ಚಿನ ನೀರು ಬೇಕಾಗುತ್ತದೆ.

ಇದನ್ನೂ ಓದಿ:ಗಲ್ಲ ಗಿಂಡಿದ ಗೆಳೆಯನಿಗೆ ಕಪಾಳಮೋಕ್ಷ ಮಾಡಿದ ಮದುಮಗ? ಗಂಡನ ಪ್ರತಾಪಕ್ಕೆ ಬೆಚ್ಚಿ ಬಿದ್ದ ವಧು; ವಿಡಿಯೊ ನೋಡಿ

ಆದರೆ, ಹೆಚ್ಚಿನ ಜನರು ಇದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಅನೇಕ ಬಾರಿ ಎರಡೂ ಬಟನ್‌ಗಳನ್ನು ಒತ್ತುತ್ತಾರೆ. ಹೀಗೆ ಮಾಡುವುದರಿಂದ ಹೆಚ್ಚಿನ ನೀರು ಹೊರಬರುವುದಿಲ್ಲ. ಸಹಜವಾಗಿ, ಫ್ಲಶ್ ಟ್ಯಾಂಕ್ ಸಂಪೂರ್ಣವಾಗಿ ಖಾಲಿಯಾಗಿರುತ್ತದೆ. ಎರಡೂ ಬಟನ್‌ಗಳನ್ನು ಪದೇ ಪದೇ ಒತ್ತುವುದರಿಂದ ಅವು ಹಾಳಾಗಬಹುದು. ಹಾಗಾಗಿ ಒಂದು ಸಮಯದಲ್ಲಿ ಒಂದು ಬಟನ್ ಒತ್ತುವುದು ಉತ್ತಮ. ಯಾವಾಗ ಯಾವ ಬಟನ್‌ ಒತ್ತಬೇಕು ಎನ್ನುವುದು ನೆನಪಿನಲ್ಲಿರಲಿ!