Saturday, 28th September 2024

Dasara Shopping 2024: ವೀಕೆಂಡ್‌‌‌ನಲ್ಲೇ ನಡೆಯುತ್ತಿದೆ ದಸರಾ- ನವರಾತ್ರಿ ಭರ್ಜರಿ ಶಾಪಿಂಗ್‌!

Dasara Shopping 2024

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಮುಂಬರುವ ವಾರದಲ್ಲಿ ಆಗಮಿಸುವ ದಸರಾ/ನವರಾತ್ರಿಗೆ ಈ ವೀಕೆಂಡ್‌ನಲ್ಲೇ ಭರ್ಜರಿ ಶಾಪಿಂಗ್‌ (Dasara Shopping 2024) ಮಾಡುವವರು ಹೆಚ್ಚಾಗಿದ್ದಾರೆ. ಮಾಲ್‌ಗಳಲ್ಲಿ ಮಾತ್ರವಲ್ಲ, ಲೋಕಲ್‌ ಸ್ಟ್ರೀಟ್‌ ಶಾಪ್‌ಗಳಲ್ಲಿ, ಸ್ಥಳೀಯ ಶಾಪಿಂಗ್‌ ಸೆಂಟರ್‌ಗಳಲ್ಲೂ (Shopping Center) ಜನಸಂದಣಿ ಹೆಚ್ಚಾಗಿದೆ. ದಸರಾ (Dasara) ಹಾಗೂ ನವರಾತ್ರಿ (Navaratri) ಹೆಸರಲ್ಲಿ, ಈಗಾಗಲೇ ಮಾರುಕಟ್ಟೆಗೆ ಫೂಜಾ ಸಾಮಗ್ರಿಗಳಿಂದಿಡಿದು, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ಸಾಮಗ್ರಿಗಳು, ಎಥ್ನಿಕ್‌ವೇರ್ಸ್, ಜ್ಯುವೆಲರಿಗಳು ಎಲ್ಲವೂ ಎಂಟ್ರಿ ನೀಡಿವೆ.

ಚಿತ್ರಗಳು: ಮಿಂಚು

ಗ್ರಾಹಕರನ್ನು ಸೆಳೆಯುತ್ತಿರುವ ಆಫರ್‌ಗಳು

ಈಗೆಲ್ಲಾ ಹಬ್ಬ ಸಮೀಪಿಸುತ್ತಿರುವಂತೆಯೇ ಅದರಲ್ಲೂ ವೀಕೆಂಡ್‌ನಲ್ಲಿ ಸಮಯಾವಕಾಶ ಹೆಚ್ಚಿರುವುದರಿಂದ ಶಾಪಿಂಗ್‌ ಮಾಡುವವರು ಹೆಚ್ಚು ಎನ್ನುತ್ತಾರೆ ಮಾಲ್‌ವೊಂದರ ಮ್ಯಾನೇಜರ್‌. ಸಾಕಷ್ಟು ಮಾಲ್‌ಗಳಲ್ಲಿ ದಸರಾ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಾಡಕ್ಟ್ಸ್ ಮೇಲೆ ರಿಯಾಯಿತಿ ಸೇರಿದಂತೆ ನಾನಾ ಬಗೆಯ ಆಫರ್‌ಗಳನ್ನು ನೀಡಲಾಗುತ್ತಿದೆಯಂತೆ.

ಇನ್ನು, ಮಲ್ಲೇಶ್ವರ, ಜಯನಗರ, ಗಾಂಧಿಬಜಾರ್‌, ಬನಶಂಕರಿಯಂತಹ ಮಧ್ಯಮವರ್ಗದ ಏರಿಯಾಗಳಿಂದಿಡಿದು ಹೈ ಲೈಫ್‌ಸ್ಟೈಲ್‌ ಜನರ ಇಂದಿರಾನಗರದ ಸ್ಟ್ರೀಟ್ಸ್ ಹಾಗೂ ಸಫೀನಾ ಪ್ಲಾಜಾ, ಕಮರ್ಷಿಯಲ್‌ ಸ್ಟ್ರೀಟ್‌ನಲ್ಲೂ ಜನರು ತುಂಬಿ ತುಳುಕಾಡುತ್ತಿದ್ದಾರೆ.

ದಸರಾ ಸೀಸನ್‌ನಲ್ಲಿ ಎಥ್ನಿಕ್‌ವೇರ್ಸ್ ಹೆಚ್ಚಾದ ಬೇಡಿಕೆ

ದಸರಾ/ನವರಾತ್ರಿ ಹಬ್ಬಕ್ಕೆ ಪೂರಕ ಎಂಬಂತೆ, ಈ ಹಬ್ಬದ ಸೀಸನ್‌ನಲ್ಲಿ ಹಬ್ಬಕ್ಕೆ ಧರಿಸುವ ಟ್ರೆಡಿಷನಲ್‌ ಹಾಗೂ ಎಥ್ನಿಕ್‌ ಡಿಸೈನರ್‌ವೇರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಮಕ್ಕಳು, ಮಹಿಳೆಯರು, ಪುರುಷರು ಹಾಗೂ ಹಿರಿಯರು ಸೇರಿದಂತೆ ಎಲ್ಲಾ ವರ್ಗಕ್ಕೂ ಹೊಂದುವಂತಹ ನಾನಾ ಬಗೆಯ ಎಥ್ನಿಕ್‌ವೇರ್‌ಗಳು ಈಗಾಗಲೇ ಎಲ್ಲೆಡೆ ಮಾರಾಟಗೊಳ್ಳುತ್ತಿವೆ.

ಭರ್ತಿಯಾದ ಜ್ಯುವೆಲರಿ ಶಾಪ್‌ಗಳು

ಕೇವಲ ಎಥ್ನಿಕ್‌ವೇರ್ಸ್ ಮಾತ್ರವಲ್ಲ, ಬೆಳ್ಳಿ-ಬಂಗಾರ ಹಾಗೂ ಇಮಿಟೇಷನ್‌ ಜ್ಯುವೆಲರಿಗಳ ಅಂಗಡಿಗಳು ಈ ಬಾರಿ ಭರ್ತಿಗೊಂಡಿವೆ. ಮೇಕಿಂಗ್‌ ಚಾರ್ಜ್‌, ವೇಸ್ಟೇಜ್‌ ಹೀಗೆ ನಾನಾ ಎಕ್ಸ್ಟ್ರಾ ಶುಲ್ಕವನ್ನು ತೆಗೆದುಕೊಳ್ಳದೆ ನೀಡುತ್ತಿರುವಂತಹ ಆಭರಣದ ಅಂಗಡಿಗಳತ್ತ ಗ್ರಾಹಕರು ವಾಲುತ್ತಿದ್ದಾರೆ ಎನ್ನುತ್ತಾರೆ ಶಾಪಿಂಗ್‌ ಎಕ್ಸ್‌ಪರ್ಟ್ಸ್.

ಗೃಹೋಪಯೋಗಿ ಸಾಮಗ್ರಿಗಳ ಖರೀದಿ

ಕೇವಲ ಫ್ಯಾಷನ್‌ವೇರ್ಸ್ ಹಾಗೂ ಆಭರಣಗಳಿಗಳಿಗೆ ಮಾತ್ರ ಡಿಸ್ಕೌಂಟ್‌ ಹಾಗೂ ಆಫರ್‌ಗಳ ಸುರಿಮಳೆಯಾಗುತ್ತಿಲ್ಲ, ಎಲೆಕ್ಟ್ರಾನಿಕ್‌ ಐಟಂಗಳು, ಹೋಮ್‌ ಡೆಕೋರ್‌ ಸಾಮಗ್ರಿ ಸೇರಿದಂತೆ ನಾನಾ ಬಗೆಯ ಗೃಹಪಯೋಗಿ ಸಾಮಗ್ರಿಗಳಿಗೂ ಇದು ಎಕ್ಸ್‌ಟೆಂಡ್‌ ಆಗಿದೆ. ಹಾಗಾಗಿ, ಸಾಕಷ್ಟು ಕಡೆ ನೀಡಲಾಗುತ್ತಿರುವ, ಈ ರೀತಿಯ ಭರಪೂರ ಅಫರ್ಸ್‌ ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುತ್ತಿವೆ.

ಈ ಸುದ್ದಿಯನ್ನೂ ಓದಿ | Fashion Show News: ಅಲೆಕ್ಸ್ ಫ್ಯಾಷನ್‌ ಡಿಸೈನರ್‌ ಶೋ; ಸೆಲೆಬ್ರಿಟಿ ಶೋ ಸ್ಟಾಪರ್‌ ವಾಕ್‌ ಮಾಡಿದ ಸಂಗೀತಾ ಹೊಳ್ಳ

ವೀಕೆಂಡ್‌ ಶಾಪಿಂಗ್‌ ಪ್ರಿಯರಿಗೆ ಟಿಪ್ಸ್

ಮೊದಲೇ ಎಲ್ಲೆಲ್ಲಿ ಏನೇನು? ಶಾಪಿಂಗ್‌ ಮಾಡಬೇಕು ಎಂಬುದನ್ನು ನಿರ್ಧರಿಸಿ ತೆರಳಿ.
ಆಫರ್‌ ಹಾಗೂ ಡಿಸ್ಕೌಂಟ್ಸ್ ಕುರಿತು ಮೊದಲೇ ಕನ್‌ಫರ್ಮ್‌ ಮಾಡಿಕೊಂಡು ಶಾಪಿಂಗ್‌ ಮಾಡಿ.
ನ್ಯೂ ಅರೈವಲ್‌ ಕೆಟಗರಿಗೆ ಯಾವುದೇ ರೀತಿಯ ರಿಯಾಯತಿ ಇರುವುದಿಲ್ಲ ಎಂಬುದು ನೆನಪಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)