ತಿಪಟೂರು: ನಗರದ ಬಿ.ಹೆಚ್. ರಸ್ತೆಯಲ್ಲಿರುವ ಎಸ್.ವಿ.ಪಿ ಶಿಕ್ಷಣ ಸಂಸ್ಥೆಗಳ ಶಾಲಾ ಆವರಣದಲ್ಲಿ ಅಕ್ಟೋಬರ್ ೨ ರ ಬುಧವಾರ ಬೆಳಿಗ್ಗೆ ೧೦ರಿಂದ ಮಧ್ಯಾಹ್ನ ೩.೦೦ ರವರೆಗೆ ತಿಪಟೂರಿನ ಶ್ರೀ ವಿದ್ಯಾಪೀಠ ಮತ್ತು ಸುಮತಿ ಶಿಕ್ಷಣ ಸಂಸ್ಥೆಗಳು, ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ತಿಪಟೂರ್ ಹೆಲ್ತ್ ಸೆಂಟರ್, ಶ್ರೀ ಸತ್ಯ ಕುಮಾರ್ ರಿಲೀಫ್ ಫೌಂಡೇಷನ್ , ಜ್ಯೋತಿ ನೇತ್ರಾಲಯ ಹಾಗೂ ವೈಭವಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇವರ ಸಹಯೋಗದೊಂದಿಗೆ ಕೀಲು ಮತ್ತು ಮೂಳೆ ತಜ್ಞರಾಗಿದ್ದ,ಲಿಂಗೈಕ ಡಾ.ಟಿ.ಆರ್.ಸತೀಶ್ ಕುಮಾರ್ ರವರ ವಾರ್ಷಿಕ ಪುಣ್ಯ ಸ್ಮರಣೆಯ ಅಂಗವಾಗಿ ಉಚಿತ ಬೃಹತ್ ಆರೋಗ್ಯ ತಪಾಸಣಾ ಮತ್ತು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಎಸ್.ವಿ.ಪಿ ಸಂಸ್ಥೆಯ ಸಂಸ್ಥಾಪಕ ಎಸ್.ಕೆ.ರಾಜಶೇಖರ್ ತಿಳಿಸಿದರು.
ಎಸ್.ವಿ.ಪಿ ಸಂಸ್ಥೆಯ ಸಂಸ್ಥಾಪಕ ಎಸ್.ಕೆ ರಾಜಶೇಖರ್ ಮಾತನಾಡಿ, ಸತೀಶ್ ರವರ ಅಗಲಿಕೆ ನೋವು ಒಂದು ವರ್ಷ ಕಳೆದರೂ ನಮ್ಮ ಕುಟುಂಬದಲ್ಲಿ ಇನ್ನು ಮರೆತಿಲ್ಲ. ಅದರಲ್ಲಿಯೂ ಆತನ ಸ್ನೇಹಿತರು ಇಂದು ತುಂಬಾ ದುಃಖದಲ್ಲಿ ರುವುದು ಕಂಡು ಬಂದಿದೆ. ಇವರ ಸೇವೆ ಇಡೀ ತಾಲೂಕಿನ ಬಡ ಜನರಿಗೆ ಅನುಕೂಲವಾಗಿದ್ದು, ತೀರ ಹಿಂದುಳಿದ ಸಾರ್ವಜನಿಕರಿಗೆ ಚಿಕಿತ್ಸೆ ಮತ್ತು ಮೆಡಿಸಿನ್ ಉಚಿತವಾಗಿ ನೀಡುತ್ತಿದ್ದು ಈಗಲೂ ಸಾರ್ವಜನಿಕರು ಮಾತನಾಡಿ ಕೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಮಹಾತ್ಮ ಗಾಂಧೀಜಿಯವರ ದಿನದಂದು, ವರ್ಷದ ಪುಣ್ಯ ದಿನ ವನ್ನಾಗಿ ನಾವು ಮತ್ತು ಸಂಸ್ಥೆಯ ನೌಕರ ವೃಂದ ಸೇರಿಕೊಂಡು ಆರೋಗ್ಯ ಶಿಬಿರ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಎಂ.ಆರ್.ಸಂಗಮೇಶ್ ಮಾತನಾಡಿ, ಸತೀಶ್ ರವರು ಕೋವಿಡ್ ಸಮಯದಲ್ಲಿ ಮಾಡಿದ ಸೇವೆ ತಾಲೂಕಿನಲ್ಲಿ ಇನ್ನೂ ಶಾಶ್ವತವಾಗಿ ಉಳಿದಿದ್ದು, ಈ ಶಿಬಿರದಲ್ಲಿ ರಕ್ತದಾನ ಶಿಬಿರ ಸೇರಿದಂತೆ ಮೂತ್ರಪಿಂಡ ಸಂಬಂಧಿಸಿದ ರೋಗಿಗಳು, ಹೃದಯರೋಗ ಸಂಬಂಧಿಸಿದ ರೋಗಿಗಳು, ಮೂತ್ರ ಪಿಂಡದಲ್ಲಿ ಹರಳು. (ಕಿಡ್ನಿ ಸ್ಟೋನ್), ಉಸಿರಾಟದ ತೊಂದರೆ ಹಾಗೂ ಹುಟ್ಟಿನಿಂದ ಹೃದಯ ಸಮಸ್ಯೆ, ಬೆಳವಣಿಗೆ ಕುಂಠಿತ ಹೆಚ್ಚು ದೇಹ ತೂಕ ಉಳ್ಳವರು. ಹೃದಯರೋಗ,ನರರೋಗ ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಯಿರು ವವರಿಗೆ, ಬೆನ್ನು ನೋವು,ಕುತ್ತಿಗೆ ನೋವು, ಮೆದುಳಿನ ಗಡ್ಡೆ ಮೇಲಿನ ಸಮಸ್ಯೆಗಳಿಂದ ಬಳಲುತ್ತಿರುವವರು ಭಾಗ ವಹಿಸಬಹುದು ಎಂದರು.
ಈ ಶಿಬಿರದಲ್ಲಿ ಕಣ್ಣಿನ ತಪಾಸಣೆ ಸೇರಿದಂತೆ ತಜ್ಞ ವೈದ್ಯರ ಸಲಹೆ ಮೇರೆಗೆ ಶಿಬಿರದಲ್ಲಿ ಉಚಿತವಾಗಿ ಬಿ.ಪಿ/ಇ.ಸಿ.ಜಿ/೨ಡಿ ಎಕೋ ಸ್ಕ್ಯಾನಿಂಗ್ ಮಾಡಲಾಗುವುದು. 1ನೇ ತರಗತಿಯಿಂದ 10ನೇ ತರಗತಿಯಲ್ಲಿ ಓದುತ್ತಿರುವ ಮಕ್ಕಳಲ್ಲಿ ಹೃದಯ ಸಮಸ್ಯೆ ಕಂಡುಬಂದವರಿಗೆ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆಯನ್ನು ಅವಶ್ಯಕತೆ ಇದ್ದಲ್ಲಿ ಉಚಿತ ವಾಗಿ ಮಾಡಲಾಗುವುದು.
ಹೃದಯರೋಗ, ನರರೋಗ, ಕಿಡ್ನಿಯಲ್ಲಿನ ಕಲ್ಲಿನ ಸಮಸ್ಯೆಗೆ ಬಿ.ಪಿ.ಎಲ್ ಹಸಿರು ಅಂತ್ಯೋದಯ ರೇಷನ್ ಕಾರ್ಡು ದಾರರಿಗೆ ಉಚಿತವಾಗಿ ಹೆಚ್ಚಿನ ಚಿಕಿತ್ಸೆ ಅಥವಾ ಶಸ್ತ್ರ ಚಿಕಿತ್ಸೆಯನ್ನು ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನಲ್ಲಿ ನೀಡಲಾಗು ವುದು. ಎಸ್.ವಿ. ಪಿ ಕಾಲೇಜಿನ ಪ್ರಾಂಶುಪಾಲ ಕೆ.ಎನ್.ರೇಣುಕಯ್ಯ ಮಾತ ನಾಡಿ, ಸತೀಶ್ ರವರ ನೆನಪು ಮತ್ತು ಸಾಧನೆಗಳನ್ನು ತಿಳಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಸಾಮಾಜಿಕವಾದ ಕಾರ್ಯ ಕ್ರಮಗಳನ್ನು ಆಯೋಜನೆ ಮಾಡುವ ನಿಟ್ಟಿನಲ್ಲಿ ಈ ವರ್ಷ ಬೃಹತ್ ಆರೋಗ್ಯ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಂಗಾಪುರ ಗ್ರಾಪಂ ಮಾಜಿ ಅಧ್ಯಕ್ಷ ಪಟೇಲ್ ರೇಣುಕಪ್ಪ, ಮತ್ತು ಜ್ಯೋತಿ ನೇತ್ರಾಲಯದ ಅಪ್ಸರ್ ಪಾಷಾ ಹಾಜರಿದ್ದರು.
ಇದನ್ನೂ ಓದಿ: Tumkur Breaking: ಮಗನ ಸಾವಿಗೆ ನೊಂದು ತಂದೆ ಮೃತ