ತುಂಟರಗಾಳಿ
ಹರಿ ಪರಾಕ್
ಸಿನಿಗನ್ನಡ
ಕೆಲವು ಸ್ಟಾರ್ ಸಿನಿಮಾಗಳು ಥಿಯೇಟರ್ಗಳಲ್ಲಿ ಬಿಡುಗಡೆ ಆಗಿ ಒಂದು ತಿಂಗಳು ಕಳೆಯುವ ಮುನ್ನವೇ ಓಟಿಟಿಗೆ ಕಾಲಿಡುತ್ತವೆ. ಅವುಗಳಲ್ಲಿ ಕೆಲವು ಚಿತ್ರಮಂದಿರದಲ್ಲಿ ಗೆದ್ದ ಚಿತ್ರಗಳೇ; ಆದರೆ ಇನ್ನು ಕೆಲವು ಸೋತ ಚಿತ್ರಗಳು
ಓಟಿಟಿಯದರೂ ದುಡ್ಡು ಮಾಡೋಣ ಅಂತ ಬಹಳ ಮುಂಚೆನೇ ಸೇಲ್ ಆಗಿಬಿಡುತ್ತವೆ. ಚಿತ್ರಮಂದಿರಗಳಲ್ಲಿ ಸದ್ದು ಮಾಡಲಿಲ್ಲವಾದರೂ ನಿರ್ಮಾಪಕರು ‘ಸಿನಿಮಾ ಸಕ್ಸಸ್’ ಅನ್ನೋದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ‘ಸಿನಿಮಾ ಅಷ್ಟು ಕೋಟಿ ಗಳಿಕೆ ಮಾಡಿದೆ’ ಎಂದು ಹೇಳೋದು, ಎಲ್ಲದರ ನಂತರವೂ ಆ ಚಿತ್ರದ ಗಳಿಕೆಯ ಅಸಲಿ ಯತ್ತು ಎಲ್ಲರಿಗೂ ಗೊತ್ತಿರುತ್ತದೆ.
ಹಾಗಾಗಿ ಈಗ, ಕಳೆದ ತಿಂಗಳು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಂಡಿದ್ದ ಚಿತ್ರ ಈ ತಿಂಗಳು ಶುರು ಆಗೋ ಮುನ್ನವೇ ಓಟಿಟಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅದರ ಜತೆಗೇ ಮತ್ತೆ ಸಿನಿಮಾ ವಿಮರ್ಶೆ ಮಾಡುವವರು ಸೋಷಿ
ಯಲ್ ಮೀಡಿಯಾಗಳಲ್ಲಿ ಬ್ಯುಸಿ ಆಗುತ್ತಾರೆ. ಒಂದು ಬದಲಾವಣೆ ಅಂದ್ರೆ, ಸಿನಿಮಾ ಬಿಡುಗಡೆ ಆದಾಗ
ಸಿನಿಮಾ ಚೆನ್ನಾಗಿಲ್ಲ ಅಂತ ಹೇಳೋಕೆ ಹಿಂದೆ-ಮುಂದೆ ನೋಡ್ತಾ ಇದ್ದವರು, ಈಗ ಸಾರಾಸಗಟಾಗಿ ‘ನಿರ್ದೇಶಕರು ಹಂಗ್ ಮಾಡಿದ್ದಾರೆ, ಹಿಂಗ್ ಮಾಡಿದ್ದಾರೆ’ ಅಂತ ನೇರವಾಗಿ ಟೀಕೆ ಮಾಡುತ್ತಾರೆ.
ಪ್ರೇಕ್ಷಕರ ಮಟ್ಟಿಗೆ ಚಿತ್ರಮಂದಿರಗಳಲ್ಲಿ ಫೇಲ್ ಆದ ಇಂಥ ಚಿತ್ರಗಳನ್ನು ನೋಡೋಕೆ ಎಷ್ಟು ಜನ ಆಸಕ್ತಿ
ತೋರಿಸ್ತಿzರೆ ಅನ್ನೋದ್ರ ಬಗ್ಗೆ ಇನ್ನೂ ಅಂಕಿ-ಅಂಶಗಳು ಸಿಕ್ಕಿಲ್ಲ. ಥಿಯೇಟರ್ನಲ್ಲಂತೂ ಸಿನಿಮಾ ನೋಡೋಕೆ ಪ್ರೇಕ್ಷಕರು ಬರಲಿಲ್ಲ, ಇದ್ರೂ ಬರ್ತಾರಾ ಅಂತ ನಿರ್ಮಾಪಕರು ಕಾಯ್ತಾ ಇರುತ್ತಾರೆ. ಆದರೆ, ಚಿತ್ರಮಂದಿರಕ್ಕೆ ಬಾರದವರು ಓಟಿಟಿಗೆ ಬಂದಾರೆಯೇ? ಅಂತ ಗಾಂಧಿನಗರದ ಪಂಡಿತರು, ‘ಅದು ಮುಂದುವರಿದ ಅಧ್ಯಾಯ
ಅಲ್ಲ, ಮುಗಿದ ಅಧ್ಯಾಯ; ಮುಂದಿನ ಸಿನಿಮಾ ಬಗ್ಗೆ ಮಾತಾಡಿ’ ಅಂತಿರೋದಂತೂ ಸತ್ಯ.
ಲೂಸ್ ಟಾಕ್ – ಸಿದ್ದರಾಮಯ್ಯ
ನಿಮ್ಮ ವಿರುದ್ಧ ತನಿಖೆ ಶುರು ಆಗಿದೆಯಲ್ಲ ಸರ್. ಪರಿಣಾಮ ಏನಾಗಬಹುದು?
- ಅಯ್ಯೋ ‘ತನಿಖೆ’ ಏನ್ ಬಿಡಿ, ಗುಲ್ಜಾರ್ ಖಾನ್ ಕೂಡಾ ಮಾಡಿದ್ರು. ಅದು ಫ್ಲಾಪ್ ಆಯ್ತು ತಾನೇ.
ಇದೂ ಹಂಗೇ ಫ್ಲಾಪೇ ಆಗೋದು. - ಆದ್ರೂ, ಎಲ್ರೂ ನಿಮ್ಮನ್ನ ಈಗಾಗ್ಲೇ ‘ಗಿ’ ಸಿಎಂ ಅಂತಿದ್ದಾರಲ್ಲ?
- ಅವ್ರು ನನ್ನ ಟ್ವಿಟರ್ ಅಕೌಂಟ್ ನೋಡಿ ಹೇಳಿರಬೇಕು ಬಿಡಿ.
- ಅಂದ್ರೆ ನಿಮಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲ್ಲ ಅಂತೀರಾ?
- ಆಗುತ್ತೆ ಅಂತ ಅಂದ್ಕೊಳ್ಳೋದೆಲ್ಲ ‘ಮುಡಾ’ನಂಬಿಕೆ.
- ಕುಮಾರಸ್ವಾಮಿ ಅವರ ಮೇಲೂ ಆರೋಪ ಗಳಿವೆಯಲ್ಲ. ಅವರ ಗತಿ ಏನಾಗಬಹುದು?
- ಅವ್ರು ನಮ್ಗೆ ಅಣ್ತಮ್ಮ ಇದ್ದಂಗೆ. ಅಲ್ದೆ ಅವ್ರು ಎಲ್ರನ್ನೂ ‘ಬ್ರದರ್’ ಅಂತಿರ್ತಾರೆ. ಅಂಥವ್ರನ್ನ ಬಿಟ್ ಕೊಡೋಕೆ ಆಗುತ್ತಾ. ನಾನ್ ಜೈಲಿಗೆ ಹೋದರೆ ಅವ್ರನ್ನೂ ಕರ್ಕೊಂಡೇ ಹೋಗೋದು.
- ಅಂದ್ರೆ ನಿಮಗೆ ಜೈಲಿಗೆ ಹೋಗೋ ಭಯ ಇದೆ ಅನ್ನಂಗಾಯ್ತು?
- ಹಂಗೇನಿಲ್ಲ. ಆದ್ರೆ, ಜೈಲ್ಗೆ ಹೋಗೋದು ಸೂಕ್ಷ್ಮ ಸಂಗತಿ. ತುಂಬಾ -‘ಜೈಲ್’ ವಿಷ್ಯ. ಅದಕ್ಕೆ ಹೇಳ್ದೆ.
- (ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ರಾಮು, ಸೋಮು, ಖೇಮು ಸಿಬಿಐ ಇಂಟರ್ವ್ಯೂಗೆ ಹೋಗಿದ್ದರು. ಅಲ್ಲಿ ಯಾವ ರೀತಿಯ ಪ್ರಶ್ನೆಗಳನ್ನು ಕೇಳಬಹುದು ಎಂಬ ಕುತೂಹಲದ ಮೂವರೂ ಹೊರಗೆ ಕೂತಿದ್ದರು. ಸ್ವಲ್ಪ ಹೊತ್ತಿನ ರಾಮು ಸರದಿ ಬಂತು. ಒಳಗೆ ಹೋದ ರಾಮುಗೆ ಕಂಪ್ಯೂಟರ್ನಲ್ಲಿ ಒಬ್ಬ ಶಂಕಿತ ಉಗ್ರಗಾಮಿಯ ಫೋಟೋ ತೋರಿಸಿದ ಸಂದರ್ಶಕರು ‘ಈ ಫೋಟೋದಿಂದ ನಿಮಗೆ ಏನಾದರೂ ಕ್ಯೂ ಸಿಗುತ್ತಾ?’ ಅಂತ ಕೇಳಿದ್ರು. ರಾಮು ಒಂದರೆಕ್ಷಣ ಯೋಚಿಸಿ, ‘ಇವನಿಗೆ ಬಲಗಾಲೇ ಇಲ್ಲ’ ಅಂದ. ಸಂದರ್ಶಕರು ‘ಯಾಕೆ?’ ಅಂತ ಕೇಳಿದಾಗ ರಾಮು ಹೇಳಿದ, ‘ನೋಡಿ, ಫೋಟೋದಲ್ಲಿ ಅವನ ಎಡಗಾಲು ಮಾತ್ರ ಕಾಣುತ್ತಿದೆ. ಬಲಗಾಲು ಕಾಣುತ್ತಿಲ್ಲ’ ಅಂದ.
ಸಿಟ್ಟಿಗೆದ್ದ ಸಂದರ್ಶಕರು, ‘ಅಯ್ಯೋ ನಿನ್ನ, ಅವನು ಎಡಕ್ಕೆ ತಿರುಗಿ ನಿಂತಿದಾನೆ ಅದಕ್ಕೆ ಬಲಗಾಲು ಕಾಣ್ತಾ ಇಲ್ಲ ಅಷ್ಟೆ, ನಡಿ ಮನೆಗೆ’ ಅಂತ ಕಳಿಸಿದರು. ನಂತರ ಸೋಮು ಸರದಿ ಬಂತು. ಅವನಿಗೂ ಅದೇ ಫೋಟೋ ಅದೇ ಪ್ರಶ್ನೆ. ಎಷ್ಟೇ ಆದರೂ ಸ್ನೇಹಿತರಲ್ಲವೇ? ಹಾಗಾಗಿ ಸೋಮು ಉತ್ತರ ಕೂಡ ಅದೇ ಆಗಿತ್ತು ಮತ್ತು ಸಂದರ್ಶಕರಿಂದ ಅದೇ ಬೈಗುಳ ಸಿಕ್ಕಿತು. ಕೊನೆಯದಾಗಿ ಖೇಮುವನ್ನು ಕರೆಸಿದರು. ಅವನಿಗೂ ಅದೇ ಫೋಟೋ, ಅದೇ ಪ್ರಶ್ನೆ.
ಖೇಮು ಒಂದರೆಕ್ಷಣ ಯೋಚಿಸಿ, ‘ಈತ ಮರದ ಕಾಲು ಹಾಕ್ಕೊತಾನೆ’ ಅಂದ. ಸಂದರ್ಶಕರಿಗೆ ಅಚ್ಚರಿ, ‘ಇರು ಒಂದ್ ನಿಮಿಷ’ ಅಂತ ಹೇಳಿ, ಆ ಉಗ್ರಗಾಮಿಯ ಪ್ರೊಫೈಲ್ ಚೆಕ್ ಮಾಡಿ ನೋಡಿದರು. ಖೇಮು ಹೇಳಿದ್ದು ಸರಿ ಇತ್ತು. ಸಂದರ್ಶಕರು ಫುಲ್ ಇಂಪ್ರೆಸ್ ಆಗಿ, ‘ಅವನು ಮರದ ಕಾಲು ಹಾಕ್ಕೊತಾನೆ ಅಂತ ನಿಮಗೆ ಹೇಗೆ ಗೊತ್ತಾಯ್ತು?’ ಅಂತ ಕೇಳಿದ್ರು. ಅದಕ್ಕೆ ಖೇಮು ತಣ್ಣಗೆ ಹೇಳಿದ, ‘ಆ ಫೋಟೋ ನೋಡಿ, ಅವನಿಗೆ ಬಲಗಾಲೇ ಇಲ್ಲ, ಆದ್ರೂ ಅವನು ಎ ಕಡೆ ಓಡಾಡಿಕೊಂಡು ಉಗ್ರಗಾಮಿ ಕೆಲಸ ಮಾಡ್ತಾನೆ ಅಂದ್ರೆ ಅವನು ಮರದ ಕಾಲು ಹಾಕ್ಕೋತಿರ್ಬೇಕು ಅಂತ ಗೆಸ್ ಮಾಡಿದೆ’.
ಲೈನ್ ಮ್ಯಾನ್
ಕುಡಿತ ಬಿಡಿಸುವ ಕೆಲಸ
- ಡಿ ‘ವೈನ್’
- ಹಳೇ ಕಾಲದ ಹಳ್ಳಿ ಶೈಲಿಯಲ್ಲಿ ಊಟ ಮಾಡೋ ಪದ್ಧತಿ
- ‘ತಾಟ್’ ಪ್ರೊಸೆಸ್
ದುಂಬಿ ಜೇನಿಗೆ ಹೇಳಿದ್ದೇನು?- ನಾನು ನಿನ್ನ ಮನದುಂಬಿ ಪ್ರೀತಿಸ್ತೀನಿ
- ಬರೀ ಕೆಲಸ ಮಾಡೋರದ್ದು- ಟಾಸ್ಕ್ ಫೋರ್ಸ್
- ಎಲ್ಲವನ್ನೂ ಬರೀ ಪ್ರಶ್ನೆ ಮಾಡುವವರ ಗುಂಪು- ಆ ಪೋರ್ಸ್
- ಧ್ರುವ ಸರ್ಜಾ ಓದುಗರ ಪ್ರಶ್ನೆಗೆ ಉತ್ತರಿಸುವ ಕಾಲಂ ಶುರು ಮಾಡಿದ್ರೆ ಅದರ ಹೆಸರು
- ಉತ್ತರ ಧ್ರುವ
- ಡೇಂಜರಸ್ ಆಗಿ ಡ್ರೈವ್ ಮಾಡೋ ಆಂಬುಲೆ ಡ್ರೈವರ್ಗೆ ಏನಂತ ಬಯ್ಬೇಕು?
- ಯಾಕೋ ಮಗನೇ, ಇವತ್ ಯಾರೂ ಗಿರಾಕಿ ಸಿಗಲಿಲ್ವಾ?
- ಪೂರಿಗೆ ಬರೀ ಚಟ್ನಿ ಕೊಟ್ಟಾಗ ಆಗೋ ಬೇಸರದಲ್ಲಿ ಮೂಡುವ ಹಾಡು
- ಏನಾಗಲಿ ಮುಂದೆ ‘ಸಾಗು’ ನೀ
- ಕುರಿ ಮಾಂಸ ತಿಂದು ಹೊಟ್ಟೆ ಬರಿಸಿಕೊಂಡವನು
- ಲ್ಯಾಂಬೋದರ
- ಮನುಷ್ಯನ ದೇಹದಲ್ಲಿ ಕೋಪ ಹುಟ್ಟಿಸುವ ಅಂಗ
- ‘ಪಿತ್ತ’ ಜನಕಾಂಗ
- ಫಸ್ಟ್ ನೇಮ್, ಲಾಸ್ಟ್ ನೇಮ್ ಅಂತ ಗೊಂದಲ ಯಾರಿಗೆ ಇರೋದಿಲ್ಲ?
- ಪಾಠ ಹೇಳಿ ಕೊಡೋ ಮಾಸ್ತರರಿಗೆ. ಯಾಕಂದ್ರೆ ಅವರದ್ದು ‘ಸರ್’ ನೇಮ…