Friday, 22nd November 2024

Lebanon-Israel war: ಚುನಾವಣೆ ಪ್ರಚಾರ ಬಿಟ್ಟು ಸತ್ತ ಹೆಜ್ಬುಲ್ಲಾ ನಾಯಕನಿಗಾಗಿ ಶೋಕಿಸುತ್ತಿರುವ ಮೆಹಬೂಬಾ, ಉಮರ್ ಅಬ್ದುಲ್ಲಾ!

Lebanon-Israel war

ಬೈರುತ್‌: ಲೆಬನಾನ್‌ನ ರಾಜಧಾನಿ ಬೈರುತ್‌ನಲ್ಲಿ ಇಸ್ರೇಲ್ ನಡೆಸಿದ ವೈಮಾನಿಕ ದಾಳಿ(Lebanon-Israel war)ಯಲ್ಲಿ ಹಿಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ (Hassan Nasrallah) ಹತ್ಯೆಯಾಗಿರುವುದನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದ ಶ್ರೀನಗರ ಮತ್ತು ಬುಡ್ಗಾಮ್ ಪ್ರದೇಶಗಳಲ್ಲಿ ನಿನ್ನೆಯಿಂದ ಭಾರೀ ಪ್ರತಿಭಟನೆ ನಡೆಯುತ್ತಿದೆ. ಇತ್ತ ಚುನಾವಣಾ ಪ್ರಚಾರ ಕೈಬಿಟ್ಟು ಕಣಿವೆ ರಾಜ್ಯದ ರಾಜಕೀಯ ನಾಯಕರೂ ನಸ್ರಲ್ಲಾ ಸಾವಿಗೆ ಶೋಕಾಚರಣೆ ನಡೆಸುತ್ತಿದ್ದಾರೆ.

ಇನ್ನು ತಮ್ಮ ಚುನಾವಣಾ ಪ್ರಚಾರ ರ್ಯಾಲಿಯನ್ನುರದ್ದುಗೊಳಿಸಿರುವ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ, ನಸ್ರಲ್ಲಾನನ್ನು ಹುತಾತ್ಮ ಎಂದು ಕರೆದಿದ್ದಾರೆ. ಲೆಬನಾನ್‌ನಲ್ಲಿ ಇಸ್ರೇಲ್‌ ಸೇನೆಯ ವೈಮಾನಿಕ ದಾಳಿಯಲ್ಲಿ ಹಸನ್‌ ನಸ್ರಲ್ಲಾ ಸೇರಿದಂತೆ ಅನೇಕರು ಹುತಾತ್ಮರಾಗಿರುವುದು ದುಃಖಕರ ಸಂಗತಿ ಎಂದು ಅವರ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ.

ಇನ್ನು ಮುಫ್ತಿ ಟ್ವೀಟ್‌ಗೆ ಅಕ್ರೋಶ ವ್ಯಕ್ತವಾಗುತ್ತಿದ್ದಂರೆ ಪಿಡಿಪಿಯ ಮಿತ್ರ ಪಕ್ಷ ಜೆಡಿಯು ಅವರ ಹೇಳಿಕೆಯಿಂದ ದೂರ ಉಳಿದಿದೆ. ಜೆಡಿಯು ಅಧ್ಯಕ್ಷ ಜಿ.ಎಂ ಶಹೀನ್‌ ಪ್ರತಿಕ್ರಿಯಿಸಿದ್ದು, ಅವರು ಮುಫ್ತಿಯವರ ವೈಯಕ್ತಿ ಹೇಳಿಕೆ. ಅದಕ್ಕೂ ನಮ್ಮ ಪಕ್ಷಕ್ಕೂ ಯಾವುದೇ ಸಂಬಂಧಿ ಇಲ್ಲ. ನಾವು ಮಾನವೀಯತೆಗೆ ಒತ್ತು ಕೊಡುವವರು ಎಂದು ಹೇಳಿದ್ದಾರೆ.

ಓಮರ್‌ ಅಬ್ದುಲ್ಲಾ ಪಕ್ಷದ ನಾಯಕನ ರ್ಯಾಲಿಯೂ ರದ್ದು

ಮತ್ತೊಂದೆಡೆ ಓಮರ್‌ ಅಬ್ದುಲ್ಲಾ ಪಕ್ಷವೂ ನಸ್ರಲ್ಲಾ ಸಾವಿಗೆ ಸಂತಾಪ ಸೂಚಿಸಿದೆ. ಪಕ್ಷದ ಶ್ರೀನಗರ ಸಂಸದ ಸೈಯದ್ ರುಹುಲ್ಲಾ ಮೆಹದಿ ಕೂಡ ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸಿದ್ಧಾರೆ. ಅವರು ಪಠಾಣ್‌ ಕ್ಷೇತ್ರದ ಅಭ್ಯರ್ಥಿ ಜಾವೈದ್‌ ರಿಯಾಜ್‌ ಬೇಡರ್‌ ಪರ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ನಸ್ರಲ್ಲಾ ಹತ್ಯೆ ಖಂಡಿಸಿ ತಮ್ಮ ರ್ಯಾಲಿಯನ್ನು ರದ್ದುಗೊಳಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Hassan Nasrallah: ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಹೊಡೆದುರುಳಿಸಿದ ಇಸ್ರೇಲ್‌ ಸೇನೆ