ಬೈರುತ್: ಇಸ್ರೇಲ್ ಸೇನೆ(Lebanon-Israel war) ನಡೆಸಿದ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನ (Hassan Nasrallah) ಹೊಡೆದುರುಳಿಸಿರುವ ಬೆನ್ನಲ್ಲೇ ಹೆಜ್ಬುಲ್ಲಾದ ಮತ್ತೊಬ್ಬ ಕಮಾಂಡರ್ ನಬಿಲ್ ಕೌಕ್(Nabil Kaouk)ನನ್ನು ಹತ್ಯೆ ಮಾಡಲಾಗಿದೆ. ಈ ಬಗ್ಗೆ ಸ್ವತಃ ಇಸ್ರೇಲ್ ಸೇನೆ ಮಾಹಿತಿ ಹಂಚಿಕೊಂಡಿದೆ. ಆದರ ಹೆಜ್ಬುಲ್ಲಾಗಳು ಈ ಬಗ್ಗೆ ಖಚಿತ ಪಡಿಸಿಲ್ಲ ಎನ್ನಲಾಗಿದೆ.
ಯಾರು ಈ ಕೌಕ್?
ನಬಿಲ್ ಕೌಕ್ 1995 ರಿಂದ 2010 ರವರೆಗೆ ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬೊಲ್ಲಾದ ಮಿಲಿಟರಿ ಕಮಾಂಡರ್ ಆಗಿದ್ದ. 2020 ರಲ್ಲಿ, ಅಮೆರಿಕವು ಈತ ಮತ್ತು ಹಿಜ್ಬುಲ್ಲಾ ಸಂಘಟನೆಯ ಇನ್ನೊಬ್ಬ ಸದಸ್ಯ ಹಸನ್ ಅಲ್-ಬಾಗ್ದಾದಿಯನ್ನು ಬ್ಯಾನ್ ಮಾಡಿತ್ತು. ಮಾತ್ರವಲ್ಲದೇ ಬ್ಲ್ಯಾಕ್ ಲಿಸ್ಟ್‌ಗೆ ಸೇರ್ಪಡೆ ಮಾಡಿತ್ತು. ಶುಕ್ರವಾರ ಇಸ್ರೇಲಿ ಮಿಲಿಟರಿ ನಡೆಸಿದ ಬೃಹತ್ ವೈಮಾನಿಕ ದಾಳಿಯಲ್ಲಿ ಇರಾನ್ ಬೆಂಬಲಿತ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಹೊಡೆದುರುಳಿಸಿದ ನಂತರ ಕೌಕ್‌ನನ್ನು ಹತ್ಯೆ ಮಾಡಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.
🚨 Breaking: Nabil Kauk, Hezbollah's deputy head of the operations council, was eliminated
— Dr. Eli David (@DrEliDavid) September 28, 2024
pic.twitter.com/JeaJ1MysiC
ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾನನ್ನು ಕೊಂದಿರುವುದಾಗಿ ಇಸ್ರೇಲ್ ಶನಿವಾರ ಘೋಷಿಸಿತ್ತು. ಈತನ ಸಾವನ್ನು ಹೆಜ್ಬುಲ್ಲಾ ಒಪ್ಪಿಕೊಂಡಿದೆ. ಲೆಬನಾನ್ ರಾಜಧಾನಿ ಬೈರುತ್‌ನಲ್ಲಿ (Lebanon capital Beirut) ನಡೆದ ಇಸ್ರೇಲ್‌ನ ವೈಮಾನಿಕ ದಾಳಿಯಲ್ಲಿ ಹೆಜ್ಬುಲ್ಲಾ ಸಂಘಟನೆಯ ಮುಖ್ಯಸ್ಥನನ್ನು ಕೊಲ್ಲಲಾಗಿದೆ. ಇದು ಲೆಬನಾನಿನ ಉಗ್ರಗಾಮಿ ಸಂಘಟನೆಗೆ ಬಹುದೊಡ್ಡ ಹೊಡೆತವನ್ನು ನೀಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಇಸ್ರೇಲ್ ಸೇನೆ ಮುಖ್ಯಸ್ಥ ಹರ್ಜಿ ಹಲೇವಿ, ಹೆಜ್ಬುಲ್ಲಾ ನಾಯಕ ಹಸನ್ ನಸ್ರಲ್ಲಾ ಹತ್ಯೆಯು ನಮ್ಮ ಕಾರ್ಯಾಚರಣೆಯ ಅಂತ್ಯವಲ್ಲ. ಈ ಮೂಲಕ ಉಗ್ರಗಾಮಿ ಸಂಘಟನೆಗೆ ಒಂದು ಸಂದೇಶವನ್ನು ನೀಡಿದ್ದೇವೆ. ಇಸ್ರೇಲ್ ನಾಗರಿಕರಿಗೆ ಬೆದರಿಕೆ ಹಾಕುವ ಯಾರಾದರೂ ಸರಿ, ಅವರನ್ನು ಹೇಗೆ ತಲುಪಬೇಕು ಎಂಬುದು ನಮಗೆ ತಿಳಿದಿದೆ ಎಂದು ತಿಳಿಸಿದ್ದಾರೆ.
ಇಸ್ರೇಲ್-ಹೆಜ್ಬುಲ್ಲಾ ಸಂಘರ್ಷ
ಇಸ್ರೇಲ್ ಮತ್ತು ಹೆಜ್ಬುಲ್ಲಾ ನಡುವಿನ ಸಂಘರ್ಷದಲ್ಲಿ ಮೃತಪಟ್ಟಿರುವ ನಸ್ರಲ್ಲಾ ಲೆಬನಾನಿನ ಉಗ್ರಗಾಮಿ ಸಂಘಟನೆಯ ಪರಮೋಚ್ಚ ನಾಯಕನಾಗಿದ್ದ. ಶುಕ್ರವಾರ ಬೈರುತ್‌ನಲ್ಲಿ ಅವರ ಮೇಲೆ ಇಸ್ರೇಲ್ ನಡೆಸಿದ ಸರಣಿ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾಹ್ ಅವರ ಪುತ್ರಿ ಝೈನಾಬ್ ಕೂಡ ಸಾವನ್ನಪ್ಪಿದ್ದಾಳೆ.
ಶುಕ್ರವಾರ ನಡೆದ ವೈಮಾನಿಕ ದಾಳಿಯಲ್ಲಿ ನಸ್ರಲ್ಲಾ ಜೊತೆಗೆ ಹಲವಾರು ಹಿರಿಯ ಹೆಜ್ಬುಲ್ಲಾ ನಾಯಕರನ್ನು ಕೊಲ್ಲಲಾಗಿದೆ ಎಂದು ಇಸ್ರೇಲ್ ಮಿಲಿಟರಿ ದೃಢಪಡಿಸಿದೆ. ಬೈರುತ್‌ನ ದಕ್ಷಿಣದ ಉಪನಗರವಾದ ದಹಿಯೆಹ್‌ನಲ್ಲಿರುವ ನಸ್ರಲ್ಲಾನ ಪ್ರಧಾನ ಕಚೇರಿಯಲ್ಲಿ ಹೆಜ್ಬುಲ್ಲಾದ ಸಭೆ ನಡೆಯುತ್ತಿದ್ದಾಗಲೇ ಈ ದಾಳಿ ನಡೆಸಲಾಗಿದೆ.
ಈ ಸುದ್ದಿಯನ್ನೂ ಓದಿ: Lebanon-Israel war: ಚುನಾವಣೆ ಪ್ರಚಾರ ಬಿಟ್ಟು ಸತ್ತ ಹೆಜ್ಬುಲ್ಲಾ ನಾಯಕನಿಗಾಗಿ ಶೋಕಿಸುತ್ತಿರುವ ಮೆಹಬೂಬಾ, ಉಮರ್ ಅಬ್ದುಲ್ಲಾ!