Saturday, 23rd November 2024

Viral Video: ಪೆಟ್ರೋಲ್‌ ಬಂಕ್‌ ಬಳಿ ಮೊಬೈಲ್‌ನಲ್ಲಿ ಮಾತನಾಡಬೇಡಿ ಎಂದು ಮಹಿಳೆಗೆ ಹೇಳಿದ ಸಿಬ್ಬಂದಿಗೆ ಬಿತ್ತು ಏಟು!

Viral Video

ಪೆಟ್ರೋಲ್ ಬಂಕ್‌ನಲ್ಲಿ (petrol pump) ಮೊಬೈಲ್‌ನಲ್ಲಿ ಮಾತನಾಡಬಾರದು ಎಂದು ರೂಲ್ಸ್ ಇದೆ. ಅಷ್ಟು ಈಗಲೂ ಎಷ್ಟರ ಮಟ್ಟಿಗೆ ಸರಿ ಎಂಬುದು ಗೊತ್ತಿಲ್ಲ. ಆದರೆ, ಕೆಲವು ಪಟ್ರೋಲ್ ಬಂಕ್ ಸಿಬ್ಬಂದಿ ಇದನ್ನು ಕಡ್ಡಾಯವಾಗಿ ಮಾಡುತ್ತಾರೆ. ಆದರೆ, ಇಂಥ ಸಂದರ್ಭದಗಳಲ್ಲಿ ಅಲ್ಲಿನ ಸಿಬ್ಬಂದಿ ಸಾಕಷ್ಟು ತೊಂದರೆ ಎದುರಿಸುವುದು ಗ್ಯಾರಂಟಿ. ಅಂಥದ್ದೇ ಒಂದು ಘಟನೆ ನಡೆದಿದೆ. ಮಹಿಳೆಯೊಬ್ಬರಿಗೆ ಮೊಬೈಲ್ ಬಳಸಬೇಡಿ ಎಂದು ಹೇಳಿದ್ದಕ್ಕೆ ಕೆಲವರು ಸೇರಿ ಅಲ್ಲಿ ಕೆಲಸ ಮಾಡುತ್ತಿದ್ದವನನ್ನು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿರುವ ಘಟನೆ ಅಹಮದಾಬಾದ್‌ನಲ್ಲಿ (Ahmedabad) ನಡೆದಿದೆ. ಇದರ ವಿಡಿಯೋ (Viral Video) ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಬಂಕ್‌ ಆವರಣದಲ್ಲಿ ಮಹಿಳೆಯೊಬ್ಬರು ಮೊಬೈಲ್ ಬಳಸುತ್ತಿರುವುದನ್ನು ಗಮನಿಸಿದ ಸಿಬ್ಬಂದಿ ಮೊಬೈಲ್ ಬಳಸದಂತೆ ಸೂಚಿಸಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ ಆತನೊಂದಿಗೆ ಜಗಳಕ್ಕೆ ಮುಂದಾಗಿದ್ದಾಳೆ.

ಬಳಿಕ ಕೆಲವರು ಸೇರಿ ಪೆಟ್ರೋಲ್ ಪಂಪ್ ಸಿಬ್ಬಂದಿ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಇದರ ದೃಶ್ಯ ಪೆಟ್ರೋಲ್ ಪಂಪ್ ನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಈ ಘಟನೆಯು ಅಹಮದಾಬಾದ್ ನ ವಸ್ತ್ರಾಪುರದ ಡ್ರೈವ್-ಇನ್ ಸಿನಿಮಾ ಥಿಯೇಟರ್ ಎದುರಿನ ಮಹಾದೇವ್ ಪೆಟ್ರೋಲ್ ಪಂಪ್‌ನಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿ ಕೆಲವು ಅಪರಿಚಿತರ ವಿರುದ್ಧ ವಸ್ತ್ರಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ತಾಲ್ತೇಜ್ ನಿವಾಸಿ ನೀಲೇಶ್ ಹೀರಾಲಾಲ್ ಮಾರ್ವಾಡಿ (26) ಹಲ್ಲೆಗೊಳಗಾದ ಯುವಕ. ಪೆಟ್ರೋಲ್ ತುಂಬಿಸುವ ತನ್ನ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸಂಜೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿರುವುದಾಗಿ ಆತ ಪೊಲೀಸರಿಗೆ ತಿಳಿಸಿದ್ದಾನೆ.

ಇಬ್ಬರು ಅಪರಿಚಿತ ಮಹಿಳೆಯರು ಮೊಪೆಡ್ ನಲ್ಲಿ ಇಂಧನ ತುಂಬಿಸಿಕೊಳ್ಳಲು ನಿಲ್ದಾಣಕ್ಕೆ ಬಂದರು. ಸರತಿಯಲ್ಲಿ ಕಾಯುತ್ತಿದ್ದ ಮಹಿಳೆ ಫೋನ್ ನಲ್ಲಿ ಮಾತನಾಡುವುದನ್ನು ನೋಡಿದ ನೀಲೇಶ್ ಆಕೆಗೆ ಪೆಟ್ರೋಲ್ ಪಂಪ್‌ಗಳಲ್ಲಿ ಮೊಬೈಲ್ ಫೋನ್‌ಗಳನ್ನು ಬಳಸುವುದರಿಂದ ಅವರಿಗೆ ಅಪಾಯವಾಗಬಹುದು ಎಂದು ಹೇಳಿ ಕರೆಯನ್ನು ಕಡಿತಗೊಳಿಸುವಂತೆ ವಿನಂತಿಸಿದ್ದ.

Viral News: ಈ ಊರಿನ ಜನ ಮನೆಯಲ್ಲಿ ಅಡುಗೆಯನ್ನೇ ಮಾಡುವುದಿಲ್ಲವಂತೆ! ಏಕೆ ಈ ಸಂಪ್ರದಾಯ?

ನೀಲೇಶ್ ಹೇಳಿದ್ದನ್ನು ಕೇಳಿ ಸಿಟ್ಟುಗೊಂಡ ಮಹಿಳೆಯರು ಆತನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಪರಿಸ್ಥಿತಿ ಹದಗೆಡುವುದನ್ನು ಗಮನಿಸಿ ನೀಲೇಶ್ ತನ್ನ ವಾದವನ್ನು ನಿಲ್ಲಿಸಿ ಕೆಲಸದಲ್ಲಿ ತೊಡಗಿಕೊಂಡ. ಆದರೆ ಬಳಿಕ ರಾತ್ರಿ ಸುಮಾರು 8.30ಕ್ಕೆ ಕೆಲವು ಗಂಡಸರೊಂದಿಗೆ ಬಂದ ಮಹಿಳೆ ನೀಲೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಪೆಟ್ರೋಲ್ ಪಂಪ್‌ನ ಮೇಲ್ವಿಚಾರಕರು ಮಧ್ಯಪ್ರವೇಶಿಸಿ ಪ್ರಕರಣ ಹೆಚ್ಚು ಉಲ್ಬಣಗೊಳ್ಳುವುದನ್ನು ತಡೆದರು.