Sunday, 24th November 2024

Mallikarjun Kharge : ಮೋದಿಯನ್ನು ಅಧಿಕಾರದಿಂದ ಇಳಿಸದೇ ಸಾಯವುದಿಲ್ಲ ಎಂದು ಶಪಥ ಮಾಡಿದ ಮಲ್ಲಿಕಾರ್ಜುನ ಖರ್ಗೆ

mallikarjuna kharge

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge), ಪ್ರಧಾನಿ ಮೋದಿಯನ್ನು ಪ್ರಧಾನಿ ಹುದ್ದೆಯಿಂದ ಇಳಿಸಿಯೇ ಸಾಯುವುದಾಗಿ ಶಪಥ ಮಾಡಿದ ಪ್ರಸಂಗ ನಡೆಯಿತು. ಅದೂ ಬಿಪಿ ಇಳಿದು ತಾವು ಅಸ್ವಸ್ಥಗೊಂಡ ಬಳಿಕ.

ರ್ಯಾಯಲ್ಲಿ ಮಾತನಾಡುವಾಗ ಅನಾರೋಗ್ಯಕ್ಕೆ ಒಳಗಾದ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಧಿಕಾರದಿಂದ ತೆಗೆದುಹಾಕುವವರೆಗೂ ನಾನು ಸಾಯುವುದಿಲ್ಲ ಎಂದು ಕಾರ್ಯಕರ್ತರನ್ನು ಉದ್ದೇಶಿ ಹೇಳಿದರು. ವಿಧಾನಸಭಾ ಚುನಾವಣೆಯ ಮೂರನೇ ಹಾಗೂ ಅಂತಿಮ ಹಂತದ ಪ್ರಚಾರ ಕಾರ್ಯದ ಕೊನೆಯ ದಿನದಂದು ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುವಾಗ ಖರ್ಗೆ ಅವರಿಗೆ ಸಮಸ್ಯೆ ಉಂಟಾಯಿತು. ತಕ್ಷಣ ಪಕ್ಷದ ನಾಯಕರು ಅವರ ಕೈ ಹಿಡಿದು ನಿಲ್ಲಿಸಿ ನೀರು ಕುಡಿಸಿದರು. ಅಲ್ಲದೇ ತಮ್ಮ ಕುರ್ಚಿಯಲ್ಲಿ ಕುಳಿತರು.

ಕೆಲವು ನಿಮಿಷಗಳ ನಂತರ ಅವರು ಮತ್ತೆ ವೇದಿಕೆಗೆ ಬಂದು ಮಾತನಾಡಲು ಆರಂಭಿಸಿದರು. ನಾವು ಜಮ್ಮು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲು ಹೋರಾಡುತ್ತೇವೆ. ನನಗೆ 83 ವರ್ಷ ವಯಸ್ಸು. ನಾನು ಅಷ್ಟು ಬೇಗ ಸಾಯುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಧಿಕಾರದಿಂದ ಕೆಳಗಿಳಿಸುವವರೆಗೂ ನಾನು ಜೀವಂತವಾಗಿರುತ್ತೇನೆ ಎಂದು ಹೇಳಿದರು.

ಇದನ್ನೂ ಓದಿ: 7th Pay Commission : ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ ಯಾವಾಗ ತುಟ್ಟಿ ಭತ್ಯೆ ಹೆಚ್ಚಳವಾಗಬಹುದು? ಇಲ್ಲಿದೆ ವಿವರ

ಅವರ ರಕ್ತದೊತ್ತಡ ಕುಸಿದಿದೆ ಮತ್ತು ಅವರು ಹೆಚ್ಚು ಉತ್ತಮವಾಗಿದ್ದರೂ, ವಿಶ್ರಾಂತಿ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ಪ್ರಚಾರದ ಕೊನೆಯ ದಿನವಾಗಿದ್ದು, ಅಲ್ಲಿ ಕೊನೆಯ ಮತ್ತು ಅಂತಿಮ ಹಂತದ ಮತದಾನ ನಡೆಯಲಿದೆ.