ಸೀಮಾಂಚಲ: ಸೈದ್ಧಾಂತಿಕ ವಿರೋಧ ಹೆಚ್ಚಿರುವ ಅಲ್ಪಸಂಖ್ಯಾತರೇ ಅಧಿಕ ಸಂಖ್ಯೆಯಲ್ಲಿ ಇರುವ ಸೀಮಾಂಚಲ ಪ್ರದೇಶ ಗಳಲ್ಲಿಯೂ ಎನ್‌ಡಿಎ ಮುನ್ನಡೆ ಸಾಧಿಸಿರುವುದು ಅಚ್ಚರಿ ಮೂಡಿಸಿದೆ.
ಸೀಮಾಂಚಲ ಪ್ರದೇಶದ ನಾಲ್ಕು ಹಾಗೂ ಕೋಸಿಯ ಮೂರು ಜಿಲ್ಲೆಗಳಲ್ಲಿನ 37 ಸೀಟುಗಳಲ್ಲಿ ಆಡಳಿತಾರೂಢ ಎನ್‌ಡಿಎ ಎದುರಾಳಿ ಮಹಾಘಟಬಂಧನಕ್ಕಿಂತ ಕೊಂಚ ಮುನ್ನಡೆ ಸಾಧಿಸಿದೆ. ಕೋಸಿಯಲ್ಲಿ ಜೆಡಿಯು ಮುನ್ನಡೆ ಪಡೆದಿದ್ದರೆ, ಸೀಮಾಂಚಲದಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ.
ಕೋಸಿಯ ಸುಪೌಲ್, ಸಹರ್ಸಾ ಮತ್ತು ಮಾಧೇಪುರ ಜಿಲ್ಲೆಗಳಲ್ಲಿ 13 ವಿಧಾನಸಭೆ ಕ್ಷೇತ್ರಗಳಿದ್ದರೆ, ಸೀಮಾಂಚಲದ ಪೂರ್ನಿಯಾ, ಕಟಿಹಾರ್, ಮಾಧೇಪುರ ಮತ್ತು ಅರಾರಿಯಾ ಜಿಲ್ಲೆಗಳಲ್ಲಿ 24 ವಿಧಾನಸಭೆ ಕ್ಷೇತ್ರಗಳಿವೆ.
ಸೀಮಾಂಚಲದಲ್ಲಿ ಧಂದಾಹ ಮತ್ತು ರುಪೌಲಿ ಕ್ಷೇತ್ರಗಳಲ್ಲಿ ಜೆಡಿಯು ಮುನ್ನಡೆ ಪಡೆದುಕೊಂಡಿದೆ. ಪೂರ್ನಿಯಾ, ಪ್ರಾಣ್ಪುರ, ಕಟಿಹಾರ್ ಮತ್ತು ಸಿಕ್ತಿಯಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
ಸೀಮಾಂಚಲದಲ್ಲಿ ಜೆಡಿಯು 11, ಬಿಜೆಪಿ 10, ವಿಐಪಿ 2 ಮತ್ತು ಎಚ್‌ಎಎಂ-ಎಸ್ ಒಂದು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು.