ಬೆಂಗಳೂರು: ಭಾರತದ ಸ್ವದೇಶಿ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ತನ್ನ ಬಹುನಿರೀಕ್ಷಿತ 11 ನೇ ಆವೃತ್ತಿಯ ದಿ ಬಿಗ್ ಬಿಲಿಯನ್ ಡೇಸ್ 2024 (Big Billion Day 2024 ) ಅನ್ನು ಸೆಪ್ಟೆಂಬರ್ 27 ರಂದು ಆರಂಭಿಸಿದೆ. ಇದಕ್ಕೂ ಒಂದು ದಿನ ಮುನ್ನವೇ ಅಂದರೆ ಸೆಪ್ಟೆಂಬರ್ 26 ರಂದು ತನ್ನ ಫ್ಲಿಪ್ ಕಾರ್ಟ್ ವಿಐಪಿ ಮತ್ತು ಪ್ಲಸ್ ಗ್ರಾಹಕರಿಗಾಗಿ ಟಿಬಿಬಿಡಿಯಲ್ಲಿ ಶಾಪಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿತ್ತು. ಮುನ್ನಾದಿನ ಮತ್ತು ಮೊದಲ ದಿನದಲ್ಲಿ ಒಟ್ಟಾರೆ 33 ಕೋಟಿಗೂ ಅಧಿಕ ಜನರು ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ಗೆ ಭೇಟಿಯಾಗಿರುವುದು ಹೊಸ ದಾಖಲೆ ನಿರ್ಮಿಸಿದೆ.
ಇದು ಭಾರತದಾದ್ಯಂತ ಗ್ರಾಹಕರಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ. ಪ್ರಮುಖವಾಗಿ ಮೊಬೈಲ್ ಗಳು, ಎಲೆಕ್ಟ್ರಾನಿಕ್ಸ್, ದೊಡ್ಡ ದೊಡ್ಡ ಗೃಹೋಪಯೋಗಿ ಉತ್ಪನ್ನಗಳು, ಫ್ಯಾಷನ್, ಬ್ಯೂಟಿ & ಹೋಂ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಟಾಪ್ ಮೆಟ್ರೋ ನಗರಗಳಾದ ನವದೆಹಲಿ, ಕೋಲ್ಕತ್ತಾ, ಹೈದ್ರಾಬಾದ್, ಬೆಂಗಳೂರಿನಲ್ಲಿ ಟಿಬಿಬಿಡಿ 2024 ಆರಂಭವಾದ ಮೊದಲ 24 ಗಂಟೆಗಳಲ್ಲಿ ಬೇಡಿಕೆಗಳ ಪ್ರಮಾಣ ಹೆಚ್ಚಾಗಿತ್ತು. ಇದಲ್ಲದೇ, ಮೇದಿನಿಪುರ, ಹಿಸಾರ್, ಬೆಹ್ರಾಂಪುರ, ಬಂಕೂರ ಮತ್ತು ಅಗರ್ತಲಾದಂತಹ ನಗರಗಳು ಮತ್ತು ಪ್ರದೇಶಗಳಿಂದಲೂ ಹಬ್ಬದ ಸೀಸನ್ ಶಾಪಿಂಗ್ ನಲ್ಲಿ ಹೆಚ್ಚಿನ ಬೇಡಿಕೆ ಬಂದಿದೆ.
ಎಥ್ನಿಕ್ ವೇರ್, ವೆಸ್ಟರ್ನ್ ವೇರ್, ಸ್ಪೋರ್ಟ್ಸ್ ಫುಟ್ ವೇರ್, ಕ್ಯಾಶ್ಯುವಲ್ ಫುಟ್ ವೇರ್ ಮತ್ತು ಫಾರ್ಮಲ್ ಫುಟ್ ವೇರ್ ನಂತಹ ಉತ್ಪನ್ನಗಳನ್ನು ಹೆಚ್ಚು ಹೆಚ್ಚು ಖರೀದಿಸುವ ಮೂಲಕ ಗ್ರಾಹಕರು ತಮ್ಮ ಜೀವನಶೈಲಿಯನ್ನು ಉತ್ತಮಗೊಳಿಸುವತ್ತ ಗಮನಹರಿಸಿದ್ದಾರೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಉತ್ಪನ್ನಗಳಿಗೆ ಟಿಬಿಬಿಡಿಯ ಮುನ್ನಾ ದಿನ ಮತ್ತು ಮೊದಲ ದಿನ ಹೆಚ್ಚಿನ ಬೇಡಿಕೆ ಕಂಡುಬಂದಿದೆ.
ಆನ್- ಆ್ಯಪ್ ಅನುಭವಗಳು
ಬ್ರ್ಯಾಂಡ್ ಮಾಲ್, ಫ್ಲಿಪ್ ಇನ್ ಟ್ರೆಂಡ್ಸ್ ಮತ್ತು ಸ್ಪಾಯಿಲ್‌ನಂಥ ಆ್ಯಪ್‌ಗಳಲ್ಲಿ ಫ್ಲಿಪ್ ಕಾರ್ಟ್ ಪ್ಲಾಟ್ ಫಾರ್ಮ್ ನಲ್ಲಿ ವೈವಿಧ್ಯಮಯ ಗ್ರಾಹಕರು ಉತ್ತಮ ಶಾಪಿಂಗ್ ಅನುಭವ ಪಡೆದುಕೊಂಡಿದ್ದಾರೆ. ಇಲ್ಲಿ ಅವರಿಗೆ ಪರ್ಸನಲೈಸ್ಡ್ ಮತ್ತು ಟ್ರೆಂಡ್-ಚಾಲಿತ ಶಾಪಿಂಗ್ ಅನುಭವಗಳನ್ನು ನೀಡಲಾಗಿದೆ.
ಫ್ಲಿಪ್ ಇನ್ ಟ್ರೆಂಡ್ಸ್‌ನಲ್ಲಿ ಗ್ರಾಹಕರು ತಮ್ಮ ಅಭಿರುಚಿಗೆ ತಕ್ಕಂತಹ ಉತ್ಪನ್ನಗಳನ್ನು ನ್ಯಾವಿಗೇಟ್ ಮಾಡಿ ಖರೀದಿ ಮಾಡಿದ್ದಾರೆ. ಇದಲ್ಲದೇ, ಲೇಟೆಸ್ಟ್ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ನ ಉತ್ಪನ್ನಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಜನರೇಶನ್ ಝಡ್ ಗ್ರಾಹಕರು ಬ್ಯಾಗಿ ಬಾಟಮ್ಸ್ ಮತ್ತು ಜೀನ್ಸ್, ಬ್ಲಾಕ್ ಪ್ರಿಂಟ್ ಕುರ್ತಾಗಳು, ಡೆಮ್ಯೂರ್ ಡ್ರೆಸ್ ಗಳು, ರೆಟ್ರೋ ರನ್ನರ್ಸ್, ಯುಟಿಲಿಟಿ ಕಾರ್ಗೋಸ್, ಮಲ್ಟಿ ಪಾಕೆಟ್ ಗಳ ಶರ್ಟ್ ಗಳು, ಕೋ-ಆರ್ಡ್ ಸೆಟ್ ಮತ್ತು ಜಪಾನೀಸ್ ಸ್ಟೈಲ್ ನ ಟೀಶರ್ಟ್ ಗಳನ್ನು ಹೆಚ್ಚು ಆಯ್ಕೆ ಮಾಡಿಕೊಂಡಿರುವುದು ಕಂಡುಬಂದಿದೆ.
ಎಲ್ಲದಕ್ಕೂ ಮೌಲ್ಯ
ಫ್ಲಿಪ್ ಕಾರ್ಟ್‌ನ ಹೈಪರ್ ವ್ಯಾಲ್ಯು ಪ್ಲಾಟ್ ಫಾರ್ಮ್ ಆಗಿರುವ ಶಾಪ್ಸಿಯಲ್ಲಿ ಕಳೆದ ಹಬ್ಬದ ಸೀಸನ್ ಪೂರ್ವಕ್ಕೆ ಹೋಲಿಸಿದರೆ ಗ್ರಾಹಕರ ಭೇಟಿಯಲ್ಲಿ ಶೇ.70 ರಷ್ಟು ಹೆಚ್ಚಳವಾಗಿದೆ ಮತ್ತು 2.8 ಪಟ್ಟು ವ್ಯವಹಾರ ಹೆಚ್ಚಾಗಿದೆ. ಲೈಫ್ ಸ್ಟೈಲ್, ಅಪಾರೆಲ್, ಹೋಂ & ಕಿಚನ್ ಉತ್ಪನ್ನಗಳ ಮಾರಾಟದಲ್ಲಿ 2 ಪಟ್ಟು ಮತ್ತು ಬ್ಯೂಟಿ ಪರ್ಸನಲ್ ಕೇರ್ ಉತ್ಪನ್ನಗಳ ಖರೀದಿಯಲ್ಲಿ 3 ಪಟ್ಟು ಹೆಚ್ಚಳ ಕಂಡುಬಂದಿದೆ.
ಟ್ರಾವೆಲ್ ಟ್ರೆಂಡ್ಸ್
ಹಬ್ಬದ ಸೀಸನ್ ಪೂರ್ವಕ್ಕೆ ಹೋಲಿಸಿದರೆ ಪ್ಲಾಟ್ ಫಾರ್ಮ್ ನಲ್ಲಿ ಕ್ಲಿಯರ್ ಟ್ರಿಪ್ 2.5 ಪಟ್ಟು ಹೆಚ್ಚಳ ಸಾಧಿಸಿದೆ. ಅಂದರೆ, ಕ್ಲಿಯರ್ ಟ್ರಿಪ್ ನಲ್ಲಿ ಬಳಕೆದಾರರು ಟ್ರಾವೆಲ್ ಸಂಬಂಧಿತ ವ್ಯವಹಾರಗಳನ್ನು ನಡೆಸಿದ್ದಾರೆ. ವಿಮಾನ ಮತ್ತು ಹೊಟೇಲ್ ಬುಕಿಂಗ್ ನಲ್ಲಿ ಕ್ರಮವಾಗಿ 3 ಮತ್ತು 4 ಪಟ್ಟು ಹೆಚ್ಚಳ ಕಂಡುಬಂದಿದೆ. ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿ ಗೋವಾ, ಅಮೃತ್ ಸರ, ನೈನಿತಾಲ್, ವಾರಣಾಸಿ ಮತ್ತು ಮಸ್ಸೂರಿಗೆ ಹೆಚ್ಚು ಜನರು ಟಿಕೆಟ್ ಗಳನ್ನು ಬುಕ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: Viral Video: ಪೆಟ್ರೋಲ್ ಬಂಕ್ ಬಳಿ ಮೊಬೈಲ್‌ನಲ್ಲಿ ಮಾತನಾಡಬೇಡಿ ಎಂದು ಮಹಿಳೆಗೆ ಹೇಳಿದ ಸಿಬ್ಬಂದಿಗೆ ಬಿತ್ತು ಏಟು!
ನಿಮಿಷಗಳಲ್ಲಿ ಡೆಲಿವರಿ
ಫ್ಲಿಪ್ ಕಾರ್ಟ್ ಎಂದೆಂದಿಗೂ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಆಯ್ಕೆಗಳಲ್ಲಿ ನೆಚ್ಚಿನ ತಾಣವಾಗಿದೆ ಮತ್ತು ಹೊಸದಾಗಿ ಆರಂಭಿಸಲಾಗಿರುವ ಫ್ಲಿಪ್ ಕಾರ್ಟ್ ಮಿನಿಟ್ಸ್ ಡೆಲಿವರಿ ಈ ವರ್ಗಕ್ಕೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಹೊಸ ಟ್ರೆಂಡ್ ಆಗಿ ಮಾರ್ಪಟ್ಟಿದೆ. ಮುಂಬೈನಂತಹ ನಗರಗಳಲ್ಲಿ ಇಂದು ಹೈಪರ್ ಲೋಕಲ್ ಪಿನ್ ಕೋಡ್ ಗಳಲ್ಲಿನ ಎಲ್ಲಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಮಾರಾಟದಲ್ಲಿ ಶೇ. 25 ರಷ್ಟು ಭಾಗ ಫ್ಲಿಪ್ ಕಾರ್ಟ್ ನ ಮಿನಿಟ್ಸ್ ಡೆಲಿವರಿಯಲ್ಲಿ ದೊರೆಯುತ್ತಿದೆ. ದೆಹಲಿಯಲ್ಲಿ ಇದು ಪ್ರಸ್ತುತ ಫ್ಲಿಪ್ ಕಾರ್ಟ್ ಮಿನಿಟ್ಸ್ ಒಳಗೊಂಡಿರುವ ಪಿನ್ ಕೋಡ್ ಗಳಲ್ಲಿ ಸುಮಾರು ಶೇ.40 ಕ್ಕೆ ಹೆಚ್ಚಳವಾಗಿದೆ. ಈ ಫ್ಲಿಪ್ ಕಾರ್ಟ್ ಮಿನಿಟ್ಸ್ ನಲ್ಲಿ ಆರ್ಡರ್ ಮಾಡುವಾಗ ಗ್ರಾಹಕರು ಫ್ಲಿಪ್ ಕಾರ್ಟ್ ನ ದೊಡ್ಡ ದೊಡ್ಡ ಉಪಕರಣಗಳು ಮತ್ತು ಎಲೆಕ್ಟ್ರಾನಿಕ್ಸ್ ಗಳ ಇನ್ ಸ್ಟಾಲೇಶನ್ ಮತ್ತು ಮಾರಾಟ ನಂತರದ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಫ್ಲಿಪ್ ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರಿಗೆ ಪ್ರತಿ ಖರೀದಿ ಮೇಲೆ ಶೇ.5 ರಷ್ಟು ರಿಯಾಯ್ತಿ ಲಭ್ಯವಾಗಲಿದ್ದು. ಫ್ಲಿಪ್ ಕಾರ್ಟ್ ಪೇ ಲೇಟರ್ ಇಎಂಐ ಸೌಲಭ್ಯ ಬಳಸಿಕೊಂಡವರ ಸಂಖ್ಯೆಯಲ್ಲಿ 8.5 ಪಟ್ಟು ಹೆಚ್ಚಳವಾಗಿದೆ. ಇನ್ನು ಥರ್ಡ್ ಪಾರ್ಟಿ ಇಎಂಐ ಬಳಕೆಯಲ್ಲಿ 27 ಪಟ್ಟು ಹೆಚ್ಚಳವಾಗಿದ್ದರೆ, ಒಟ್ಟಾರೆ ವ್ಯವಹಾರಗಳಲ್ಲಿಯೂ 18 ಪಟ್ಟು ಹೆಚ್ಚಳ ಕಂಡುಬಂದಿದೆ.
11 ನೇ ಆವೃತ್ತಿಯ ಬಿಗ್ ಬಿಲಿಯನ್ ಡೇಸ್ ಬಗ್ಗೆ ಮಾತನಾಡಿದ ಫ್ಲಿಪ್ ಕಾರ್ಟ್ ಗ್ರೋತ್ ವಿಭಾಗದ ಉಪಾಧ್ಯಕ್ಷ ಹರ್ಷ್ ಚೌಧರಿ ಅವರು, “ಪ್ರತಿವರ್ಷ ಭಾರತದಲ್ಲಿ ಹಬ್ಬದ ಸೀಸನ್ ಫ್ಲಿಪ್ ಕಾರ್ಟ್ ನ ಬಿಗ್ ಬಿಲಿಯನ್ ಡೇಸ್ ನೊಂದಿಗೆ ಆರಂಭವಾಗುತ್ತದೆ. ಇದು ಕೇವಲ ಶಾಪಿಂಗ್ ಫೆಸ್ಟಿವಲ್ ಅಲ್ಲ, ಇದು ರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿ, ನಾವೀನ್ಯತೆ ಮತ್ತು ಸಹಭಾಗಿತ್ವವನ್ನು ಗಟ್ಟಿಪಡಿಸುವ ಉತ್ಸವವಾಗಿದೆ’’ ಎಂದರು.