Sunday, 29th September 2024

Pakistan: 22 ವರ್ಷ ಭಾರತದಲ್ಲಿದ್ದುಮರಳಿದ ವ್ಯಕ್ತಿಯನ್ನು ‘ಕಾಫಿರ್‌’ ಎಂದು ಕರೆದು ಅವಮಾನಿಸಿದ ಪಾಕಿಸ್ತಾನಿಯರು!

Pakistan

ಬೆಂಗಳೂರು: ಪಾಕಿಸ್ತಾನದ (Pakistan) ಪ್ರಜೆಯೊಬ್ಬ ಹಾದಿ ತಪ್ಪಿ ಭಾರತಕ್ಕೆ (india) ಬಂದು 22 ವರ್ಷಗಳ ಕಾಲ ಇಲ್ಲಿಯೇ ನೆಲೆಸಿ ಇತ್ತೀಚಿಗೆ ಪಾಕಿಸ್ತಾನಕ್ಕೆ ಮರಳಿದ್ದ. ಆದರೆ, ಆತನ ಸ್ವದೇಶಿಯರು ಕಾಫಿರ್ (ಧರ್ಮಭ್ರಷ್ಟಅಥವಾ ಶತ್ರು) ಎಂದು ಕರೆದು ಅವಮಾನ ಮಾಡಿದ್ದಾರೆ. ಈ ಕುರಿತ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ (social media) ವೈರಲ್ (viral news) ಆಗಿದೆ.

ಪಾಕಿಸ್ತಾನದ 38 ವರ್ಷದ ಸಿರಾಜ್ ಮುಹಮ್ಮದ್ ಖಾನ್ ಎಂಬವರು ಬಾಲ್ಯದಲ್ಲಿ ತಪ್ಪಾಗಿ ಭಾರತಕ್ಕೆ ಬಂದಿದ್ದರು. 22 ವರ್ಷಗಳ ಇಲ್ಲಿಯೇ ವಾಸವಾಗಿದ್ದರು. ಇತ್ತೀಚೆಗೆ ಅವರು ಮರಳಿ ತಾಯ್ನಾಡಿಗೆ ಹೋಗಿದ್ದರು. ಆದರೆ, ಹೋದ ತಕ್ಷಣವೇ ಅವರ ಮೇಲೆ ದೌರ್ಜನ್ಯ ಶುರುವಾಗಿದೆ. ಎಲ್ಲ ಮಾಹಿತಿಯನ್ನು ಅವರು ಸೋಶಿಯಲ್ ಮೀಡಿಯಾದ ಮೂಲಕ ಹೇಳಿಕೊಂಡಿದ್ದಾರೆ.

1996ರಲ್ಲಿ ಪಾಕಿಸ್ತಾನದಿಂದ ದೆಹಲಿಯನ್ನು ಸಂಪರ್ಕಿಸುವ ಸಂಜೋತಾ ಎಕ್ಸ್‌ಪ್ರೆಸ್ ತಪ್ಪಾಗಿ ಹತ್ತಿರುವುದಾಗಿ ಸಿರಾಜ್ ಹೇಳಿದ್ದಾರೆ. ಖೈಬರ್ ಪಖ್ತುಂಕ್ವಾ ಪ್ರಾಂತ್ಯದ ಮನ್ಸೆಹ್ರಾ ಜಿಲ್ಲೆಯವರಾದ ಸಿರಾಜ್ ಕರಾಚಿಗೆ ಹೋಗುವ ರೈಲು ಹತ್ತುವ ಬದಲು ಡೆಲ್ಲಿ ರೈಲು ಹತ್ತಿದ್ದರು.

1996 ಮತ್ತು 2018 ರ ನಡುವೆ ಅವರು ದೆಹಲಿ, ಮುಂಬಯಿ ಮತ್ತು ಅಹಮದಾಬಾದ್ ಸೇರಿದಂತೆ ವಿವಿಧ ನಗರಗಳಲ್ಲಿ ವಾಸಿಸಿದ್ದರು. ಸಾಜಿದಾ ಎಂಬ ಭಾರತೀಯ ಮಹಿಳೆಯನ್ನು ವಿವಾಹಗಿದ್ದರು. ಅಂತೆಯೇ 22 ವರ್ಷಗಳಿಗೂ ಹೆಚ್ಚು ಕಾಲ ಭಾರತದಲ್ಲೇ ವಾಸಿಸಿದ್ದರು. ಇವರಿಗೆ ಮಗಳು ಮತ್ತು ಇಬ್ಬರು ಅವಳಿ ಗಂಡು ಮಕ್ಕಳು ಇದ್ದಾರೆ.

ಈ ನಡುವೆ ಅವರಿಗೆ ತಮ್ಮ ಕುಟುಂಬವನ್ನು ಭೇಟಿಯಾಗುವ ಮನಸ್ಸಾಗಿ ಪಾಕಿಸ್ತಾನಕ್ಕೆ ಮರಳಿದ್ದರು. ಆದರೆ ಅಲ್ಲಿ ಅವರನ್ನು ‘ಕಾಫಿರ್’, ‘ಹಿಂದೂ’ ಮತ್ತು ‘ಭಾರತೀಯ ಗೂಢಚಾರಿ’ ಎಂದು ಹೇಳಿ ಸಾಕಷ್ಟು ಕಿರುಕುಳ ನೀಡಲಾಗಿದೆ. ತಾಯ್ನಾಡಿಗೆ ತೆರಳಿದ ಅವರನ್ನು ಅಲ್ಲಿ ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ.

ಖೈಬರ್ ಪಖ್ತುಂಖ್ವಾದ ಮನ್ಸೆಹ್ರಾ ಜಿಲ್ಲೆಯಲ್ಲಿ ಜನಿಸಿದವರು ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯ ದೃಢಪಡಿಸಿದ ಬಳಿಕವೂ ಅವರನ್ನು ಕುಟುಂಬ ಸದಸ್ಯರು ಮತ್ತು ಸಂಬಂಧಿಕರು ಸೇರಿದಂತೆ ಎಲ್ಲರೂ ಅನುಮಾನದಿಂದ ನೋಡಿಕೊಂಡಿದ್ದರು. ಅವರ ತಾಯಿ ಮತ್ತು ಒಡಹುಟ್ಟಿದವರಿಗೂ ಅವಮಾನವೇ ಇತ್ತು.

ಸಿರಾಜ್ ಮುಹಮ್ಮದ್ ಖಾನ್, ಪೂರ್ವಜರ ಆಸ್ತಿಯನ್ನು ಕಬಳಿಸಲು ಪಾಕಿಸ್ತಾನಕ್ಕೆ ಮರಳಿದ್ದಾರೆ ಎಂದು ಅವರ ಸಹೋದರ ಆರೋಪಿಸಿದ್ದರು. ಇದರಿಂದ ಜೈಲಿನಲ್ಲಿ ಸಮಯ ಕಳೆದ ಬಳಿಕ ಅಂತಿಮವಾಗಿ 2018 ರಲ್ಲಿ ಗಡೀಪಾರು ಮಾಡಲಾಗಿತ್ತು.

ಭಾರತದಲ್ಲಿ ಇಂತಹ ದ್ವೇಷ ಎದುರಿಸಿಲ್ಲ

ಪಾಕಿಸ್ತಾನದಲ್ಲಿ ಸಿರಾಜ್‌ನ ಬದುಕು ಶೋಚನೀಯವಾಗಿತ್ತು. ಆದಾಗ್ಯೂ ಅವರ ಭಾರತೀಯ ಪತ್ನಿ ಮತ್ತು ಮಕ್ಕಳಿಗೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ವೀಸಾ ಸಿಕ್ಕಿತ್ತು. ಆದರೆ ಅಲ್ಲಿಗೆ ತೆರಳಿದ ಅವರು ಅಲ್ಲಿ ಬಹಿಷ್ಕಾರ ಎದುರಾಗಿತ್ತು. ಸಾಜಿದಾ ತಮ್ಮ ಮೈಬಣ್ಣದ ಕಾರಣಕ್ಕಾಗಿ ಅಪಹಾಸ್ಯಕ್ಕೊಳಗಾಗಿದ್ದರು. ಸಿರಾಜ್‌ ಕುಟುಂಬವು ಅವರಿಗೆ ಊಟದ ತಟ್ಟೆಯನ್ನೂ ನೀಡುತ್ತಿರಲಿಲ್ಲ. ಆಕೆಯನ್ನು ತ್ಯಜಿಸುವಂತೆ ಒತ್ತಾಯ ಮಾಡಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಾಜಿದಾ , ತಾವು ಭಾರತದಲ್ಲಿ ಇಂತಹ ಅವಮಾನವನ್ನು ಯಾವತ್ತೂ ಎದುರಿಸಲಿಲ್ಲ ಎಂದು ಹೇಳಿಕೊಂಡಿದ್ದಾರೆ. ಭಾರತೀಯರು ಎಂಬ ಕಾರಣಕ್ಕೆ ಪಾಕಿಸ್ತಾನದ ಶಾಲೆಯಲ್ಲಿ ನಮ್ಮ ಮಕ್ಕಳನ್ನು ಸೇರಿಸುವುದಿಲ್ಲ. ಭಾರತದಲ್ಲಿ ಮುಸ್ಲಿಮರಿಗೆ ಕಷ್ಟ ಎಂದು ನಾವು ಕೇಳುತ್ತಲೇ ಇದ್ದೇವೆ. ಆದರೆ ಪಾಕಿಸ್ತಾನದಲ್ಲಿ ನಾವು ಅನುಭವಿಸಿದ ಅವಮಾನ ಇಲ್ಲಿ ಎದುರಿಸಿಲ್ಲ ಎಂದರು.

Lebanon-Israel war: ಇಸ್ರೇಲ್‌ನಿಂದ ಮತ್ತೊಂದು ಭರ್ಜರಿ ಬೇಟೆ- 48 ಗಂಟೆಗಳಲ್ಲಿ ಮತ್ತೊಬ್ಬ ಹೆಜ್ಬುಲ್ಲಾ ಕಮಾಂಡರ್‌ ಹತ್ಯೆ

ಆರಂಭದಲ್ಲಿ ಸಾಜಿದಾ ಮತ್ತು ಮಕ್ಕಳಿಗೆ ಪಾಕಿಸ್ತಾನಕ್ಕೆ ವೀಸಾ ಪಡೆಯಲು ಸಾಧ್ಯವಾಗಿರಲಿಲ್ಲ. ಸಿರಾಜ್ ಪಾಕಿಸ್ತಾನದ ವಿದೇಶಾಂಗ ಸಚಿವಾಲಯಕ್ಕೆ ಪತ್ರ ಬರೆದಾಗ ಅಧಿಕಾರಿಗಳು ಲಂಚ ಕೇಳಿದ್ದರು. ಬಾಡಿಗೆ ಕೋಣೆಯಲ್ಲಿ ವಾಸವಾಗಿದ್ದುಕೊಂಡು ಕಾರ್ಮಿಕನಾಗಿ ದುಡಿಯುತ್ತಿದ್ದ ಸಿರಾಜ್ ಗೆ ಈ ಲಂಚದ ಹಣ ಹೊಂದಿಸುವುದು ಕಷ್ಟವಾಗಿತ್ತು. ಪ್ರಸ್ತುತ ಪಾಕಿಸ್ತಾನದಲ್ಲಿ ಸಿರಾಜ್ ಸಾಜಿದಾ ಮತ್ತು ಮೂವರು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ. ಅವರು ತಮ್ಮ ಕುಟುಂಬಕ್ಕೆ ವೀಸಾಗಳ ವಿಸ್ತರಣೆಯನ್ನು ಕೋರಿದ್ದಾರೆ.