Friday, 22nd November 2024

Essay on Mahatma Gandhi: ವಿದ್ಯಾರ್ಥಿಗಳಿಗಾಗಿ ಇಲ್ಲಿವೆ ಗಾಂಧಿ ಜಯಂತಿ ಕುರಿತ ವಿವಿಧ ಪದ ಮಿತಿಯ ಪ್ರಬಂಧಗಳು

Gandhi Jayanti 2024

ರಾಷ್ಟ್ರಪಿತ ಮಹಾತ್ಮಾ ಗಾಂಧಿ (Gandhi Jayanti 2024) ಅವರ ಜನ್ಮ ದಿನ (Essay on Mahatma Gandhi) ಅಕ್ಟೋಬರ್ 2 ಭಾರತೀಯರೆಲ್ಲರಿಗೂ ವಿಶೇಷ ಸಂದರ್ಭವಾಗಿದೆ. ಪ್ರಪಂಚದಾದ್ಯಂತ ಈ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಈ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸುತ್ತಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ದಿನವನ್ನು ‘ಅಂತಾರಾಷ್ಟ್ರೀಯ ಅಹಿಂಸಾ ದಿನ’ (International Day of Non-violence) ಎಂದು ಆಚರಿಸಲಾಗುತ್ತದೆ. ಜಗತ್ತಿಗೆ ಅಹಿಂಸಾ ಚಳವಳಿಯನ್ನು ಪರಿಚಯಿಸಿದ, ವಿಶ್ವದ ಅತ್ಯಂತ ಯಶಸ್ವಿ ಸ್ವಾತಂತ್ರ್ಯ ಹೋರಾಟಗಾರ ಎಂದು ಇಂದಿಗೂ ವಿಶ್ವವಿಖ್ಯಾತರಾದವರು ಮೋಹನ್ ದಾಸ್ ಕರಮಚಂದ್‌ ಗಾಂಧಿ.

ಭಾರತದಲ್ಲಿ 200 ವರ್ಷಗಳ ಸುದೀರ್ಘ ಬ್ರಿಟಿಷ್ ಆಳ್ವಿಕೆಯನ್ನು ಕೊನೆಗೊಳಿಸುವಲ್ಲಿ ಮಹಾತ್ಮ ಗಾಂಧಿಯವರ ಮಹತ್ವದ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಲು ದೇಶಾದ್ಯಂತ ಶಾಲೆಗಳು ವಿವಿಧ ಸ್ಪರ್ಧೆಗಳು ಮತ್ತು ಚಟುವಟಿಕೆಗಳನ್ನು ಆಯೋಜಿಸುತ್ತವೆ. ಇವುಗಳಲ್ಲಿ ಪ್ರಬಂಧ ಸ್ಪರ್ಧೆಯೂ ಪ್ರಮುಖ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗಾಗಿ ಇಲ್ಲಿ ನಾನಾ ಪದ ಮಿತಿಗಳ ಪ್ರಬಂಧ ಮಾದರಿಗಳನ್ನು ನೀಡಲಾಗಿದೆ.

Gandhi Jayanti 2024

100 ಪದಗಳ ಪ್ರಬಂಧ

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ನಾವು ಪ್ರತಿ ವರ್ಷ ಅಕ್ಟೋಬರ್ 2ರಂದು ಆಚರಿಸುತ್ತೇವೆ. ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯನ್ನು ಕೊನೆಗೊಳಿಸುವಲ್ಲಿ ಮಹಾತ್ಮಾ ಗಾಂಧಿಯವರ ಪಾತ್ರ ಮುಖ್ಯ. ಭಾರತದ ಜನಸಾಮಾನ್ಯರ ಹಕ್ಕುಗಳಿಗಾಗಿ ಹೋರಾಡಿದ ಬಾಪು ಅವರ ಕೊಡುಗೆಗಳನ್ನು ಸ್ಮರಿಸಲು ಈ ದಿನವನ್ನು ದೇಶಾದ್ಯಂತ ಪ್ರೀತಿ ಮತ್ತು ಗೌರವದಿಂದ ಆಚರಿಸಲಾಗುತ್ತದೆ.

ಈ ದಿನವು ಭಾರತದಲ್ಲಿ ರಾಷ್ಟ್ರೀಯ ರಜಾದಿನಗಳಲ್ಲಿ ಒಂದಾಗಿದೆ. ಈ ದಿನ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗುತ್ತದೆ. ದೇಶಕ್ಕಾಗಿ ಮಹಾತ್ಮಾ ಗಾಂಧಿ ಅವರು ಮಾಡಿರುವ ತ್ಯಾಗವನ್ನು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನೆನಪಿಸಲಾಗುತ್ತದೆ. ಅವರ ನೆಚ್ಚಿನ ಭಜನೆ ರಘುಪತಿ ರಾಘವ ರಾಜಾರಾಮ್ ಹಾಡಲಾಗುತ್ತದೆ. ನಮ್ಮ ರಾಷ್ಟ್ರಪಿತನನ್ನು ಗೌರವಿಸಲು ಇದು ಅತ್ಯಂತ ಸೂಕ್ತ ದಿನವಾಗಿದೆ.

200 ಪದಗಳ ಪ್ರಬಂಧ

ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಜನ್ಮದಿನವನ್ನು ಭಾರತದಾದ್ಯಂತ ಪ್ರತಿ ವರ್ಷ ಅಕ್ಟೋಬರ್ 2ರಂದು ಆಚರಿಸಲಾಗುತ್ತದೆ. ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯನ್ನು ಕೊನೆಗೊಳಿಸುವಲ್ಲಿ ಮತ್ತು ಭಾರತೀಯರಿಗೆ ಸ್ವಾತಂತ್ರ್ಯ ದೊರಕಿಸುವಲ್ಲಿ ಬಾಪೂಜಿ ಅವರು ನೀಡಿರುವ ಕೊಡುಗೆಗಳನ್ನು ಸ್ಮರಿಸಲು ಈ ದಿನ ಅತ್ಯಂತ ಸೂಕ್ತವಾದದ್ದಾಗಿದೆ.

ಈ ದಿನವು ಭಾರತದಲ್ಲಿ ರಾಷ್ಟ್ರೀಯ ರಜಾದಿನಗಳಲ್ಲಿ ಒಂದಾಗಿದೆ. ಈ ದಿನ ಮಾಂಸ ಮತ್ತು ಮದ್ಯ ಮಾರಾಟವನ್ನು ಕಡ್ಡಾಯವಾಗಿ ನಿಷೇಧಿಸಲಾಗುತ್ತದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶಕ್ಕಾಗಿ ಮಹಾತ್ಮಾ ಗಾಂಧಿ ಅವರು ಮಾಡಿರುವ ತ್ಯಾಗವನ್ನು ನೆನಪಿಸಲಾಗುತ್ತದೆ. ಅವರ ನೆಚ್ಚಿನ ಭಜನೆ ರಘುಪತಿ ರಾಘವ ರಾಜಾ ರಾಮ್ ಗೀತೆಯನ್ನು ಹಾಡಲಾಗುತ್ತದೆ.

ಭಾರತದಲ್ಲಿ ಐತಿಹಾಸಿಕ ಸ್ವಾತಂತ್ರ್ಯ ಚಳವಳಿಯನ್ನು ರೂಪಿಸುವಲ್ಲಿ ಮಹಾತ್ಮ ಗಾಂಧಿಯವರ ಪಾತ್ರ ಅತ್ಯಂತ ಪ್ರಮುಖ. ಈ ಭವ್ಯವಾದ ಆಚರಣೆಯ ವೇಳೆ ದೇಶಕ್ಕಾಗಿ ಹೋರಾಡಿದ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಲಾಗುತ್ತದೆ.

Gandhi Jayanti 2024

300 ಪದಗಳ ಪ್ರಬಂಧ

ಅಕ್ಟೋಬರ್ 2ರಂದು ಸಾರ್ವಕಾಲಿಕ ಮಹಾನ್ ನಾಯಕ ಮಹಾತ್ಮ ಗಾಂಧಿಯವರನ್ನು ಸ್ಮರಿಸಲು ರಾಷ್ಟ್ರವ್ಯಾಪಿ ರಜಾದಿನವನ್ನು ಘೋಷಿಸುವ ಮೂಲಕ ಭಾರತದಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. 1869ರಲ್ಲಿ ಜನಿಸಿದ ಅವರು ತಮ್ಮ ಅದ್ಬುತ ವಿಚಾರಧಾರೆಗಳ ಜ್ಞಾನವನ್ನು ವಿಶ್ವಾದ್ಯಂತ ಪಸರಿಸಿದ ಪ್ರಮುಖರು. ಹೀಗಾಗಿ ಇಡೀ ವಿಶ್ವವೇ ಈ ದಿನವನ್ನು ‘ಅಂತಾರಾಷ್ಟ್ರೀಯ ಅಹಿಂಸಾ ದಿನ’ ಎಂದು ಆಚರಿಸುತ್ತದೆ.

ಈ ದಿನ ಭಾರತದಲ್ಲಿ ರಾಷ್ಟ್ರೀಯ ರಜಾದಿನಗಳಲ್ಲಿ ಒಂದಾಗಿದೆ. ಈ ದಿನ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶಕ್ಕಾಗಿ ಮಹಾತ್ಮಾ ಗಾಂಧಿ ಅವರು ಮಾಡಿರುವ ತ್ಯಾಗವನ್ನು ನೆನಪಿಸಲಾಗುತ್ತದೆ. ಅವರ ನೆಚ್ಚಿನ ಭಜನೆ ರಘುಪತಿ ರಾಘವ್ ರಾಜ ರಾಮ್ ಅನ್ನು ಹಾಡಲಾಗುತ್ತದೆ. ರಾಷ್ಟ್ರದಾದ್ಯಂತ ಗಾಂಧಿ ಜಯಂತಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ.

ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರಬಂಧ, ಭಾಷಣ, ಏಕಪಾತ್ರಾಭಿನಯ, ಕಿರುನಾಟಕ, ಪೋಸ್ಟರ್ ತಯಾರಿಕೆ ಸ್ಪರ್ಧೆಗಳು, ಚಿತ್ರಕಲೆ, ಕವಿತೆ ಸ್ಪರ್ಧೆ, ಪುಸ್ತಕ ಓದುವಿಕೆ, ರಸಪ್ರಶ್ನೆ, ಸ್ವಚ್ಛತೆ ಅಥವಾ ಮರ ನೆಡುವುದು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಗಾಂಧಿಯವರ ಜೀವನ ಮತ್ತು ಹೋರಾಟ, ವಿದ್ಯಾರ್ಥಿಗಳಿಗೆ ಗಾಂಧಿ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹಲವು ಮಾಹಿತಿಯನ್ನು ಒದಗಿಸುತ್ತದೆ. ವಿವಿಧ ಚಟುವಟಿಕೆಗಳ ಮೂಲಕ ಮಹಾತ್ಮಾ ಗಾಂಧಿಯವರ ಬಗ್ಗೆ ಜ್ಞಾನವನ್ನು ಹೆಚ್ಚಿಸುತ್ತದೆ. ಗಾಂಧಿ ಜಯಂತಿಯ ಆಚರಣೆಯು ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ವಿಮೋಚನೆಗೊಳಿಸುವಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರ ಹೋರಾಟಗಳ ಬಗ್ಗೆ ಅವರಿಗೆ ಕಲಿಸುವ ಗುರಿಯನ್ನು ಹೊಂದಿವೆ.

ಭಾರತದ ಇತಿಹಾಸ ಮತ್ತು ಭವಿಷ್ಯವನ್ನು ರೂಪಿಸುವಲ್ಲಿ ಮಹಾತ್ಮ ಗಾಂಧಿಯವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ದೇಶಕ್ಕಾಗಿ ಏನಾದರೂ ಮಹತ್ತರವಾದ ಸಾಧನೆ ಮಾಡಿದ ಮತ್ತು ಮಾಡಲಿರುವ ಪ್ರತಿಯೊಬ್ಬ ನಾಯಕನನ್ನು ಗೌರವಿಸುವ ಸಲುವಾಗಿ ದೇಶಾದ್ಯಂತ ಮಹಾತ್ಮಾ ಗಾಂಧಿ ಅವರ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಬಾಪು ಇಲ್ಲದೆ ಅಪೂರ್ಣವಾಗಿರುವುದರಿಂದ ಅವರ ಜನ್ಮ ದಿನಾಚರಣೆಯು ಅತ್ಯಂತ ಮಹತ್ವದ್ದಾಗಿದೆ.

500 ಪದಗಳ ಪ್ರಬಂಧ

ಅಕ್ಟೋಬರ್ 2ರಂದು ಸಾರ್ವಕಾಲಿಕ ಮಹಾನ್ ನಾಯಕ ಮಹಾತ್ಮ ಗಾಂಧಿಯವರನ್ನು ಸ್ಮರಿಸಲು ರಾಷ್ಟ್ರವ್ಯಾಪಿ ರಜಾದಿನವನ್ನು ಘೋಷಿಸುವ ಮೂಲಕ ಭಾರತದಾದ್ಯಂತ ಗಾಂಧಿ ಜಯಂತಿಯನ್ನು ಆಚರಿಸಲಾಗುತ್ತದೆ. 1869ರಲ್ಲಿ ಜನಿಸಿದ ಅವರು ತಮ್ಮ ಅದ್ಭುತ ವಿಚಾರಧಾರೆಗಳನ್ನು ವಿಶ್ವಾದ್ಯಂತ ಪಸರಿಸಿದವರು. ಹೀಗಾಗಿ ಇಡೀ ವಿಶ್ವವೇ ಈ ದಿನವನ್ನು ‘ಅಂತಾರಾಷ್ಟ್ರೀಯ ಅಹಿಂಸಾ ದಿನ’ ಎಂದು ಆಚರಿಸುತ್ತದೆ.

ಈ ದಿನವು ಭಾರತದಲ್ಲಿ ರಾಷ್ಟ್ರೀಯ ರಜಾದಿನಗಳಲ್ಲಿ ಒಂದಾಗಿದೆ. ಈ ದಿನ ಮಾಂಸ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ದೇಶಕ್ಕಾಗಿ ಮಹಾತ್ಮಾ ಗಾಂಧಿ ಅವರು ಮಾಡಿರುವ ತ್ಯಾಗವನ್ನು ನೆನಪಿಸಲಾಗುತ್ತದೆ. ಅವರ ನೆಚ್ಚಿನ ಭಜನೆ ರಘುಪತಿ ರಾಘವ ರಾಜಾರಾಮ್ ಅನ್ನು ಹಾಡಲಾಗುತ್ತದೆ. ರಾಷ್ಟ್ರದಾದ್ಯಂತ ಗಾಂಧಿ ಜಯಂತಿಯನ್ನು ಅತ್ಯಂತ ವೈಭವದಿಂದ ಆಚರಿಸಲಾಗುತ್ತದೆ. ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಪ್ರಬಂಧ, ಭಾಷಣ, ಏಕಪಾತ್ರಾಭಿನಯ, ಕಿರುನಾಟಕ, ಪೋಸ್ಟರ್ ತಯಾರಿಕೆ ಸ್ಪರ್ಧೆಗಳು, ಚಿತ್ರಕಲೆ, ಕವಿತೆ ಸ್ಪರ್ಧೆ, ಪುಸ್ತಕ ಓದುವಿಕೆ, ರಸಪ್ರಶ್ನೆ, ಸ್ವಚ್ಛತೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಗಾಂಧಿ ಜಯಂತಿ ಸಂದರ್ಭದಲ್ಲಿ ಗಾಂಧೀಜಿಯವರ ಜೀವನ ಮತ್ತು ಹೋರಾಟದ ಕತೆಯನ್ನು ಮತ್ತೊಮ್ಮೆ ಮನನ ಮಾಡಿಕೊಳ್ಳಬೇಕಾದ ಸಂದರ್ಭ. ಈ ದಿನವು ವಿದ್ಯಾರ್ಥಿಗಳಿಗೆ ಗಾಂಧಿ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹಲವು ಮಾಹಿತಿಗಳನ್ನು ಒದಗಿಸುತ್ತದೆ. ವಿವಿಧ ಚಟುವಟಿಕೆಗಳ ಮೂಲಕ ಮಹಾತ್ಮಾ ಗಾಂಧಿಯವರ ಬಗ್ಗೆ ಜ್ಞಾನವನ್ನು ಹೆಚ್ಚಿಸುತ್ತದೆ. ಗಾಂಧಿ ಜಯಂತಿ ಆಚರಣೆಯು ಬ್ರಿಟಿಷ್ ಆಳ್ವಿಕೆಯಿಂದ ಭಾರತವನ್ನು ವಿಮೋಚನೆಗೊಳಿಸುವಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಗಾರರು ಪಟ್ಟ ಪರಿಶ್ರಮವನ್ನು ಮತ್ತೊಮ್ಮೆ ಸಾರಿ ಹೇಳುತ್ತದೆ.

ಗಾಂಧೀಜಿಯವರ ಜೀವನ ಮತ್ತು ಹೋರಾಟ, ಗಾಂಧಿ ಮತ್ತು ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಚಲನಚಿತ್ರಗಳನ್ನು ತೋರಿಸುವುದು ಸೇರಿದಂತೆ ವಿವಿಧ ಚಟುವಟಿಕೆಗಳ ಮೂಲಕ ಮಹಾತ್ಮಾ ಗಾಂಧಿಯವರ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಪರಿಚಯವನ್ನು ಈ ದಿನ ಮಾಡಿಸಲಾಗುತ್ತದೆ. ಈ ಬಾರಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 155ನೇ ಜನ್ಮದಿನವಾಗಿದೆ.

ಇಷ್ಟಕ್ಕೂ ಮಹಾತ್ಮ ಗಾಂಧಿ ಅವರನ್ನು ರಾಷ್ಟ್ರಪಿತ ಎಂದು ಕರೆದಿದ್ದು ಯಾರು ಗೊತ್ತೆ? ಗಾಂಧಿಯವರನ್ನು ರಾಷ್ಟ್ರ ಪಿತ ಎಂಬ ಬಿರುದನ್ನು ನೀಡಿದ್ದು ಮತ್ತೊಬ್ಬ ಪ್ರಮುಖ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್! ಗಾಂಧಿ ಜಯಂತಿಯು ಭಾರತದಲ್ಲಿ ತಂದ ಮಹಾನ್ ಸಾಧನೆಗಳ ಸ್ಮರಣಾರ್ಥವಾಗಿದೆ. ಗಾಂಧಿಯವರು ಭಾರತವನ್ನು ಈಸ್ಟ್ ಇಂಡಿಯಾ ಕಂಪನಿಯ ಆಡಳಿತದಿಂದ ಮುಕ್ತಗೊಳಿಸಿದ್ದು ಮಾತ್ರವಲ್ಲದೆ ಭಾರತೀಯ ಸಮಾಜದ ಸಾಮಾಜಿಕ ಸಮಸ್ಯೆಗಳ ವಿರುದ್ಧವೂ ಹೋರಾಡಿದರು. ಅವರು ನಮಗೆ ಸ್ವಾವಲಂಬನೆ, ಧೈರ್ಯ, ಅಹಿಂಸೆ, ಸರಳತೆ, ಮಹಿಳಾ ಸಬಲೀಕರಣ ಮತ್ತು ಶಿಕ್ಷಣದ ಶಕ್ತಿಯನ್ನು ಕಲಿಸಿದರು.

ಭಾರತದಲ್ಲಿ ಬ್ರಿಟಿಷರ ವಿರುದ್ಧ ಅಹಿಂಸಾತ್ಮಕ, ಆದರೆ ಪರಿಣಾಮಕಾರಿಯಾದ ಚಳುವಳಿಗಳನ್ನು ರೂಪಿಸುವಲ್ಲಿ ಮಹಾತ್ಮ ಗಾಂಧಿಯವರು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಗಾಂಧಿ ಜಯಂತಿಯನ್ನು ಭಾರತದಲ್ಲಿ ಪ್ರಮುಖ ಹಬ್ಬದಂತೆ ಆಚರಿಸಲಾಗುತ್ತದೆ. ಈ ಭವ್ಯವಾದ ಆಚರಣೆಯು ದೇಶವನ್ನು ಮುನ್ನಡೆಸಿದ ನಾಯಕರು ಮತ್ತು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಬಹುದೊಡ್ಡ ಗೌರವವೂ ಹೌದು.

ಮಹಾತ್ಮಾ ಗಾಂಧೀಜಿಯವರ ತತ್ತ್ವ, ಸಂದೇಶಗಳನ್ನು ಪಾಲಿಸೋಣ. ಅವರ ಆದರ್ಶ ಗುಣಗಳನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಂಡು ದೇಶಕ್ಕೆ ಸಮೃದ್ಧಿ ಮತ್ತು ಪ್ರಗತಿಯನ್ನು ತರುವ ವ್ಯಕ್ತಿಗಳಾಗೋಣ.

Gandhi Jayanti 2024

10 ಸಾಲುಗಳ ಪ್ರಬಂಧ

  • ಅಕ್ಟೋಬರ್ 2, 2024ರಂದು ಮಹಾತ್ಮ ಗಾಂಧಿಯವರ 155ನೇ ಜನ್ಮ ದಿನವನ್ನು ಆಚರಿಸಲಾಗುತ್ತದೆ.
  • ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ಗೌರವಿಸಲು ಭಾರತವು ಪ್ರತಿ ವರ್ಷ ಅಕ್ಟೋಬರ್ 2ರಂದು ಗಾಂಧಿ ಜಯಂತಿಯನ್ನು ಆಚರಿಸುತ್ತದೆ.
  • ವಿಶ್ವಸಂಸ್ಥೆಯು ಅಕ್ಟೋಬರ್ 2 ಅನ್ನು ‘ಅಂತಾರಾಷ್ಟ್ರೀಯ ಅಹಿಂಸಾ ದಿನ’ ಎಂದು ಘೋಷಿಸಿದೆ.
  • ಅವರ ನೆಚ್ಚಿನ ಭಜನೆ ರಘುಪತಿ ರಾಘವ ರಾಜಾರಾಮ್ ಅನ್ನು ಸಾಮಾನ್ಯವಾಗಿ ಈ ದಿನ ವಿಶೇಷವಾಗಿ ಹಾಡಲಾಗುತ್ತದೆ.
  • ಈ ದಿನವನ್ನು ಭಾರತದಲ್ಲಿ ರಾಷ್ಟ್ರೀಯ ರಜಾದಿನಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ. ಈ ದಿನ ಮದ್ಯ, ಮಾಂಸ ಮಾರಾಟ ನಿಷೇಧಿಸಲಾಗುತ್ತದೆ.
  • ಈ ದಿನ ಮಹಾತ್ಮಾ ಗಾಂಧಿ ಅವರ ಪ್ರತಿಮೆ, ಬಾಪು ಅವರ ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸ್ಥಳಗಳನ್ನು ಅಲಂಕರಿಸಲಾಗುತ್ತದೆ.
  • ಈಸ್ಟ್ ಇಂಡಿಯಾ ಕಂಪನಿಯ ಆಳ್ವಿಕೆಯನ್ನು ಕೊನೆಗೊಳಿಸುವಲ್ಲಿ ಬಾಪು ಅವರ ಕೊಡುಗೆಗಳನ್ನು ಸ್ಮರಿಸಲು ಈ ದಿನವನ್ನು ದೇಶಾದ್ಯಂತ ಪ್ರೀತಿ ಮತ್ತು ಗೌರವದಿಂದ ಆಚರಿಸಲಾಗುತ್ತದೆ.
  • ಗಾಂಧೀಜಿಯವರು ನಮಗೆ ಸ್ವಾವಲಂಬನೆ, ಧೈರ್ಯ, ಅಹಿಂಸೆ, ಸರಳತೆ, ಮಹಿಳಾ ಸಬಲೀಕರಣ ಮತ್ತು ಶಿಕ್ಷಣದ ಶಕ್ತಿಯನ್ನು ಕಲಿಸಿದವರಾಗಿದ್ದಾರೆ.

Pralhad Joshi : ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಮೆರುಗು; ಪ್ರಲ್ಹಾದ್ ಜೋಶಿ

  • ಅವರನ್ನು ಇನ್ನೊಬ್ಬ ಪ್ರಮುಖ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ʼರಾಷ್ಟ್ರಪಿತʼ ಎಂದು ಕರೆದಿದ್ದರು.
  • ಮಹಾತ್ಮಾ ಗಾಂಧೀಜಿಯವರು ಹೇಳಿರುವ ಒಂದು ಪ್ರಮುಖ ಸಾಲು ಮಾರ್ಮಿಕವಾಗಿದೆ: ನೀವು ನಾಳೆಯೇ ಸಾಯುವವರಂತೆ ಇಂದು ಬದುಕಿ! ಆದರೆ ಮಾಡುವ ಕಾರ್ಯಗಳಿಂದ ಶಾಶ್ವತವಾಗಿ ಬದುಕಿ!