Saturday, 16th November 2024

Banana and Water: ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿದರೆ ಈ ಆರೋಗ್ಯ ಸಮಸ್ಯೆ ಕಾಡಬಹುದು!

Stomach Pian

ಬೆಂಗಳೂರು: ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲಿ ಬಾಳೆ ಹಣ್ಣು ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದರೆ ಬಾಳೆಹಣ್ಣು(Banana and water)ಗಳನ್ನು ತಿಂದ ತಕ್ಷಣ ಕೆಲವರು ನೀರನ್ನು ಕುಡಿಯುತ್ತಾರೆ. ಆದರೆ ಇದು ಅನೇಕ ದೊಡ್ಡ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದ್ದರಿಂದ ಬಾಳೆಹಣ್ಣು ತಿಂದ ನಂತರ ಎಷ್ಟು ಸಮಯದವರೆಗೆ ನೀರನ್ನು ಸೇವಿಸಬೇಕು ಎಂದು ತಜ್ಞರಿಂದ ತಿಳಿದುಕೊಳ್ಳೋಣ.

ತಜ್ಞರು ತಿಳಿಸಿದ ಪ್ರಕಾರ, ಬಾಳೆಹಣ್ಣು ಫೈಬರ್ ಮತ್ತು ನೈಸರ್ಗಿಕ ಸಕ್ಕರೆ ಸಮೃದ್ಧವಾಗಿರುವ ಹಣ್ಣು. ಈ ಕಾರಣದಿಂದಾಗಿ ನೀವು ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿದರೆ ನಂತರ ಜೀರ್ಣಾಂಗ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.

Banana and Water

ಬಾಳೆಹಣ್ಣು ತಿಂದ ನಂತರ ನೀರು ಏಕೆ ಕುಡಿಯಬಾರದು?

ಬಾಳೆಹಣ್ಣುಗಳನ್ನು ಜೀರ್ಣಿಸಿಕೊಳ್ಳಲು ತುಂಬಾ ಸಮಯ ಬೇಕಾಗುತ್ತದೆ. ನೀವು ಈ ಹಣ್ಣು ತಿಂದ ತಕ್ಷಣ ನೀರು ಕುಡಿದರೆ, ಈ ಪ್ರಕ್ರಿಯೆಯು ಮತ್ತಷ್ಟು ನಿಧಾನವಾಗುತ್ತದೆ.  ಇದರಿಂದ ಬಾಳೆಹಣ್ಣು ತಿಂದ ತಕ್ಷಣ ನೀರು ಕುಡಿಯುವ ಜನರ ಹೊಟ್ಟೆಯಲ್ಲಿ ಅನಿಲ ಸಮಸ್ಯೆ ಕಾಡುತ್ತದೆ. ಹೊಟ್ಟೆಯಲ್ಲಿ ಬಾಳೆಹಣ್ಣಿನೊಂದಿಗೆ ತಣ್ಣೀರು ಮಿಕ್ಸ್ ಆದಾಗ ಆಮ್ಲೀಯತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಇದು ಹೊಟ್ಟೆಯ ಕಿರಿಕಿರಿ, ಸೆಳೆತ ಮತ್ತು ನೋವಿಗೆ ಕಾರಣವಾಗಬಹುದು.

ಇದಲ್ಲದೆ, ಬಾಳೆಹಣ್ಣು ಒಂದು ತಂಪಾದ ಗುಣಗಳನ್ನು ಹೊಂದಿರುವ ಹಣ್ಣು. ಇದನ್ನು ಸೇವಿಸಿದ ತಕ್ಷಣ ನೀರು ಕುಡಿದರೆ ಅವರ ದೇಹದ ತಾಪಮಾನವು ಇದ್ದಕ್ಕಿದ್ದಂತೆ ಬದಲಾಗುತ್ತದೆ. ಇದರಿಂದಾಗಿ ಇದು ದೇಹದ ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಶೀತ ಅಥವಾ ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ.

Banana and Water

ಬಾಳೆಹಣ್ಣು ತಿಂದ ಎಷ್ಟು ಸಮಯದ ಬಳಿಕ ನೀರು ಕುಡಿಯಬೇಕು?

ಬಾಳೆಹಣ್ಣು ತಿಂದ ನಂತರ 30-45 ನಿಮಿಷಗಳ ನಂತರ ನೀರು ಕುಡಿಯಬೇಕು. ಇದರಿಂದ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಪೂರ್ಣಗೊಳ್ಳಲು ಸಮಯ ಸಿಗುತ್ತದೆ ಮತ್ತು ಬಾಳೆಹಣ್ಣು ಸರಿಯಾಗಿ ಜೀರ್ಣವಾಗುತ್ತದೆ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ: ಅಕ್ಕಿಯ ನೀರನ್ನು ಹೇಗೆಲ್ಲ ಬಳಸಬಹುದು ನೋಡಿ!

ಹಾಗಾಗಿ ಬಾಳೆಹಣ್ಣು ತಿಂದ ತಕ್ಷಣ ನೀವು ನೀರು ಕುಡಿಯುತ್ತಿದ್ದರೆ ಅದನ್ನು ಇಂದೇ ಬಿಟ್ಟು ಬಿಡಿ. ಯಾಕೆಂದರೆ ಇದರಿಂದ ಏನೆಲ್ಲಾ ಸಮಸ್ಯೆಯಾಗುತ್ತದೆ ಎಂಬುದು ನಿಮಗೆ ಈಗ ತಿಳಿದಿರುತ್ತದೆ.