ಮನೆಯಲ್ಲಿರುವ ಸಣ್ಣಪುಟ್ಟ ವಸ್ತುಗಳು ಶಕ್ತಿಯ ಸಂಕೇತಗಳಾಗಿರುತ್ತವೆ. ಇದು ಮನೆ, ಮನೆಯ ಸುತ್ತಮುತ್ತ ಮಾತ್ರವಲ್ಲ ಮನೆಯವರ ಮನದಲ್ಲೂ ಸಕಾರಾತ್ಮಕತೆಯನ್ನು (positivity) ತುಂಬುತ್ತದೆ. ಇಂತಹ ಒಂದು ಶಕ್ತಿಯುತವಾದ ಸಂಕೇತ ಅಮೆಯಾಗಿದೆ (Tortoise) ಎನ್ನುತ್ತದೆ ವಾಸ್ತು ಶಾಸ್ತ್ರ (Vastu Tips).
ಹೆಸರಾಂತ ವಾಸ್ತು ಶಾಸ್ತ್ರಜ್ಞರಾದ ಕಲಾಭೂಮಿಕಾ ಅವರು ಸಂಪತ್ತು, ಆರೋಗ್ಯ ಅಥವಾ ಖ್ಯಾತಿ, ಜೀವನದ ಹಲವು ಕ್ಷೇತ್ರಗಳಲ್ಲಿನ ವಾಸ್ತುಗಳ ಸುಧಾರಣೆಗೆ ಆಮೆಯನ್ನು ಹೇಗೆ ಬಳಸುವುದು ಎಂಬುದರ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಸಲಹೆಗಳನ್ನು ಹಂಚಿಕೊಂಡಿದ್ದಾರೆ. ಉತ್ತರ ಮತ್ತು ದಕ್ಷಿಣ ದಿಕ್ಕಿನಲ್ಲಿ ಇರಿಸುವ ಸ್ಫಟಿಕ ಆಮೆ ಮನೆಯಲ್ಲಿ ಸಂಪತ್ತನ್ನು ಹೆಚ್ಚಿಸುತ್ತದೆ ಎನ್ನುತ್ತಾರೆ ಕಲಾಭೂಮಿಕಾ.
ಉತ್ತರ ಮತ್ತು ದಕ್ಷಿಣಾಭಿಮುಖವಾಗಿ ಇರಿಸುವ ಸ್ಫಟಿಕ ಆಮೆ ನಿಷ್ಪ್ರಯೋಜಕವಾಗಿ ಹಣ ವ್ಯರ್ಥವಾಗುವುದನ್ನು ತಡೆಯುತ್ತದೆ. ಸಂಪತ್ತಿಗೆ ರಕ್ಷಣೆಯನ್ನು ಒದಗಿಸುತ್ತದೆ ಎನ್ನುತ್ತಾರೆ ಅವರು.
ಹಣವನ್ನು ಉತ್ತಮವಾಗಿ ನಿಭಾಯಿಸಲು ಇದು ಸಹಾಯ ಮಾಡುತ್ತದೆ. ಆಮೆಯನ್ನು ಸುದೀರ್ಘ ಜೀವನ ಮತ್ತು ಸ್ಥಿರತೆಯ ಸಂಕೇತವಾಗಿ ಬಳಸಲಾಗುತ್ತದೆ. ಹಣ ಬದುಕಿನ ಆಧಾರ. ಹಣವನ್ನು ದುಂದು ವೆಚ್ಚ ಮಾಡಬಾರದು ಎಂದು ಅದು ನಿಮಗೆ ನನಪಿಸುತ್ತದೆ ಎಂದು ಅವರು ವಿವರಿಸುತ್ತಾರೆ.
ಲೋಹ ಅಥವಾ ಮರದ ಆಮೆಯನ್ನು ದಕ್ಷಿಣ ಭಾಗದಲ್ಲಿ ಇಡಬೇಕು ಎನ್ನುತ್ತಾರೆ ಕಲಾಭೂಮಿಕಾ.
ಆದರೆ ಅದು ಸಂಪೂರ್ಣ ಪರಿಣಾಮಕಾರಿಯಾಗಿರಲು ಅದನ್ನು ನೀರಿನಲ್ಲಿ ಅರ್ಧದಷ್ಟು ಇಡಬೇಕು. ಆಮೆಯನ್ನು ಅದರ ಬೆನ್ನು ಒಣಗುವ ರೀತಿಯಲ್ಲಿ ಇರಿಸಬೇಕು. ಆಮೆ ಪಾದಗಳು ನೀರಿನಲ್ಲಿ ಇರಿಸಬೇಕು. ಇದು ಜೀವನದಲ್ಲಿ ಸಮತೋಲನವನ್ನು ತರುತ್ತದೆ. ಎಲ್ಲಾ ಧನಾತ್ಮಕ ಶಕ್ತಿಗಳನ್ನು ಅದರ ಕಡೆಗೆ ಆಕರ್ಷಿಸಲು ಸಹಾಯ ಮಾಡುತ್ತದೆ.
ಲೋಹ ಅಥವಾ ಸ್ಫಟಿಕದ ಆಮೆಯನ್ನು ಉತ್ತರಕ್ಕೆ ಇಡುವುದರಿಂದ ಮನೆಯಲ್ಲಿರುವವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ದಿಕ್ಕು ಸಮೃದ್ಧಿ ಮತ್ತು ಬೆಳವಣಿಗೆಗೆ ಸಂಬಂಧಿಸಿದೆ. ಹೀಗಾಗಿ ಆಮೆಯನ್ನು ಇರಿಸಲು ಇದು ಅತ್ಯುತ್ತಮ ಸ್ಥಳವಾಗಿದೆ.
Vastu Tips: ನಿದ್ರೆಯ ಗುಣಮಟ್ಟ ಹೆಚ್ಚಿಸಲು ವಾಸ್ತು ಶಾಸ್ತ್ರದಲ್ಲಿ ಏನಿದೆ ಉಪಾಯ?
ಈ ವಿಡಿಯೋದಲ್ಲಿ ಅವರು ತಮ್ಮ ಮನೆಯಲ್ಲಿ ಇರುವ ಆಮೆಯ ಕುರಿತು ಹೇಳಿಕೊಂಡಿದ್ದಾರೆ. ಆಮೆಯು ಸಮುದಾಯದೊಂದಿಗಿನ ಸಂಬಂಧ ಮತ್ತು ವಾಸಸ್ಥಳದಲ್ಲಿನ ಶಕ್ತಿಯ ಉನ್ನತಿಗೆ ಸಂಬಂಧಿಸಿ ವಿಶೇಷ ಪರಿಹಾರಗಳನ್ನು ನೀಡುತ್ತದೆ. ಇದು ಸಂಬಂಧವನ್ನು ರೂಪಿಸಲು ಸಹಾಯ ಮಾಡುತ್ತದೆ. ವ್ಯಕ್ತಿಯು ತಮ್ಮ ಜೀವನದಲ್ಲಿ ಸಮೃದ್ಧಿ, ಉತ್ತಮ ಆರೋಗ್ಯ ಮತ್ತು ಸಕಾರಾತ್ಮಕತೆಯನ್ನು ತರಲು ಮನೆಯಲ್ಲಿ ಆಮೆಯ ಶಕ್ತಿಯನ್ನು ಇರಿಸುವುದು ಉತ್ತಮ ಎಂದು ಅವರು ಹೇಳುತ್ತಾರೆ.