ನಂದಿ ಬೆಟ್ಟ ನೋಡಲು ಬಂದಿದ್ದ ೨೪ ವರ್ಷದ ಕಿರಣ್ ಸ್ಥಳದಲ್ಲಿಯೇ ಸಾವು
ಚಿಕ್ಕಬಳ್ಳಾಪುರ: ನಂದಿ ಬೆಟ್ಟ ನೋಡಲು ಬಂದ ಕೇರಳದ ಯುವಕ ನಂದಿ ಗಿರಿದಾಮ ನೋಡಿಕೊಂಡು ಬೆಂಗಳೂರಿಗೆ ವಾಪಸಾಗುವಾಗ ಬೈಕ್ ಮತ್ತು ಆಟೋ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಈ ಭೀಕರ ಅಪಘಾತದಲ್ಲಿ ಬೈಕ್ ಸವಾರ ೨೪ವರ್ಷದ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಸೋಮವಾರ ನಡೆದಿದೆ.
ಬೆಟ್ಟದ ಕ್ರಾಸ್ ಬಳಿಯಿರುವ ಸಿಲ್ವರ್ ಕೆಫೆ ಬಳಿ ಈ ದುರ್ಘಟನೆ ನಡೆದಿದ್ದು ಬೈಕ್ ಆಟೋಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಿರಣ್ (೨೪) ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಸ್ನೇಹಿತರು ಗಂಭೀರಗಾಯ ಗೊಂಡಿದ್ದಾರೆ.
ಬೆಂಗಳೂರಿನ ಮೆಜೆಸ್ಟಿಕ್ನ ಟ್ರಾವೆಲ್ಸ್ ಒಂದರಲ್ಲಿ ಬುಕಿಂಗ್ ಕೆಲಸ ಮಾಡಿಕೊಂಡಿದ್ದ ಕಿರಣ್, ಆನಂದು ಶಾಜಿ ಎಂಬಿತರ ಸ್ನೇಹಿತರ ಜೊತೆಗೂಡಿ ನಂದಿಬೆಟ್ಟಕ್ಕೆ ಬಂದಿದ್ದಾನೆ.ಬೆಟ್ಟದ ಸೌಂದರ್ಯ ವೀಕ್ಷಿಸಿ ಅದೇ ಸಂತೋಷದಲ್ಲಿ ವಾಪಸ್ಸು ಹೋಗುವಾಗ ನಂದಿ ಬೆಟ್ಟದ ಬುಡದಲ್ಲಿ ನಡೆದ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಇನ್ನೂ ಇದೇ ಬೈಕ್ ಹಿಂಬದಿ ಕುಳಿತ್ತಿದ್ದ ಅನಂದು, ಶಾಜಿ ಎಂಬುವರು ಗಂಭೀರ ಗಾಯಗೊಂಡಿದ್ದು ಬೆಂಗಳೂರು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದ್ದು ಸ್ಥಳಕ್ಕೆ ನಂದಿಗಿರಿಧಾಮ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.