Monday, 28th October 2024

L P Kulkarni Column: ಸಾಹಿತ್ಯದಲ್ಲಿ ಮೊದಲ ನೊಬೆಲ್

– ಎಲ್.ಪಿ.ಕುಲಕರ್ಣಿ

ಅಕ್ಟೋಬರ್ ತಿಂಗಳು ಬಂತು ಎಂದರೆ, ಈ ವರ್ಷ ಯಾರ‍್ಯಾರಿಗೆ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಗು ತ್ತದೆ ಎಂಬ ಕುತೂಹಲ ಜಗತ್ತಿನಾದ್ಯಂತ ಗರಿಗೆದರುತ್ತದೆ. ಈ ಹಿನ್ನೆಲೆಯಲ್ಲಿ, ಸಾಹಿತ್ಯದಲ್ಲಿ ಮೊದಲ ನೊಬೆಲ್ ಪ್ರಶಸ್ತಿ ಪಡೆದವರ ಕಿರು ಅವಲೋಕನ ಇಲ್ಲಿದೆ.

ಭೌತಶಾಸ್ತ್ರ, ರಾಸಾಯನಶಾಸ್ತ್ರ, ಶರೀರಶಾಸ್ತ್ರ ಮತ್ತು ಔಷಧವಿಜ್ಞಾನ, ಸಾಹಿತ್ಯ, ಶಾಂತಿ ಹಾಗೂ ಅರ್ಥಶಾಸ್ತ್ರ ಹೀಗೆ ಒಟ್ಟು ಆರು ವಿಭಾಗಗಳಲ್ಲಿ ಅಪರೂಪದ ಸಾಧನೆಗೈದವರಿಗೆ ನೊಬೆಲ್ ಪ್ರಶಸ್ತಿಯನ್ನು ಕೊಡಲಾಗುತ್ತದೆ. ಆಯಾ
ವರ್ಷ ಪ್ರಶಸ್ತಿ ಪಡೆದವರ ಆಯ್ಕೆ ಪಟ್ಟಿಯನ್ನು ಅಕ್ಟೋಬರ್ ತಿಂಗಳ ಮೊದಲ ವಾರದಿಂದಲೇ ಬಿಡುಗಡೆ ಮಾಡ ಲಾಗುತ್ತದೆ.

ಸಾಹಿತ್ಯ ಕ್ಷೇತ್ರದಲ್ಲಿ ಮೊದಲ ನೊಬೆಲ್ ಪಡೆದ ವ್ಯಕ್ತಿ ಯಾರೆಂದು ಹುಡುಕುತ್ತ ಹೊರಟರೆ ಆಗ ಸಿಗುವ ವ್ಯಕ್ತಿಯೇ ಫ್ರೆಂಚ್ ಕವಿ, ಸಾಹಿತಿ ಸುಲ್ಲಿಪ್ರುದೊಮ್ಮೆ. ಮಾರ್ಚ್ ೧೬, ೧೮೩೯ ರಂದು ಪ್ಯಾರಿಸ್‌ನಲ್ಲಿ ಜನಿಸಿದ ಪ್ರುದೊಮ್ಮೆ ಮೂಲತಃ ಇಂಜಿನಿಯರ್ ಆಗಬೇಕೆಂದು ಕನಸುಕಂಡು ಆ ನಿಟ್ಟಿನಲ್ಲಿ ಅಧ್ಯಯನ ಮಾಡಿದವರು, ಆದರೆ ಅವರ ಮನಸ್ಸು ತತ್ವಶಾಸ್ತ್ರಕ್ಕೆ ಮತ್ತು ನಂತರ ಕಾವ್ಯಕ್ಕೆ ತಿರುಗಿತು; ಆಧುನಿಕ ಕಾಲಕ್ಕೆ ವೈಜ್ಞಾನಿಕ ಕಾವ್ಯವನ್ನು ರಚಿಸುವುದು ಅವರ ಉದ್ದೇಶವೆಂದು ಅವರೇ ಸ್ವತಃ ಹೇಳಿಕೊಂಡಿದ್ದಿದೆ.

ಪ್ರಾಮಾಣಿಕ ಮತ್ತು ವಿಷಣ್ಣತೆಗಳನ್ನು ಅವರು ತಮ್ಮ ಸಾಹಿತ್ಯ ಪ್ರಕಾರಗಳಲ್ಲಿ ಕಟ್ಟಿಕೊಟ್ಟಿದ್ದಾರೆ. ಅವರು
ಪಾರ್ನಾಸಸ್ ಶಾಲೆಗೆ ಸಂಪರ್ಕ ಹೊಂದಿದ್ದರು. ಅದೇ ಸಮಯದಲ್ಲಿ, ಅವರು ಕಾವ್ಯ ಹಾಗೂ ಬರವಣಿಗೆ
ಯತ್ತ ಮನಸೋತರು. ಪ್ರಾಮಾಣಿಕ ಮತ್ತು ವಿಷಣ್ಣತೆಗಳನ್ನು ಅವರು ತಮ್ಮ ಸಾಹಿತ್ಯ ಪ್ರಕಾರಗಳಲ್ಲಿ ಕಟ್ಟಿ ಕೊಟ್ಟಿದ್ದಾರೆ. ಮತ್ತು ಹಲವು ಆಯಾಮದ ಆಲೋಚನೆಗಳನ್ನು ತೋರಿಸುವ ಅವರ ಸುಂದರವಾದ ಕವಿತೆಗಳಿಗಾಗಿ ಪ್ರುದೊಮ್ಮೆ ೧೯೦೧ ರಲ್ಲಿ ನೊಬೆಲ್ ಬಹುಮಾನವನ್ನು ಪಡೆದರು.

ನೊಬೆಲ್ ಪ್ರಶಸ್ತಿ
ನೊಬೆಲ್ ಪ್ರಶಸ್ತಿಗಳು 1895 ರಲ್ಲಿ, ಡೈನಮೈಟ್ ವ್ಯಾಪಾರಿ ಆಲ್ರೆಡ್ ನೊಬೆಲ್ ಅವರ ಇಚ್ಛೆಯ ಮೂಲಕ ಸ್ಥಾಪಿಸ ಲಾದ ಪ್ರತಿಷ್ಠಿತ ಪ್ರಶಸ್ತಿಗಳಾಗಿವೆ. ಮೊದಲ ಬಾರಿಗೆ 1901 ರಲ್ಲಿ ನೀಡಲಾಯಿತು, ಅವರು ಐದು ವಿಭಾಗಗಳಲ್ಲಿ ಮಾನವೀಯತೆಗೆ ಗಣನೀಯವಾಗಿ ಪ್ರಯೋಜನವನ್ನು ನೀಡಿದ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಗುರುತಿಸುತ್ತಾರೆ: ಭೌತಶಾಸ, ರಸಾಯನಶಾಸ್ತ್ರ, ಶರೀರಶಾಸ್ತ್ರ ಅಥವಾ ಔಷಧ, ಸಾಹಿತ್ಯ, ಮತ್ತು ಶಾಂತಿ. 1969 ರಲ್ಲಿ ಆರ್ಥಿಕ ವಿಜ್ಞಾನಕ್ಕೆ ಹೆಚ್ಚುವರಿ ಬಹುಮಾನವನ್ನು ಸೇರಿಸಲಾಯಿತು.

ಇದಕ್ಕೆ ಸ್ವೀಡನ್‌ನ ಕೇಂದ್ರ ಬ್ಯಾಂಕ್‌ನಿಂದ ಧನಸಹಾಯ ಪಡೆಯಲಾಗುತ್ತದೆ. ಸಾಮಾನ್ಯವಾಗ ಪ್ರತಿವರ್ಷ ಅಕ್ಟೋಬರ್ ತಿಂಗಳ ಮೊದಲ ಮತ್ತು ಎರಡನೆಯ ವಾರದಲ್ಲಿ ನೊಬೆಲ್ ಪ್ರಶಸ್ತಿಗಳನ್ನು ಘೋಷಿಸಲಾಗುತ್ತದೆ.
ನಮ್ಮ ದೇಶಕ್ಕೆ ಮೊದಲ ಪ್ರಶಸ್ತಿ ದೊರಕಿದ್ದು 1913ರಲ್ಲಿ – ಕವಿ ರವೀಂದ್ರ ನಾಥ ಟ್ಯಾಗೋರ್ ಅವರಿಗೆ.

ಕೆಲವು ಗದ್ಯಗಳು ಕೃತಿಗಳು

ಕ್ಯೂ ಸೈಸ್-ಜೆ (1896) – ತತ್ವಶಾಸ್ತ್ರ ಟೆಸ್ಟಮೆಂಟ್ ಪೊಯೆಟಿಕ್ (1901) – ಪ್ರಬಂಧಗಳು ಲಾ ವ್ರೈ ರಿಲಿಜನ್ ಸೆಲೋನ್ ಪ್ಯಾಸ್ಕಲ್ (1905) – ಪ್ರಬಂಧಗಳು ಜರ್ನಲ್ ಟೈಮ್: ಲೆಟರ್ಸ್-ಪೆನ್ಸೀ (1922) ಅವರು 1870 ರಿಂದಲೂ ಅವರು ಅನಾರೋಗ್ಯದಿಂದ ನೆರಳುತ್ತಿದ್ದರು. ಕೊನೆಗೆ ಅವರ ಅನಾರೋಗ್ಯ ಪಾರ್ಶ್ವ ವಾಯುವಿಗೆ ದಾರಿಮಾಡಿಕೊಟ್ಟಿತು. 6 ಸೆಪ್ಟೆಂಬರ್ 1907 ರಂದು ಅವರು ಕೊನೆಯುಸಿರೆಳೆದರು. ಪ್ಯಾರಿಸ್ ನ ಪೆರೆ-ಲಚೈಸ್ ಎಂಬಲ್ಲಿ ಅವರ ಸಮಾಧಿ ಯನ್ನು ಮಾಡಲಾಗಿದೆ.

ಅವರ ಕೆಲವು ಕವನ ಸಂಕಲನಗಳು

ನಿಲುವುಗಳು ಮತ್ತು ಕವಿತೆಗಳು -1865

ಲೆಸ್ ಎಪ್ರೆವ್ಸ್ -1866.
ಕ್ರೋಕ್ವಿಸ್ ಇಟಾಲಿಯನ್ಸ್ -1868.
ಲೆಸ್ ಸಾಲಿಟ್ಯುಡ್ಸ್: ಪೊಯೆಸಿಸ್ -1869.
ಲೆಸ್ ಡೆಸ್ಟಿನ್ಸ್ -1892.

ಇದನ್ನೂ ಓದಿ: Murder case: ಗಂಡನಿಗೆ ನಿದ್ರೆ ಮಾತ್ರೆ ಹಾಕಿ ಪರಸಂಗ, ಪ್ರಿಯತಮನ ಜೊತೆ ಸೇರಿ ಕೊಲೆ