ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ಬೆದರಿಕೆಗಳು ಭಯಾನಕವಾಗಿ ಹೆಚ್ಚುತ್ತಿರುವಂತೆಯೇ, ಇದೀಗ ಅಲ್ಲಿಯ ಮುಸ್ಲಿಂ ನಾಯಕರೊಬ್ಬ ಹಿಂದೂ ಸಮುದಾಯಕ್ಕೆ ಏಳು ದಿನಗಳಲ್ಲಿ ದೇಶವನ್ನು ಬಿಟ್ಟು ಹೋಗುವಂತೆ ಎಚ್ಚರಿಕೆ ನೀಡಿದ್ದಾನೆ. ಇದರಿಂದ ಈ ಪ್ರದೇಶದಲ್ಲಿ ವಾಸವಾಗಿದ್ದ ಅಲ್ಪಸಂಖ್ಯಾತರಲ್ಲಿ ಕಳವಳ ಹೆಚ್ಚಾಗಿದೆ. ಮೆರವಣಿಗೆಯ ವೇಳೆ ಸ್ಥಳೀಯ ಮುಸ್ಲಿಂ ನಾಯಕನೊಬ್ಬ “ಅಲ್ಲಾಹ್ ಅಕ್ಬರ್” ಎಂಬ ಘೋಷಣೆಗಳನ್ನು ಕೂಗುತ್ತಾ ಹಿಂದೂಗಳು ಏಳು ದಿನಗಳಲ್ಲಿ ದೇಶವನ್ನು ಬಿಟ್ಟು ಹೋಗುವಂತೆ ಬೆದರಿಕೆ ಹಾಕಿದ್ದಾನೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದ್ದು, ಬಾಂಗ್ಲಾದೇಶದಲ್ಲಿರುವ ಹಿಂದೂಗಳ ಸ್ಥಿತಿಯ ಬಗ್ಗೆ ಇದು ಮತ್ತಷ್ಟು ಕಳವಳವನ್ನು ಉಂಟುಮಾಡಿದೆ.
“ನಿಮ್ಮ ತಂದೆಯರು ಹೊರಟುಹೋಗಿದ್ದಾರೆ. ನಿಮ್ಮ ಸಹೋದರರು ಭಯಭೀತರಾಗಿದ್ದಾರೆ. ನೀವೂ ಹೊರಟುಹೋಗಿ” ಎಂದು ಆ ನಾಯಕ ಘೋಷಣೆ ಕೂಗಿದ್ದಾನೆ. ಇದು ಹಿಂದೂ ಮತ್ತು ಬೌದ್ಧ ಸಮುದಾಯಗಳಿಗೆ ಎಚ್ಚರಿಕೆಯ ಸಂದೇಶವಾಗಿದ್ದು, ದೇಶವನ್ನು ತೊರೆಯಬೇಕು. ಇಲ್ಲವಾದರೆ ಕ್ರೂರ ಪರಿಣಾಮಗಳನ್ನು ಎದುರಿಸುವಂತೆ ತಿಳಿಸಲಾಗಿದೆ.
হিন্দুদের ৭ দিনের মধ্যে দেশত্যাগের আল্টিমেটাম দেয়া হচ্ছে ।
— MAKU BASU(Parody) (@BangalMaku58347) September 29, 2024
বলছে, "তোমার বাবারা চলে গেছে, তোমার ঠাকুরদারা ভেগে গেছে, তোমারাও চলে যাও। " এই দাম্ভিকতার উত্তর কি বাঙালী হিন্দুরা দিতে পারবে না? @tathagata2 @Achintya_Hindu @avroneel80@debajits3110 pic.twitter.com/MwDY3IQE6i
ನಾಯಕ ಭಾಷಣದ ಮೂಲಕ ಮತ್ತಷ್ಟು ಎಚ್ಚರಿಕೆಗಳನ್ನು ನೀಡಿದ್ದಾನೆ. “ಹಿಂದೂಗಳು ತಮ್ಮ ವಿಚಾರವಾಗಿ ಮತ್ತೆ ಬೀದಿಗಿಳಿದರೆ ನಾವು ಮತ್ತೆ ಬೀದಿಗಳಲ್ಲಿ ಪ್ರತಿಭಟಿಸುತ್ತೇವೆ. ಅಲ್ಪಸಂಖ್ಯಾತರು ಈ ರೀತಿ ಪಿತೂರಿ ನಡೆಸುತ್ತಿದ್ದಾರೆ” ಎಂದು ಆತ ಹೇಳುವ ಮೂಲಕ ಅಲ್ಪಸಂಖ್ಯಾತರಲ್ಲಿ ಭೀತಿ ಮೂಡಿಸಿದ್ದಾನೆ.
“ನಿಮ್ಮ ಬಾಲವನ್ನು ಮಡಚಿಕೊಂಡು ದೇಶವನ್ನು ತೊರೆಯಿರಿ. ಕೂಡಲೇ ದೇಶ ಬಿಟ್ಟು ಹೋಗಿ. ನಿಮ್ಮ ತಂದೆಯರು ದೇಶವನ್ನು ತೊರೆದಿದ್ದಾರೆ, ನಿಮ್ಮ ಸಹೋದರರು ದೇಶವನ್ನು ತೊರೆದಿದ್ದಾರೆ, ಶೇಖ್ ಹಸೀನಾ ದೇಶವನ್ನು ತೊರೆದಿದ್ದಾರೆ. ನಾವು ನಿಮಗೆ 1 ವಾರದ ಗಡುವು ನೀಡಿದ್ದೇವೆ. ಅಷ್ಟರೊಳಗೆ ದೇಶ ಬಿಟ್ಟು ಹೋಗದಿದ್ದರೆ ನಾನು ನಿಮ್ಮನ್ನು ನಿರ್ನಾಮ ಮಾಡಲು ಪ್ರಾರಂಭಿಸುತ್ತೇನೆ. ನಾನು ಬದುಕಿರುವವರೆಗೂ ನಿಮ್ಮನ್ನು ನಿರ್ನಾಮ ಮಾಡುತ್ತೇನೆ” ಎಂದು ಆತ ಬೆದರಿಕೆ ಹಾಕಿದ್ದಾನೆ.
ಈ ಪದಗಳು ಭಯವನ್ನು ಹುಟ್ಟಿಸುವುದಲ್ಲದೆ, ಈ ಪ್ರದೇಶದಲ್ಲಿ ಉಗ್ರವಾದದ ಅಪಾಯ ಹೆಚ್ಚಾಗುವುದನ್ನು ಸೂಚಿಸುತ್ತವೆ. ಒಂದು ವೇಳೆ ಅಲ್ಪಸಂಖ್ಯಾತರು ಇದನ್ನು ಅನುಸರಿಸದಿದ್ದರೆ ಇಲ್ಲಿ ಹಿಂಸಾತ್ಮಕ ಘಟನೆ ನಡೆಯುವುದು ಖಚಿತ ಎಂಬುದು ಈ ಮಾತಿನಿಂದ ತಿಳಿಯುತ್ತದೆ.
ಬಾಂಗ್ಲಾದೇಶದಲ್ಲಿ ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ದೇಶವನ್ನು ಬಿಟ್ಟ ಬಳಿಕ ದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಭವಿಷ್ಯದ ಬಗ್ಗೆ ಅನಿಶ್ಚಿತತೆಯ ಛಾಯೆಯನ್ನು ಮೂಡಿಸಿದೆ. ಇಸ್ಲಾಮಿಕ್ ತೀವ್ರಗಾಮಿ ಶಕ್ತಿಗಳು ಹಿಂದೂಗಳ ವಿರುದ್ಧ ಹಿಂಸಾತ್ಮಕ ಬೆದರಿಕೆಗಳನ್ನು ಹಾಕುವ ಮೂಲಕ ಬಾಂಗ್ಲಾದೇಶದ ಕಾನೂನು ಸುವ್ಯವಸ್ಥೆ ಅವ್ಯವಸ್ಥೆಯಲ್ಲಿ ಮುಳುಗುವಂತಾಗಿದೆ.
ಇದನ್ನೂ ಓದಿ:ನೀರಿನಲ್ಲಿ ನಿಂತಿದ್ದ ಮಗುವನ್ನು ಮೀನು ಎಂದು ಭಾವಿಸಿ ಎತ್ತೊಯ್ಯಲು ಯತ್ನಿಸಿದ ಹದ್ದು; ಮುಂದೇನಾಯ್ತು ವಿಡಿಯೊ ನೋಡಿ
ತಮ್ಮ ಅಧಿಕಾರಾವಧಿಯಲ್ಲಿ ಶೇಖ್ ಹಸೀನಾ ಅವರು ಧಾರ್ಮಿಕ ಸಾಮರಸ್ಯವನ್ನು ಕಾಪಾಡಿಕೊಳ್ಳಲು ಕೆಲವು ಪ್ರಯತ್ನಗಳನ್ನು ಮಾಡಿದ್ದರು. ಆದರೂ ಹಿಂದೂಗಳ ವಿರುದ್ಧ ಕಿರುಕುಳದ ಆರೋಪಗಳು ಇನ್ನೂ ನಡೆಯುತ್ತಿವೆ. ಆದರೆ, ಶೇಖ್ ಹಸೀನಾ ಅವರ ನಿರ್ಗಮನದಿಂದ ಬಾಂಗ್ಲಾದೇಶದಲ್ಲಿ ಈಗಾಗಲೇ ದುರ್ಬಲವಾಗಿರುವ ಹಿಂದೂಗಳ ಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು ಎಂಬ ಆತಂಕಗಳು ಹೆಚ್ಚಿವೆ.