Sunday, 27th October 2024

Relationship Tips: ಬ್ರಷ್, ಸ್ನಾನ ಮತ್ತು ಶೇವಿಂಗ್ ಮಾಡದಿದ್ದರೆ ಸಂಬಂಧ ಹಾಳಾಗಬಹುದು? ಹುಷಾರ್‌!

Relationship Tips

ಬೆಂಗಳೂರು : ದೇಹದ ಸ್ವಚ್ಛತೆ ನಮ್ಮ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲ ಇದು ನಮ್ಮ ಸಂಬಂಧವನ್ನು (Relationship Tips) ಕೂಡ ಬಲಗೊಳಿಸುತ್ತದೆಯಂತೆ. ಹಾಗಾಗಿ ಪ್ರತಿಯೊಬ್ಬರು ಜೀವನದಲ್ಲಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ಆದರೆ ಎಷ್ಟೋ ಸಂಬಂಧಗಳು ಸಂಗಾತಿ ಸ್ವಚ್ಛವಾಗಿರುವುದಿಲ್ಲ ಎಂದು ಮುರಿದುಬಿದ್ದಿವೆ. ಈ ಹಿಂದೆ ಅನೇಕ ಡಿವೋರ್ಸ್ ಪ್ರಕರಣಗಳಲ್ಲಿ ತಮ್ಮ ಸಂಗಾತಿ ಪ್ರತಿದಿನ ಸ್ನಾನ ಮಾಡುತ್ತಿಲ್ಲ, ಬ್ರಷ್ ಮಾಡುತ್ತಿಲ್ಲ, ಶೇವಿಂಗ್ ಮಾಡುತ್ತಿಲ್ಲ ಎಂಬ ಕಾರಣ ನೀಡಿ ಸಂಗಾತಿಯಿಂದ ದೂರವಾಗಿದ್ದಾರೆ.  ಹಾಗಾಗಿ ಸಂಬಂಧದಲ್ಲಿ ನೈರ್ಮಲ್ಯ ಬಹಳ ಮುಖ್ಯ.

Relationship Tips

ಬಾಯಿಯಿಂದ ಕೆಟ್ಟ ವಾಸನೆ:
ಕೆಲವು ಜನರ ಬಾಯಿಯಿಂದ ತುಂಬಾ ಕೆಟ್ಟ ವಾಸನೆ ಬರುತ್ತಿರುತ್ತದೆ. ಅಂತಹ ಜನರು ಸಂಬಂಧದಲ್ಲಿದ್ದರೆ, ಅವರ ಸಂಗಾತಿಯು ಹೆಚ್ಚಾಗಿ ಅವರ ಹತ್ತಿರ ಬರುವುದನ್ನು ಅಥವಾ ಮಾತನಾಡುವುದನ್ನು ತಪ್ಪಿಸುತ್ತಾರೆ. ದುರ್ವಾಸನೆ ಇದ್ದರೆ, ವೈದ್ಯಕೀಯ ಭಾಷೆಯಲ್ಲಿ ಅದನ್ನು ಹಲಿಟೋಸಿಸ್ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಅರ್ಧದಷ್ಟು  ಜನರು ಈ ಸಮಸ್ಯೆಯೊಂದಿಗೆ ಬಳಲುತ್ತಿದ್ದಾರೆ.  ಹೆಚ್ಚಿನ ಜನರು ಈ ಬಾಯಿಯ ಕೆಟ್ಟ ವಾಸನೆಯ ಕಾರಣದಿಂದ ತಮ್ಮ ಸಂಬಂಧದಿಂದ ಬ್ರೇಕಪ್ ಮಾಡಲು ಮುಂದಾಗಿದ್ದರಂತೆ.   

Relationship Tips

ಬೆವರಿನ ವಾಸನೆ ಮನಸ್ಥಿತಿಯನ್ನು ಹಾಳುಮಾಡುತ್ತದೆ:
ಬೆವರು ಸಂಬಂಧದಲ್ಲಿ ಶತ್ರುವಾಗಬಹುದು. ಅನೇಕ ಜನರು ಸಾಕಷ್ಟು ಬೆವರುತ್ತಾರೆ ಮತ್ತು ಅವರ ಬೆವರು ತುಂಬಾ ಕೆಟ್ಟ ವಾಸನೆಯಿಂದ ಕೂಡಿರುತ್ತದೆ. ಯಾರೂ ಅವರೊಂದಿಗೆ ಕುಳಿತುಕೊಳ್ಳಲು ಸಹ ಸಾಧ್ಯವಿಲ್ಲ. ಗಂಧಕ ಹೆಚ್ಚಿರುವ ಆಹಾರವನ್ನು ತೆಗೆದುಕೊಳ್ಳುವ ಜನರ ಬೆವರು ಹೆಚ್ಚಾಗಿ ಕೆಟ್ಟ ವಾಸನೆಯನ್ನು ಹೊಂದಿರುತ್ತದೆ. ಈರುಳ್ಳಿ, ಬೆಳ್ಳುಳ್ಳಿ, ಎಲೆಕೋಸು, ಹೂಕೋಸು, ಬ್ರೊಕೋಲಿ ಮತ್ತು ಕೆಂಪು ಮಾಂಸದಲ್ಲಿ ಗಂಧಕ ಹೆಚ್ಚಿರುತ್ತದೆ. ಹಾಗಾಗಿ ಬೆವರಿನ ವಾಸನೆ ಹೊಂದಿರುವವರು ಇಂತಹ ಆಹಾರವನ್ನು ತಪ್ಪಿಸಿ, ಪ್ರತಿದಿನ ಸ್ನಾನ ಮಾಡಿ, ಮತ್ತು ಡಿಯೊಡ್ರೆಂಟ್‍ಗಳನ್ನು ಬಳಸಿ.

ಖಾಸಗಿ ಭಾಗದ ಕೂದಲು ಸಂಗಾತಿಗೆ ತೊಂದರೆ ನೀಡುತ್ತದೆ:
ಮಹಿಳೆಯರು ಮತ್ತು ಪುರುಷರು ನೈರ್ಮಲ್ಯದ ಕಾರಣಕ್ಕೆ ಖಾಸಗಿ ಭಾಗದ ಕೂದಲನ್ನು ಸ್ವಚ್ಛಮಾಡಿಕೊಳ್ಳಬೇಕು. ಯಾಕೆಂದರೆ ಕೆಲವರು ಈ ಕೂದಲುಗಳನ್ನು ಇಷ್ಟಪಡುವುದಿಲ್ಲ ಮತ್ತು ಕೆಲವೊಮ್ಮೆ ಅವು ಲೈಂಗಿಕತೆಯಲ್ಲಿ ಸಮಸ್ಯೆಯನ್ನುಂಟುಮಾಡುತ್ತವೆ.  ಅಲ್ಲದೇ  ಜನನಾಂಗದ ಪ್ರದೇಶದ ಕೂದಲು ಬೆವರು, ಮತ್ತು ಬ್ಯಾಕ್ಟೀರಿಯಾ ಬೆಳೆಯಲು ಕಾರಣವಾಗುತ್ತದೆ. ಇದು ಈ ದೇಹದ ಭಾಗದ ದುರ್ವಾಸನೆ ಕಾರಣವಾಗುತ್ತದೆ.

ಇದನ್ನೂ ಓದಿ:ಡ್ರೆಸ್ ಸರಿಮಾಡಿಕೊಳ್ಳಲು ಹೋಗಿ ಏನೇನೋ ಆಗಿ ಟ್ರೋಲ್‍ಗೆ ಒಳಗಾದ ಬಿಗ್‌ಬಾಸ್ ಹುಡುಗಿ!

ಈ ರೀತಿಯಲ್ಲಿ ಸಂಗಾತಿಯು ಸ್ವಚ್ಛವಾಗಿಲ್ಲದಿದ್ದರೆ, ಅದು ದಂಪತಿಯ ಅಂತರಕ್ಕೆ ಕಾರಣವಾಗಬಹುದು. ಕಳಪೆ ನೈರ್ಮಲ್ಯದಿಂದಾಗಿ ಅನೇಕ ದಂಪತಿಗಳು ಪರಸ್ಪರ ಹತ್ತಿರವಾಗಲು ಸಾಧ್ಯವಾಗುವುದಿಲ್ಲ, ಇದು ಅವರ ಸಂಬಂಧವನ್ನು ಹಾಳುಮಾಡುತ್ತದೆ.