Friday, 22nd November 2024

VIKALP Yojana: ಹಬ್ಬದ ಋತುವಿನಲ್ಲಿ ರೈಲು ಟಿಕೆಟ್ ಕನ್ಫರ್ಮ್ ಆಗುತ್ತಿಲ್ಲವೇ? ಟಿಕೆಟ್ ಪಡೆಯಲು ಇಲ್ಲಿದೆ ಸುಲಭ ಮಾರ್ಗ…

VIKALP Yojana

ಗಣೇಶ ಚತುರ್ಥಿ, ನವರಾತ್ರಿ, ಆಯುಧ ಪೂಜೆ, ದೀಪಾವಳಿಯಂತಹ ಹಬ್ಬದ ಸಂದರ್ಭದಲ್ಲಿ ದೃಢೀಕೃತ ರೈಲು ಟಿಕೆಟ್ ಪಡೆಯುವುದು ಸುಲಭವಲ್ಲ. ಇದಕ್ಕೆ ಮುಖ್ಯ ಕಾರಣ ಪ್ರಯಾಣಿಕರ ಸಂಖ್ಯೆ ನಿರೀಕ್ಷೆಗಿಂತಲೂ ಕೆಲವೊಮ್ಮೆ ಹೆಚ್ಚಾಗಿರುತ್ತದೆ. ಹೀಗಾಗಿ ಎಲ್ಲರಿಗೂ ಸೀಟು ನೀಡುವುದು ರೈಲ್ವೇ ಇಲಾಖೆಗೂ ಕಷ್ಟವಾಗುತ್ತದೆ. ವಿಶೇಷ ಸಂದರ್ಭಗಳಲ್ಲಿ ದೃಢೀಕೃತ ರೈಲು ಟಿಕೆಟ್‌ಗಳನ್ನು ಒಂದು ವಿಶೇಷವಾದ ಯೋಜನೆ ಇದೆ. ಇದನ್ನು ವಿಕಲ್ಪ್ ಯೋಜನೆ (VIKALP Yojana) ಎನ್ನಲಾಗುತ್ತದೆ.

ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಹೆಚ್ಚಿನ ದೃಢೀಕೃತ ಟಿಕೆಟ್ ಒದಗಿಸಲು ಭಾರತೀಯ ರೈಲ್ವೆ ವಿಕಲ್ಪ್ ಯೋಜನೆ ಎಂಬ ಪರ್ಯಾಯ ರೈಲು ಟಿಕೆಟ್ ವಿತರಣೆ ಯೋಜನೆಯನ್ನು (ATAS) ಪರಿಚಯಿಸಿದೆ. ಇದರ ಮೂಲಕ ಪ್ರಯಾಣಿಕರಿಗೆ ಏಕ ಕಾಲದಲ್ಲಿ ಅನೇಕ ರೈಲುಗಳ ಆಯ್ಕೆ ನೀಡಲಾಗುತ್ತದೆ. ಇದರಿಂದ ಪ್ರಯಾಣಿಕರು ಸೀಟು ಲಭ್ಯವಿರುವ ರೈಲಿನ ಟಿಕೆಟ್ ಪಡೆಯಲು ಸಾಧ್ಯವಾಗುತ್ತದೆ.

VIKALP Yojana

ರೈಲ್ವೆ ನಿಯಮ ಮತ್ತು ಸೌಲಭ್ಯಗಳ ಬಗ್ಗೆ ಮೊದಲೇ ತಿಳಿದುಕೊಂಡರೆ ರೈಲು ಟಿಕೆಟ್ ಬುಕ್ ಮಾಡುವುದು ಸುಲಭ. . ಸಾಮಾನ್ಯವಾಗಿ ರೈಲ್ವೆಯು ಪ್ರಯಾಣದ ದಿನಾಂಕಕ್ಕಿಂತ 120 ದಿನಗಳ ಮೊದಲು ಟಿಕೆಟ್ ಕಾಯ್ದಿರಿಸಲು ಅವಕಾಶ ನೀಡುತ್ತದೆ. ಅದೇ ಸಮಯದಲ್ಲಿ ತುರ್ತು ಸಂದರ್ಭಗಳಲ್ಲಿ ಪ್ರಯಾಣಿಸಬೇಕಾದ ಪ್ರಯಾಣಿಕರು ತತ್ಕಾಲ್ ಸೌಲಭ್ಯ ಬಳಸಿಕೊಂಡು ಪ್ರಯಾಣದ ಒಂದು ದಿನ ಮುಂಚಿತವಾಗಿ ಟಿಕೆಟ್ ಗಳನ್ನು ಬುಕ್ ಮಾಡಬಹುದು.

ವಿಕಲ್ಪ್ ಯೋಜನೆ ಆಯ್ಕೆ ಹೇಗೆ?

ರೈಲ್ವೆ ಇಲಾಖೆ ಪರ್ಯಾಯ ರೈಲು ವಸತಿ ಯೋಜನೆಗೆ ವಿಕಲ್ಪ್ ಎಂದು ಹೆಸರಿಡಲಾಗಿದೆ. ಇದರ ಅಡಿಯಲ್ಲಿ ಪ್ರಯಾಣಿಕರಿಗೆ ಸಾಧ್ಯವಾದಷ್ಟು ದೃಢೀಕೃತ ಟಿಕೆಟ್‌ಗಳನ್ನು ಒದಗಿಸಲು ಪ್ರಯತ್ನಿಸಲಾಗುತ್ತದೆ. ಆನ್‌ಲೈನ್‌ನಲ್ಲಿ ಟಿಕೆಟ್ ಕಾಯ್ದಿರಿಸಿದಾಗ ವಿಕಲ್ಪ್ ಆಯ್ಕೆ ಕೂಡ ತೋರಿಸಲಾಗುತ್ತದೆ.

ಇದರಲ್ಲಿ ಆಯ್ಕೆ ಮಾಡಿದ ರೈಲಿನಲ್ಲಿ ದೃಢೀಕೃತ ಟಿಕೆಟ್ ಪಡೆಯುವುದು ಸಾಧ್ಯವಿಲ್ಲದೇ ಇದ್ದರೆ ಆ ಮಾರ್ಗದಲ್ಲಿ ಸಂಚರಿಸುವ ಇತರ ರೈಲುಗಳ ಟಿಕೆಟ್ ಪಡೆಯುವ ಅವಕಾಶವನ್ನು ತೋರಿಸುತ್ತದೆ. ಪ್ರಯಾಣದ ದಿನಾಂಕದಂದು ಪರ್ಯಾಯ ರೈಲಿನಲ್ಲಿ ಆಸನ ಲಭ್ಯವಿದ್ದರೆ ಅದರಲ್ಲಿ ನಿಮಗೆ ಸ್ವಯಂಚಾಲಿತವಾಗಿ ಸೀಟ್‌ ನಿಗದಿಯಾಗುತ್ತದೆ.

ವಿಕಲ್ಪ್ ಯೋಜನೆಯಡಿ ಪ್ರಯಾಣಿಕರು ಬೋರ್ಡಿಂಗ್ ನಿಲ್ದಾಣದಿಂದ ತಲುಪಬೇಕಾಗಿರುವ ಸ್ಥಳಕ್ಕೆ 30 ನಿಮಿಷಗಳಿಂದ 72 ಗಂಟೆಗಳ ಒಳಗೆ ಚಲಿಸುವ 7 ರೈಲುಗಳನ್ನು ಆಯ್ಕೆ ಮಾಡುವ ಅವಕಾಶವಿದೆ. ಇದರಿಂದ ದೃಢೀಕೃತ ರೈಲು ಟಿಕೆಟ್ ಪಡೆಯಲು ಸಾಧ್ಯ . ಇಲ್ಲಿ ಆಯ್ಕೆ ಮಾಡುವ ರೈಲುಗಳಲ್ಲಿ ಸೀಟುಗಳ ಲಭ್ಯತೆಯ ಮೇಲೆ ಅವಲಂಬಿತವಾಗಿರುತ್ತದೆ.

Tirupati Laddu Row : ತಿರುಪತಿ ಲಡ್ಡು ಕಲಬೆರಕೆ ಪ್ರಕರಣ: ಎಸ್ಐಟಿ ತನಿಖೆ ತಾತ್ಕಾಲಿಕ ಸ್ಥಗಿತ

ಭಾರತೀಯ ರೈಲ್ವೆಯಲ್ಲಿ ಪ್ರಯಾಣಿಕರ ಅನುಕೂಲ ಸುಧಾರಿಸಲು ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಗಿತ್ತು. ವೇಟಿಂಗ್ ಲಿಸ್ಟ್‌ನಲ್ಲಿ ಇದ್ದರೆ ಅಥವಾ ನಿಮ್ಮ ಆದ್ಯತೆಯ ರೈಲಿನಲ್ಲಿ ಸೀಟ್‌ಗಳು ಲಭ್ಯವಿಲ್ಲ ಎಂದು ನೀವು ಗಮನಿಸಿದರೆ ವಿಕಲ್ಪ್ ಯೋಜನೆಯನ್ನು ಬಳಸಬಹುದು.
ಆನ್‌ಲೈಟ್‌ನಲ್ಲಿ ಟಿಕೆಟ್ ಬುಕ್ ಮಾಡುವಾಗ ಅಥವಾ ರೈಲು ನಿಗದಿತ ನಿರ್ಗಮನಕ್ಕೆ 24 ಗಂಟೆಗಳ ಮೊದಲು ಆಯ್ಕೆ ಮಾಡುವ ಮೂಲಕ ನೀವು ವಿಕಲ್ಪ್ ಯೋಜನೆ ಆರಿಸಿಕೊಳ್ಳಬಹುದು.