ಬ್ಯಾಂಕಾಕ್ ( ಥಾಯ್ಲೆಂಡ್) ; ಥಾಯ್ಲೆಂಡ್ನಲ್ಲಿ ಶಾಲಾ ಪ್ರವಾಸಕ್ಕೆ ಹೋಗುತ್ತಿದ್ದ 44 ವಿದ್ಯಾರ್ಥಿಗಳು ಮತ್ತು ಶಿಕ್ಷಕರಿದ್ದ ಬಸ್ಗೆ ಬೆಂಕಿಗೆ ಆಹುತಿಯಾಗಿದೆ (Bus Catches Fire). ಘಟನೆಯಲ್ಲಿ 25 ಕ್ಕೂ ಹೆಚ್ಚು ಮಕ್ಕಳು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವುನೋವುಗಳ ಸಂಖ್ಯೆ ಸ್ಪಷ್ಟವಾಗಿಲ್ಲ. ಆದಾಗ್ಯೂ ಘಟನೆ ಬಳಿಕ 25 ಮಕ್ಕಳ ಲೆಕ್ಕ ಸಿಕ್ಕಿಲ್ಲ ಎಂಬುದಾಗಿ ಅಲ್ಲಿನ ಸಾರಿಗೆ ಸಚಿವರು ಹೇಳಿದ್ದಾರೆ.
As many as 25 students were killed after a bus carrying 44 children caught on fire in Thailand.
— Extreme Weather on Earth (@eweatheronearth) October 1, 2024
The school bus caught fire on Phahon Yothin Road near Zeer Rangsit shopping mall in Thailand's Khu Khot pic.twitter.com/TqepVUsQ8i
ವಿಮಾನದಲ್ಲಿ 44 ವಿದ್ಯಾರ್ಥಿಗಳು, ಆರು ಶಿಕ್ಷಕರು ಇದ್ದರು ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ನಮಗೆ ತಿಳಿದಿರುವಂತೆ ಮೂವರು ಶಿಕ್ಷಕರು ಮತ್ತು 16 ವಿದ್ಯಾರ್ಥಿಗಳು ಬದುಕಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ ಕಾಣೆಯಾದವರ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಅವರು ಹೇಳಿದ್ದಾರೆ.
ಉಥೈ ಥಾನಿ ಪ್ರಾಂತ್ಯದಿಂದ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಉತ್ತರ ಬ್ಯಾಂಕಾಕ್ ಉಪನಗರದ ಹೆದ್ದಾರಿಯಲ್ಲಿ ಟೈರ್ ಸ್ಫೋಟಗೊಂಡು ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಉಂಟಾದ ಕಿಡಿಯಿಂದ ಬಸ್ಗೆ ಬೆಂಕಿ ತಗುಲಿದೆ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.
ಇದನ್ನೂ ಓದಿ: US Army: ಅಮೆರಿಕದ ಸೇನಾ ಜಾಲದಲ್ಲಿ ಕೊಲ್ಲಿ ರಾಷ್ಟ್ರಗಳು ಬಂಧಿ; ಮಧ್ಯಪ್ರಾಚ್ಯದ 19 ದೇಶಗಳಲ್ಲಿವೆ ಯುಎಸ್ ಮಿಲಿಟರಿ ಬೇಸ್
ಬಸ್ ಸಿಎನ್ಜಿ ಇಂಧನ ಬಳಸುತ್ತಿತ್ತು. ಅಪಘಾತವಾದ ತಕ್ಷಣ ಇಂಧನ ಟ್ಯಾಂಕ್ಗೆ ಬೆಂಕಿ ಹೊತ್ತಿಕೊಂಡಿದೆ ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ.ಘಟನಾ ಸ್ಥಳದ ಸಿಸಿ ಟಿವಿ ಕ್ಯಾಮೆರಾದ ದೃಶ್ಯಗಳಲ್ಲಿ ಬಸ್ನ ಕೆಳಭಾಗದಲ್ಲಿ ಉಂಟಾದ ಬೆಂಕಿ ಏಕಾಏಕಿ ಆವರಿಸಿಕೊಂಡಿದೆ. ದಟ್ಟ ಕಪ್ಪು ಹೊಗೆಯ ದೊಡ್ಡ ತುಂಬಿಕೊಂಡಿದೆ.
ಬೆಂಕಿ ನಂದಿಸಲಾಗಿದೆ. ಶವಗಳನ್ನು ಹುಡುಕುವ ಮೊದಲು ರಕ್ಷಣಾ ಕಾರ್ಯಕರ್ತರು ಬಸ್ ತಣ್ಣಗಾಗುವವರೆಗೆ ಕಾಯಬೇಕಾಯಿತು ಎಂದು ರಕ್ಷಣಾ ಕಾರ್ಯಕರ್ತರು ತಿಳಿಸಿದ್ದಾರೆ. ಥೈಲ್ಯಾಂಡ್ ವಿಶ್ವದ ಅತ್ಯಂತ ಕೆಟ್ಟ ರಸ್ತೆ ಸುರಕ್ಷತಾ ದಾಖಲೆ ಹೊಂದಿದೆ. ಅಸುರಕ್ಷಿತ ವಾಹನಗಳು ಮತ್ತು ಕಳಪೆ ಚಾಲನೆಯು ಹೆಚ್ಚಿನ ಸಾವಿಗೆ ಕಾರಣವಾಗುತ್ತಿವೆ.