Monday, 25th November 2024

Navaratri Colour Tips: ನವರಾತ್ರಿಯ ಮೊದಲ ದಿನ ಹಳದಿ ಎಥ್ನಿಕ್‌ ವೇರ್ಸ್‌‌ನಲ್ಲಿ ಕಂಗೊಳಿಸಲು 5 ಸ್ಟೈಲಿಂಗ್‌ ಟಿಪ್ಸ್

Navaratri Colour Tips

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ನವರಾತ್ರಿಯ ಮೊದಲನೆಯ ದಿನ ಹಳದಿ ಬಣ್ಭದ ಎಥ್ನಿಕ್‌ವೇರ್‌ (Ethnic Wear) ಅಥವಾ ಸೀರೆಯಲ್ಲಿ (Saree) ಕಂಗೊಳಿಸಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಹೌದು. ಈ ಬಾರಿ ನವರಾತ್ರಿಯ (Navaratri Colour Tips) ಮೊದಲನೇ ದಿನ ಖುಷಿ ಹಾಗೂ ಆಶಾಭಾವನೆ ಮೂಡಿಸುವ ಹಳದಿ ವರ್ಣಕ್ಕೆ ಪ್ರಾಮುಖ್ಯತೆ ನೀಡಲಾಗುತ್ತಿದೆ. ಅಂದ ಹಾಗೆ, ಈ ಮೊದಲು ಈ ಕಲರ್‌ನ ಔಟ್‌ಫಿಟ್‌ಗಳನ್ನು ಧರಿಸುವವರು ಕಡಿಮೆ ಇದ್ದರು. ಕಾಲ ಬದಲಾದಂತೆ, ಈ ಬಣ್ಣದಲ್ಲೂ ನಾನಾ ಶೇಡ್‌ಗಳು ಆಗಮಿಸಿದ್ದು, ಲೆಕ್ಕವಿಲ್ಲದಷ್ಟು ಬಗೆಯ ಎಥ್ನಿಕ್‌ವೇರ್ಸ್ ಮಾರುಕಟ್ಟೆಗೆ ಕಾಲಿಟ್ಟಿವೆ. ಪರಿಣಾಮ, ಹಳದಿ ಬಣ್ಣದ ಔಟ್‌ಫಿಟ್ಸ್ ಪ್ರೀತಿಸುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ಸ್ಟೈಲಿಸ್ಟ್ ಟೀನಾ. ಅಲ್ಲದೇ ಒಂದಿಷ್ಟು ಟಿಪ್ಸ್ ಕೂಡ ನೀಡಿದ್ದಾರೆ.

ಸ್ಕಿನ್‌ಟೋನ್‌ಗೆ ತಕ್ಕಂತೆ ಹಳದಿ ಬಣ್ಣದ ಆಯ್ಕೆ

ಹಳದಿ ಬಣ್ಣದ ಡಿಸೈನರ್‌ವೇರ್‌ಗಳು ಕೆಲವರಿಗೆ ಚೆನ್ನಾಗಿ ಕಾಣಿಸುವುದಿಲ್ಲ. ಮತ್ತಷ್ಟು ಕಪ್ಪಾಗಿ ಕಾಣಿಸುತ್ತಾರೆ. ಹಾಗಾಗಿ, ಈ ಬಣ್ಣದ ಉಡುಪನ್ನು ಆಯ್ಕೆ ಮಾಡುವಾಗ ಆದಷ್ಟೂ ನಿಮ್ಮ ಮುಖದ ಬಣ್ಣಕ್ಕೆ ಹೊಂದುವಂತೆ ತಿಳಿ ಅಥವಾ ಡಾರ್ಕ್‌ ಮ್ಯಾಚ್‌ ಆಗುವುದೇ? ಎಂಬುದನ್ನು ಮೊದಲೇ ಕಂಡುಕೊಂಡು ಆಯ್ಕೆ ಮಾಡಿ.

ಚಿತ್ರಕೃಪೆ: ಪಿಕ್ಸೆಲ್‌

ಇಂಡೋ-ವೆಸ್ಟರ್ನ್‌ ಡಿಸೈನರ್‌ವೇರ್‌

ಯುವತಿಯರು, ಈ ದಿನ ಇಂಡೋ-ವೆಸ್ಟರ್ನ್‌ ಶೈಲಿಯ ಡಿಸೈನರ್‌ವೇರ್‌ ಧರಿಸುವುದಾದಲ್ಲಿ, ಆದಷ್ಟೂ ತಿಳಿ ಮೇಕಪ್‌ ಮಾಡಿ. ಆಕ್ಸೆಸರೀಸ್‌ ಮ್ಯಾಚ್‌ ಮಾಡಬೇಕು.

ಸೆಮಿ ಎಥ್ನಿಕ್‌ವೇರ್‌ನ ಹಳದಿ ಡ್ರೆಸ್‌

ಪ್ರಯೋಗಾತ್ಮಕ ಸೆಮಿ ಎಥ್ನಿಕ್‌ ಡಿಸೈನರ್‌ವೇರ್‌ಗಳಾದಲ್ಲಿ ಆದಷ್ಟೂ ಟ್ರೆಂಡಿ ಔಟ್‌ಫಿಟ್‌ಗೆ ಸೈ ಎನ್ನಿ. ಉದಾಹರಣೆಗೆ., ಜಂಪ್‌ ಸೂಟ್‌ನಂತೆ ಕಾಣುವ ಡಿಸೈನ್‌ನ ಹಳದಿಯ ಮಾನೋಕ್ರೋಮ್‌ ಕೋ ಆರ್ಡ್ ಸೆಟ್‌, ಕ್ರಾಪ್‌ ಟಾಪ್‌ನಂತೆ ಕಾಣುವ ಶರರಾ, ಲೆಹೆಂಗಾ ಸೆಟ್‌ ಇಲ್ಲವೇ, ಸ್ಕರ್ಟ್ ಸೆಟ್‌ ಆಯ್ಕೆ ಮಾಡಿ.

ಹೀಗಿರಲಿ ಹಳದಿ ಸೀರೆಗಳ ಸ್ಟೈಲಿಂಗ್‌

ಹಳದಿ ಬಣ್ಣದ ಸೀರೆಗಳಲ್ಲೂ ಫ್ಯಾಷೆನಬಲ್ ಆಗಿ ಕಾಣಿಸಬಹುದು. ಟ್ರೆಡಿಷನಲ್‌ ಲುಕ್‌ಗಾದಲ್ಲಿ ರೇಷ್ಮೆ ಸೀರೆ ಆಯ್ಕೆ ಉತ್ತಮ. ಇನ್ನು ಸಾದಾ ಬಾರ್ಡರ್‌ ಹಾಗೂ ಪ್ಲೇನ್‌ ಯೆಲ್ಲೋ ಸೀರೆಗಳನ್ನು ಉಡಿ. ಕಲರ್‌ಗೆ ಹೊಂದುವಂತಹ ಮೇಕಪ್‌, ಟ್ರೆಡಿಷನಲ್‌ ಹೇರ್‌ಸ್ಟೈಲ್‌ ಮಾಡಿ.

ಈ ಸುದ್ದಿಯನ್ನೂ ಓದಿ | Navaratri Jewel Trend: ದಾಂಡಿಯಾ ಎಥ್ನಿಕ್‌ವೇರ್ಸ್‌‌ಗೆ ಸಾಥ್‌ ನೀಡುವ ಟ್ರೆಂಡಿ ಆಭರಣಗಳಿವು!

ಆಭರಣಗಳ ಮ್ಯಾಚಿಂಗ್‌ ಹೀಗಿರಲಿ

ಇಂಡೋ-ವೆಸ್ಟರ್ನ್‌ ಹಳದಿ ಬಣ್ಣದ ಉಡುಪಾದಲ್ಲಿ ಕಾಂಟ್ರಸ್ಟ್ ಆಭರಣಗಳನ್ನು ಮ್ಯಾಚ್‌ ಮಾಡಬಹುದು. ಇಲ್ಲವಾದಲ್ಲಿ ಗೋಲ್ಡ್ ಅಥವಾ ಇಮಿಟೇಷನ್‌ ಆಭರಣಗಳನ್ನು ಧರಿಸಿ, ಟ್ರೆಡಿಷನಲ್‌ ಲುಕ್‌ ನೀಡಬಹುದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)