ಅಭಿಮತ: ಅರವಿಂದ ಸಿಗದಾಳ್, ಮೇಲುಕೊಪ್ಪ
ನಿಗದಿತ ಅವಧಿ ಮೀರಿದ ನಂತರ ಬಿಪಿಎಲ್ ಕಾರ್ಡ್ (BPL Card) ದಂಡದ ಮೊತ್ತವನ್ನು ಆದಾಯ ತೆರಿಗೆ ಇಲಾಖೆಗೆ ಪಾವತಿಸಿ ಪಾನ್-ಆಧಾರ್ ಕಾರ್ಡ್ ಜೋಡಣೆ ಮಾಡಿಸಿಕೊಂಡವರಿಗೆ ಆದಾಯ ತೆರಿಗೆ ಪಾವತಿದಾರರು ಎಂಬ ಪಟ್ಟಿ ಹಚ್ಚಿದೆ. ಇದನ್ನೇ ಆಧಾರವಾಗಿಟ್ಟುಕೊಂಡ ಆಹಾರ ಇಲಾಖೆ ಬಿಪಿಎಲ್ ಕಾರ್ಡ್ ರದ್ದುಗೊಳಿಸಲು ಮುಂದಾಗಿದೆ. ಬಿಪಿಎಲ್ ಕಾರ್ಡ್ ರದ್ದು ತಡೆಯಬೇಕು ಅಂದರೆ IT ಇಲಾಖೆಯಿಂದ NOC ತರಬೇಕಂತೆ!
ಡಿಜಿಟಲ್ ತಂತ್ರಜ್ಞಾನ ಅಳವಡಿಕೆಯಿಂದ ರೈತರು, ಬಡವರು ದಿನಂಪ್ರತಿ ಬವಣೆ, ತೊಂದರೆಗಳನ್ನು ಅನುಭವಿಸುವಂತಾಗಿದೆ. ಒಂದು ಸ್ಪಷ್ಟವಾದ ಚಿಂತನೆ ಇಲ್ಲದೆ, ಅವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಿದ ಆ್ಯಪ್, ಸಾಫ್ಟ್‌ವೇರ್, ವೆಬ್‌ಸೈಟ್‌ಗಳನ್ನು ರೈತರು ಮತ್ತು ಬಡವರ ಮೇಲೆ ಹೇರಲಾಗುತ್ತಿದೆ.
ಈ ಸುದ್ದಿಯನ್ನೂ ಓದಿ | Monsoon 2024 : ಭಾರತದಲ್ಲಿ ಈ ಮುಂಗಾರು ಮಳೆಯ ಅನಾಹುತಕ್ಕೆ ಮೃತಪಟ್ಟವರು 1400 ಮಂದಿ
ರೇಷನ್ ಕಾರ್ಡ್, ಪಾನ್ ಕಾರ್ಡ್, ಆಧಾರ್ ಕಾರ್ಡ್, ಎಲೆಕ್ಷನ್ ಕಾರ್ಡ್, ಪಹಣಿ ಇವೆಲ್ಲ ಒಂದಕ್ಕೊಂದು ಜೋಡಣೆಯೇ ಒಂದು ವಿಚಿತ್ರ ಮತ್ತು ಅಸಂಬದ್ದ ಪ್ರಕ್ರಿಯೆಯಾಗಿದೆ. ಅತ್ಯಂತ ಸುಲಭದಲ್ಲಿ ಮಾಡಬಹುದಾಗಿದ್ದ ಈ ಜೋಡಣೆ ಪ್ರಕ್ರಿಯೆಗಳನ್ನು ಎಳೆದೂ ಎಳೆದೂ ಎಲೆಸ್ಟಿಕ್ ಮಾಡಲಾಗುತ್ತಿದೆ. ಅಷ್ಟು ಮಾಡಿ ಜೋಡಿಸಿದರೂ ಸಾಫ್ಟ್‌ವೇರ್ ಸಿಸ್ಟಮ್‌ನಲ್ಲಿ ಲೋಪಗಳ ಸರಮಾಲೆ.
ಒಂದು ವೇಳೆ ಕೃಷಿ ಮತ್ತು ಬಡವರಿಗೆ ಸಂಬಂಧಿಸಿದ ಆ್ಯಪ್, ವೆಬ್‌ಸೈಟ್ ಮತ್ತು ಸಾಫ್ಟ್‌ವೇರ್ ಡೆವಲಪ್ ಮಾಡಿದವರೇ ಬ್ಯಾಂಕ್, ಫೈನಾನ್ಸ್, ಷೇರ್ ಮಾರುಕಟ್ಟೆ, ರೈಲ್ವೇ, ರಕ್ಷಣೆ, ಏರ್‌ವೇಸ್‌ಗಳಂತಹ ಕ್ಷೇತ್ರಗಳಿಗೆ ಆ್ಯಪ್, ವೆಬ್‌ಸೈಟ್ ಮತ್ತು ಸಾಫ್ಟ್‌ವೇರ್ ಡೆವಲಪ್ ಮಾಡಿದ್ದರೆ ದೇಶ ಇಷ್ಟು ಹೊತ್ತಿಗೆ ಹರೋಹರ!
ಒಂದೇ ಒಂದು ಫರ್ಫೆಕ್ಟ್ ಆ್ಯಪ್ ಇಲ್ಲ
ಕೃಷಿ ಮತ್ತು ಸಾಮಾನ್ಯ ಬಡ ಮಧ್ಯಮದವರ ಬಳಕೆಗೆ ಸರ್ಕಾರದಿಂದ ಡೆವಲಪ್ ಆದ ಒಂದೇ ಒಂದು ಫರ್ಫೆಕ್ಟ್ ಆ್ಯಪ್, ವೆಬ್‌ಸೈಟ್ ಅಥವಾ ಸಾಫ್ಟ್‌ವೇರ್ ಸರಿ ಇದ್ರೆ ಹೇಳಿ! ಪಾನ್-ಆಧಾರ್ ಜೋಡಣೆಗೆ ಅವಧಿ ಮುಗಿದ ಮೇಲೆ ಕಟ್ಟಲಾದ ಪೆನಾಲ್ಟಿಯನ್ನು ಇನ್‌ಕಮ್ ಟ್ಯಾಕ್ಸ್ ಅಂತ ಆಹಾರ ಇಲಾಖೆ ಪರಿಭಾವಿಸುತ್ತದೆ ಅಂತಾದರೆ, ಮತ್ತು ಐಟಿ ಇಲಾಖೆಯಿಂದ NOC ತರಲು BPL ಜನರಿಗೆ ಇಲಾಖೆ ಒತ್ತಾಯಿಸುತ್ತದೆ ಅಂತಾದರೆ… ಆಹಾರ ಇಲಾಖೆಗೆ ಕಾಮನ್ ಸೆನ್ಸ್ ಇಲ್ಲ, ಅದರ ಅಧಿಕಾರಿಗಳಿಗೆ ಬುದ್ದಿ ಮಂದ ಅಂತ ನಿರ್ಣಯಿಸಿ ಸರ್ಟಿಫಿಕೇಟ್ ಕೊಟ್ಟು ಆರು ತಿಂಗಳು ಇಸ್ರೇಲ್‌ಗೆ ಕಳಿಸಿ, ತಂತ್ರಜ್ಞಾನದ ಟ್ರೈನಿಂಗ್ ಕೊಡುವುದು ಒಳ್ಳೆಯದು!
ಈ ಸುದ್ದಿಯನ್ನೂ ಓದಿ | Bengaluru News: ಇನ್‌ಸ್ಪೈರ್ ಮಾನಕ್ ಅವಾರ್ಡ್ ರಾಷ್ಟ್ರಮಟ್ಟದ ಸ್ಪರ್ಧೆ; ಕರ್ನಾಟಕದ ವಿದ್ಯಾರ್ಥಿನಿಯರ ಸಾಧನೆ
ಜತೆಗೆ ಕೃಷಿ ಮತ್ತು ಬಡವರಿಗೆ ಸಂಬಂಧಿಸಿದ ಆ್ಯಪ್, ವೆಬ್‌ಸೈಟ್ ಮತ್ತು ಸಾಫ್ಟ್‌ವೇರ್ ಡೆವಲಪ್ ಮಾಡುವ ಪ್ರಭೂತಿಗಳನ್ನೂ ಕಳಿಸುವುದು ಒಳ್ಳೆಯದು! ಬೆಳೆ ಸಮೀಕ್ಷೆ ಆ್ಯಪ್ ಬಂದು ಐದು ವರ್ಷ ಆಯ್ತು. ಇವತ್ತಿಗೂ ಅದನ್ನೊಂದು ಸರಿಯಾದ ಟ್ರಾಕ್‌ಗೆ ತರೋಕೆ ಆಗಿಲ್ಲ. ಇದರಿಂದಾಗಿ ಜನ ಸಾಮಾನ್ಯರು ಬವಣೆ ಪಡುವಂತಾಗಿದೆ. ಇದಕ್ಕೆ ಕೊನೆ ಎಲ್ಲಿ?