ಬೆಂಗಳೂರು: ಶಿಯಾ ಉಗ್ರಗಾಮಿ ಸಂಘಟನೆ ಮತ್ತು ಇರಾನ್ ಮಿತ್ರ ಪಕ್ಷವಾದ ಹೆಜ್ಬುಲ್ಲಾವನ್ನು (Iran Attacks Israel) ಗುರಿಯಾಗಿಸಲು ಲೆಬನಾನ್ ಮೇಲೆ ಇಸ್ರೇಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಇರಾನ್ ಮಂಗಳವಾರ ಇಸ್ರೇಲ್ ಮೇಲೆ 400 ಕ್ಷಿಪಣಿಗಳ ದಾಳಿ ಮಾಡಿದೆ. ಆದರೆ, ಆ ಕ್ಷಿಪಣಿಗಳನ್ನು ಇರಾನ್‌ನ ಏರ್ ಡಿಫೆನ್ಸ್ ಸಿಸ್ಟಮ್ ಹೊಡೆದುರುಳಿಸಿವೆ.
𝐍𝐨 𝐭𝐡𝐢𝐬 𝐢𝐬𝐧’𝐭 𝐚 𝐬𝐜𝐢𝐞𝐧𝐜𝐞 𝐟𝐢𝐜𝐭𝐢𝐨𝐧 𝐦𝐨𝐯𝐢𝐞.
— Israel ישראל (@Israel) October 1, 2024
This is Israel right now.
RT this so the entire world knows. pic.twitter.com/ok8CxCXxnP
ಕಳೆದ ವಾರ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾ ಮತ್ತು ಹಮಾಸ್ ನಾಯಕನ ಹತ್ಯೆಗೆ ಪ್ರತಿಕ್ರಿಯೆಯಾಗಿ ಇಂದಿನ ದಾಳಿ ನಡೆದಿದೆ ಎಂದು ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಹೇಳಿದೆ. ಇರಾನ್ನಿಂದ ಉಡಾಯಿಸಲಾದ ರಾಕೆಟ್‌ಗಳು ಮತ್ತು ಕ್ಷಿಪಣಿಗಳನ್ನು ತಡೆಯಲು ಇಸ್ರೇಲ್ ಅಸಾಧಾರಣ ವಾಯು ರಕ್ಷಣಾ ವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ದೇಶಾದ್ಯಂತ ವಾಯು ದಾಳಿಯ ಸೈರನ್ ಗಳು ಪ್ರತಿಧ್ವನಿಸಿದ ನಂತರ ರಾತ್ರಿ ಆಕಾಶವು ಸ್ಫೋಟಗಳಿಂದ ಬೆಳಗುತ್ತಿದ್ದವು. ಕ್ಷಿಪಣಿಗಳು ಜೋರ್ಡಾನ್ ವಾಯುಪ್ರದೇಶದ ಮೇಲೆ ಪತ್ತೆಯಾಗಿವೆ.
ಕ್ಷಿಪಣಿಗಳು ಇಸ್ರೇಲ್ ಮೇಲೆ ದಾಳಿ ಮಾಡುತ್ತಿದ್ದವು. ಇಸ್ರೇಲ್‌ನ ಐರನ್ ಡೋಮ್ ಮತ್ತು ವಾಯು ರಕ್ಷಣಾ ವ್ಯವಸ್ಥೆಯು ಅವುಗಳನ್ನು ತಡೆಯುತ್ತಿದ್ದವು. ಇರಾನ್ 100ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿದೆ ಎಂದು ಇಸ್ರೇಲ್ ಮಾಧ್ಯಮಗಳು ವರದಿ ಮಾಡಿದ ತಕ್ಷಣ ಅವುಗಳನ್ನು ತಡೆಯುವ ವಿಡಿಯೊಗಳು ಕೂಡ ವೈರಲ್ ಆದವು.
ಅಧ್ಯಕ್ಷ ಜೋ ಬೈಡನ್ ಯುಎಸ್ ಮಿಲಿಟರಿಗೆ “ಇಸ್ರೇಲ್‌ಗೆ ರಕ್ಷಣೆಗೆ ಸಹಾಯ ಮಾಡಲು” ಮತ್ತು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡು ಇರಾನಿನ ಕ್ಷಿಪಣಿಗಳನ್ನು ಹೊಡೆದುರುಳಿಸಲು ಆದೇಶಿಸಿದ್ದಾರೆ. ಬೈಡನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಇಬ್ಬರೂ ಶ್ವೇತಭವನದಲ್ಲಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದಾರೆ.
ಇದನ್ನೂ ಓದಿ: Iran Attacks Israel : ಇಸ್ರೇಲ್ ನಲ್ಲಿ 2 ಬಂದೂಕುಧಾರಿಗಳಿಂದ ದಾಳಿ, 4 ಸಾವು, 7 ಮಂದಿಗೆ ಗಾಯ
ಆರು ತಿಂಗಳೊಳಗೆ ಇಸ್ರೇಲ್ ಮೇಲೆ ಇರಾನ್ ನಡೆಸಿದ ಎರಡನೇ ದಾಳಿ ಇದಾಗಿದೆ. ಏಪ್ರಿಲ್‌ನಲ್ಲಿ ಇರಾನ್ ಸ್ಫೋಟಕ ಡ್ರೋನ್‌ಗಳ ಗುಂಪನ್ನು . ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಹಾರಿಸಿತ್ತು. ಇರಾನಿನ ದಾಳಿಯು 200 ಕ್ಕೂ ಹೆಚ್ಚು ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಹೊಂದಿತ್ತು. ಏಪ್ರಿಲ್ 1ರಂದು ಡಮಾಸ್ಕಸ್ ದೂತಾವಾಸದ ಮೇಲೆ ಇಸ್ರೇಲ್ ನಡೆಸಿದ ದಾಳಿಗೆ ಪ್ರತೀಕಾರವಾಗಿ ಇಬ್ಬರು ಹಿರಿಯ ಕಮಾಂಡರ್‌ಗಳು ಸೇರಿದಂತೆ ಏಳು ಗಾರ್ಡ್ ಅಧಿಕಾರಿಗಳನ್ನು ಕೊಂದಿದ್ದಕ್ಕೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಪ್ರತಿಜ್ಞೆ ಮಾಡಿದೆ.