Friday, 22nd November 2024

Matru Vandana Scheme: ಗರ್ಭಿಣಿಯರಿಗೆ 11,000 ರೂ. ಧನಸಹಾಯ, ಹೀಗೆ ಅರ್ಜಿ ಸಲ್ಲಿಸಿ

Matru Vandana Scheme

ಬೆಂಗಳೂರು: ಗರ್ಭಿಣಿಯರಿಗೆ (Pregnant) ಸಿಹಿಸುದ್ದಿ ದೊರೆತಿದೆ. ಕೇಂದ್ರ ಸರ್ಕಾರದ (central government) ಮಾತೃವಂದನಾ ಯೋಜನೆಯಡಿ (Matru Vandana Scheme) ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಮೊದಲ ಹಾಗೂ ಎರಡನೇ ಗರ್ಭ ಧರಿಸಿದವರಿಗೆ ಈ ಸೌಲಭ್ಯ ಲಭ್ಯವಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಪುರಸ್ಕೃತ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯ ಸೌಲಭ್ಯ ಪಡೆಯಲು ಮೊದಲನೇ ಪ್ರಸವದ ಗರ್ಭಿಣಿಯರು ಮತ್ತು ಎರಡನೇ ಪ್ರಸವದಲ್ಲಿ ಹೆಣ್ಣು ಮಗು ಜನಿಸಿದ ಮಹಿಳೆಯರಿಂದ ನೋಂದಣಿ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಮಹಿಳೆಯ ಮೊದಲ ಪ್ರಸವದ ನಂತರದ ಸಾಕಷ್ಟು ವಿಶ್ರಾಂತಿಗಾಗಿ, ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯದಲ್ಲಿ ಸುಧಾರಣೆ ತರಲು ಪ್ರೋತ್ಸಾಹಧನ ರೂಪದಲ್ಲಿ ಹಾಗೂ ವೇತನ ನಷ್ಟದ ಹಿನ್ನೆಲೆಯಲ್ಲಿ ನೀಡಲಾಗುತ್ತಿದೆ. ಮೊದಲ ಮಗುವಿಗೆ ಎರಡು ಕಂತುಗಳಲ್ಲಿ ರೂ. 5000, ಎರಡನೇ ಮಗು (ಹೆಣ್ಣು ಮಗುವಾಗಿರುವುದಕ್ಕೆ) ರೂ. 6000 ನೀಡಲಾಗುವುದು.

ಸರ್ಕಾರಿ ನೌಕರರು ಮತ್ತು ಸಾರ್ವಜನಿಕ ಉದ್ದಿಮೆಗಳ ನೌಕರರನ್ನು ಹೊರತುಪಡಿಸಿ ಮೊದಲ ಪ್ರಸವದ ಗರ್ಭಿಣಿ ಮತ್ತು ಎರಡನೇ ಹೆಣ್ಣು ಮಗುವಿನ ಬಾಣಂತಿಯರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಬಗ್ಗೆ ಶಿಶು ಅಭಿವೃದ್ಧಿ ಯೋಜನಾ ಕಚೇರಿ ಹಾಗೂ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ಅರ್ಜಿ ಪಡೆದು ಅರ್ಜಿ ಸಲ್ಲಿಸಬಹುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.

ಮಾತೃವಂದನಾ ಯೋಜನೆಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ

ನೋಂದಣಿಗೆ ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿ, ತಾಯಿ ಕಾರ್ಡ್ ಮತ್ತು ಮಗುವಿನ ಲಸಿಕೆ ಮಾಹಿತಿಯ ಪ್ರತಿ, ಫಲಾನುಭವಿಯ ಆಧಾರ್ ಕಾರ್ಡ್, ಫಲಾನುಭವಿಯ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಜೋಡಣೆಯಾಗಿರಬೇಕು. ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನರೇಗಾ ಕಾರ್ಡ್, ಇ-ಶ್ರಮ್ ಕಾರ್ಡ್, ಆಯುಷ್ಮಾನ್ ಕಾರ್ಡ್(ಯಾವುದಾದರು ಪ್ರತಿ) ಸಲ್ಲಿಸಬೇಕು.

ಇದನ್ನೂ ಓದಿ: Pregnancy Tips: ಮನೆಯಲ್ಲಿರುವ ಈ ಪ್ರಾಣಿಗಳು ಗರ್ಭಿಣಿಯರಿಗೆ ಅಪಾಯಕಾರಿಯಂತೆ!