Friday, 22nd November 2024

Chikkaballapur News: ಹಿರಿಯ ನಾಗರಿಕರೇ ಮನೆಗೆ ಭೂಷಣ, ಅವರನ್ನು ಗೌರವಿಸುವುದು ನಮ್ಮೆಲ್ಲರ ಕರ್ತವ್ಯ-ಜಿಲ್ಲಾಧಿಕಾರಿ ಪಿ.ಎನ್ ರವೀಂದ್ರ

ಚಿಕ್ಕಬಳ್ಳಾಪುರ : ಹಿರಿಯ ನಾಗರಿಕರು ಮನೆಯಲ್ಲಿದ್ದರೆ ಮನೆಗೆ ಭೂಷಣ.ಇವರಿಂದಾಗಿ ಮಕ್ಕಳಿಗೆ ಆಚಾರ ವಿಚಾರ ಗಳನ್ನು, ಸಂಪ್ರದಾಯ, ಸಂಸ್ಕೃತಿಯನ್ನು ಪರಿಚಯವಾಗುತ್ತದೆ. ಅಂತಹ ಹಿರಿಯರಿಗೆ ಪ್ರೀತಿ ತೋರಿ ಗೌರವದಿಂದ ನೋಡಿಕೊಳ್ಳುವುದು ನಮ್ಮೆಲ್ಲರ ಆಧ್ಯ ಕರ್ತವ್ಯ ಎಂದು ಜಿಲ್ಲಾಧಿಕಾರಿ  ಪಿ.ಎನ್. ರವೀಂದ್ರ ತಿಳಿಸಿದರು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,  ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಕ್ರೀಡೆ ಮತ್ತು ಯುವ ಜನರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ  ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ “ವಿಶ್ವ ಹಿರಿಯ ನಾಗರಿಕರ ದಿನಾಚರಣೆ”ಯ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ದಿನಮಾನಗಳಲ್ಲಿ ಹೆತ್ತ ತಂದೆ ತಾಯಿಗಳ ಪೋಷಿಣೆ ಬಿಟ್ಟು ಮನೆಯಿಂದ ಹೊರಹಾಕುವ ವಿಷಮ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಎಷ್ಟೋ ಜನ ಹಿರಿಯರು ಶ್ರೀಮಂತರಾದರೂ ಸಹ ವೃದ್ಧಾಶ್ರಮಕ್ಕೆ  ಸೇರು ತ್ತಿದ್ದಾರೆ. ಹಿರಿಯರು ಮಕ್ಕಳು ಸೊಸೆ ಮೊಮ್ಮಕ್ಕಳ  ಪ್ರೀತಿ ಹಾಗೂ ಗೌರವ ಬಿಟ್ಟರೆ ಮತ್ತೇನೂ ಅವರು ಬಯಸುವು ದಿಲ್ಲ. ಜಿಲ್ಲಾಡಳಿತ ಹಿರಿಯ ನಾಗರಿಕರಿಗೋಸ್ಕರ ಕೆಲಸ ಮಾಡಲು ಸದಾ ಸಿದ್ಧವಿದೆ. ತೊಂದರೆಗೆ ಸಿಲುಕಿದ ಹಿರಿಯ ನಾಗರಿಕರು ಯಾವುದೇ ಸಮಯದಲ್ಲಿ ಸಹಾಯವಾಣಿಗೆ ಕರೆ ಮಾಡಿದರೆ ತ್ವರಿತ ಸ್ಪಂದನೆ ಮೂಲಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು ೧,೪೭,೨೬೩ ಹಿರಿಯ ನಾಗರಿಕರಿಗರಿದ್ದಾರೆ. ಈ ಪೈಕಿ ೫೬,೮೮೦ ಜನರು ಗುರುತಿನ ಚೀಟಿ ಪಡೆದಿ ದ್ದಾರೆ. ೨೩,೬೪೨ ಜನರಿಗೆ ರಾಷ್ಟಿçÃಯ ವೃದ್ಯಾಪ್ಯ ವೇತನ ತಲುಪುತ್ತಿದೆ. ಸಂಧ್ಯಾ ಸುರಕ್ಷಾ ಯೋಜನೆಯಡಿ ೮೫,೯೮೫  ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರು  ಡಾ. ಕೆ.ವಿ  ಕೃಷ್ಣಪ್ಪ ಅವರು ಮಾತನಾಡಿ ಆಧುನಿಕ ಕಾಲದಲ್ಲಿ ಕುಟುಂಬದ ವ್ಯವಸ್ಥೆ, ಸಂಪ್ರದಾಯ, ಪದ್ಧತಿಗಳು ಬದಲಾಗಿವೆ. ಅವಿಭಕ್ತ ಕುಟುಂಬಗಳು ಮಾಯವಾಗಿ ಅಣು ಕುಟುಂಬಗಳಲ್ಲಿ ವಾಸಿಸಲು ಬಯಸುತ್ತಿದ್ದಾರೆ.ವೃದ್ದಾಶ್ರಮಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಹಿರಿಯರಿದ್ದ ಮನೆ ಸಂಸ್ಕಾರಗೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಹಿರಿಯರನ್ನು ಜೊತೆಯಲ್ಲಿ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳಲು ಸಲಹೆ ನೀಡಿದರು.

ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಸನ್ಮಾನಿಸಲಾಯಿತು, ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ, ನಗದು ಪುರಸ್ಕಾರ, ಪ್ರಮಾಣಪತ್ರ ಹಾಗೂ ಹಿರಿಯ ನಾಗರಿಕರಿಗೆ ಸಾಧನ ಸಲಕರಣೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಈಶ್ವರಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವೆಂಕಟೇಶ್ ರೆಡ್ಡಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎನ್. ಗಂಗಾಧರಯ್ಯ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಸಂಸ್ಥಾಪಕ ಕೆ. ಎನ್ ಮೂರ್ತಿ, ಶ್ರೀ ಸಾಯಿ  ದ್ವಾರಕಾಮಯಿ ವೃದ್ಯಾಶ್ರಮ ವ್ಯವಸ್ಥಾಪಕ ಮುರುಳಿ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ  ನೋಡಲ್ ಅಧಿಕಾರಿ ಆರ್. ಗಣೇಶ್, ಜಿಲ್ಲಾ ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿವೃತ್ತ ಅಧಿಕಾರಿ  ಎನ್. ಎಂ ಶಾಂತರಸ, ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ನೂರಾರು ಹಿರಿಯ ನಾಗರಿಕರು ಹಾಗೂ ಸಾರ್ವಜನಿಕರು ಹಾಜರಿದ್ದರು.

ಇದನ್ನೂ ಓದಿ: Chikkaballapur Crime: ಯುವತಿ ಪತ್ತೆಗೆ ಮನವಿ