Sunday, 6th October 2024

Viral Video: ನಿಲ್ಲಿಸಿದ್ದು ತಪಾಸಣೆಗೆ, ತೆಗೆದುಕೊಂಡಿದ್ದು ಸೆಲ್ಫಿ; ಲ್ಯಾಂಬೊರ್ಗಿನಿ ಕಂಡ ತಕ್ಷಣ ಪೊಲೀಸರ ವರಸೆಯೇ ಬದಲಾಯ್ತು!

Viral Video

ನವದೆಹಲಿ : ಲ್ಯಾಂಬೊರ್ಗಿನಿ ಕಾರಿನ ಮಾಲೀಕರೊಬ್ಬರು ಇತ್ತೀಚೆಗೆ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಂದಿಗೆ ನಡೆದ ಸಂತೋಷದ ಕ್ಷಣವೊಂದನ್ನು ಹಂಚಿಕೊಂಡಿದ್ದಾರೆ. ಸೆರಾಮಿಕ್ ಪ್ರೊ ಕಂಪನಿಯ ಸ್ಥಾಪಕ ಮತ್ತು ನಿರ್ದೇಶಕರಾಗಿದ್ದಾಗಿದ್ದ ಉದ್ಯಮಿ ನಿಶಾಂತ್ ಸಾಬೂ ಅವರು ತಮ್ಮ ಲ್ಯಾಂಬೊರ್ಗಿನಿ ಕಾರಿನಲ್ಲಿ ಹೋಗುತ್ತಿದ್ದಾಗ ವಾಹನ  ತಪಾಸಣೆಗಾಗಿ ಟ್ರಾಫಿಕ್ ಪೊಲೀಸ್ ಅಧಿಕಾರಿ ಅವರನ್ನು ತಡೆದಿದ್ದಾರೆ. ಆದರೆ ಅಲ್ಲಿ ಪೊಲೀಸರು ಇವರನ್ನು ಪ್ರಶ್ನಿಸುತ್ತಾರೆ ಎಂದು ಅಂದುಕೊಂಡರೆ ಅದರ ಬದಲು ಪೊಲೀಸರು ಲ್ಯಾಂಬೊರ್ಗಿನಿ ಕಾರನ್ನು ತಡೆದು  ಅದರೊಂದಿಗೆ ತಮ್ಮ ಪೋಟೋ ತೆಗೆದುಕೊಳ್ಳಲು ಇವರ ಬಳಿ ಅನುಮತಿ ಕೇಳಿದ್ದಾರೆ ಎಂಬುದಾಗಿ ಸಾಬೂ ಅವರು ತಿಳಿಸಿದ್ದಾರೆ. ಲ್ಯಾಂಬೊರ್ಗಿನಿ ಕಾರಿನಲ್ಲಿ  ಪೊಲೀಸ್ ಅಧಿಕಾರಿ ಖುಷಿಯಿಂದ ಕುಳಿತಿರುವ ಪೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral News) ಆಗಿದೆ.

“ಸಮವಸ್ತ್ರದಲ್ಲಿರುವ ಪೊಲೀಸರು ಕೂಡ ಸೂಪರ್ ಕಾರುಗಳ ಬಗ್ಗೆ ಉತ್ಸಾಹವನ್ನು ಹೊಂದಿರುವುದನ್ನು ನೋಡಿ ನನಗೆ ಅದ್ಭುತವೆನಿಸಿದೆ” ಎಂದು ಅವರು ಹೇಳಿದ್ದಾರೆ. ನಂತರ ಪೊಲೀಸ್ ಅಧಿಕಾರಿ ಕಾರನ್ನು ಹತ್ತಿರದಿಂದ ನೋಡಲು ಬಯಸಿ ನಾಚಿಕೆಯಿಂದ ಒಳಗೆ ಪ್ರವೇಶಿಸಿದ್ದಾರೆ.  ಮತ್ತು ಐಷಾರಾಮಿ ಕಾರಿನ ನಯವಾದ ವಿನ್ಯಾಸವನ್ನು ನೋಡಿ ಖುಷಿಯಿಂದ ನಕ್ಕಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

“ನಮಗೆ ಇಂತಹ ಸಂತೋಷದ ಪೊಲೀಸರು ಬೇಕು” ಎಂದು ಬಳಕೆದಾರರೊಬ್ಬರು ಪೋಸ್ಟ್ ಅಡಿಯಲ್ಲಿ ಕಾಮೆಂಟ್ ಮಾಡಿದ್ದಾರೆ. “ಇದನ್ನು ಹಂಚಿಕೊಳ್ಳುವ ಮೂಲಕ ಸಂತೋಷ ಹೆಚ್ಚಾಗುತ್ತದೆ ಎಂದು ನೀವು ಸಾಬೀತುಪಡಿಸಿದ್ದೀರಿ” ಎಂದು ಮತ್ತೊಬ್ಬರು ಕಾಮೆಂಟ್‍ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ:ಬೈಕ್ ಸವಾರನನ್ನು ಬೆನ್ನಟ್ಟಿ ಕೊಂದ ಘೇಂಡಾಮೃಗ; ಭಯ ಹುಟ್ಟಿಸುವ ವಿಡಿಯೊ

ನಿಶಾಂತ್ ಸಾಬೂ ಅವರು ಸೆರಾಮಿಕ್ ಪ್ರೊ ಕಂಪನಿಯ ಸ್ಥಾಪಕ ಮತ್ತು ನಿರ್ದೇಶಕರಾಗಿದ್ದಾರೆ. ಈ ಕಂಪೆನಿ ವಾಹನಗಳಿಗೆ ಸುಧಾರಿತ ಸೆರಾಮಿಕ್ ನ್ಯಾನೊ ತಂತ್ರಜ್ಞಾನ ರಕ್ಷಣಾತ್ಮಕ ಲೇಪನ ವ್ಯವಸ್ಥೆಗಳಲ್ಲಿ ಪರಿಣತಿ ಹೊಂದಿದೆ. ಭಾರತದಾದ್ಯಂತ ಐಷಾರಾಮಿ ಕಾರುಗಳನ್ನು ಪ್ರದರ್ಶಿಸುವ ಜನಪ್ರಿಯ ಇನ್ಸ್ಟಾಗ್ರಾಮ್ ಆಧಾರಿತ ಪ್ಲಾಟ್ಫಾರ್ಮ್ SuperCarscommunity_India ನ ಸೃಷ್ಟಿಕರ್ತರಾಗಿದ್ದಾರೆ.  ಈ ಹಿಂದೆ, ಅವರು ತಮ್ಮ ಶೋರೂಂನ ಹೊರಗೆ ಕಾರುಗಳ ಅದ್ಧೂರಿ ಸಂಗ್ರಹವನ್ನು ಕಂಡು ಸಂತೋಷಗೊಂಡ ವಿಶೇಷ ಚೇತನ ವ್ಯಕ್ತಿಯನ್ನು ಒಳಗೊಂಡ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಆ ವ್ಯಕ್ತಿ ಶೋರೂಂ ಒಳಗೆ ಬರದಿದ್ದರೂ ದೂರದಿಂದ ವಾಹನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.