Friday, 22nd November 2024

ICC Test Rankings: ಬುಮ್ರಾ ನಂ.1 ಬೌಲರ್‌; 6ಕ್ಕೆ ಜಿಗಿದ ಕೊಹ್ಲಿ

ICC Test Rankings

ದುಬೈ: ಬಾಂಗ್ಲಾದೇಶ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ನಿರೀಕ್ಷಿತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ವಿರಾಟ್‌ ಕೊಹ್ಲಿ(Virat Kohli) ನೂತನ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ ಯಾದಿಯ(ICC Test Rankings)ಲ್ಲಿ ಮರಳಿ ಟಾಪ್‌-10 ಯಾದಿಯನ್ನು ಅಲಂಕರಿಸಿದ್ದಾರೆ. ಕಳೆದ ವಾರ 5 ಸ್ಥಾನಗಳ ಕುಸಿತದೊಂದಿಗೆ 12ನೇ ಸ್ಥಾನಿಯಾಗಿದ್ದ ಕೊಹ್ಲಿ, ನೂತನ ಶ್ರೇಯಾಂಕದಲ್ಲಿ 6 ಸ್ಥಾನಗಳ ಜಿಗಿತ ಕಂಡಿದ್ದಾರೆ. ಅವರಿಗ 724 ಅಂಕಗಳೊಂದಿಗೆ 6ನೇ ಸ್ಥಾನಿಯಾಗಿದ್ದಾರೆ. ಬೌಲಿಂಗ್‌ ಶ್ರೇಯಾಂಕದಲ್ಲಿ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರು ಆರ್‌. ಅಶ್ವಿನ್‌(R Ashwin) ಹಿಂದಿಕ್ಕಿ ನಂ.1 ಟೆಸ್ಟ್‌ ಬೌಲರ್‌ ಎನಿಸಿಕೊಂಡಿದ್ದಾರೆ.

ಕಾನ್ಪುರ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕ ಹೊಡೆದ ಯಶಸ್ವಿ ಜೈಸ್ವಾಲ್‌ (792) 3ನೇ ಸ್ಥಾನಕ್ಕೆ ಏರಿದ್ದಾರೆ. ಚೆನ್ನೈ ಟೆಸ್ಟ್‌ನಲ್ಲಿ ಅಮೋಘ ಶತಕ ಬಾರಿಸಿ 6ನೇ ಸ್ಥಾನಕ್ಕೇರಿದ್ದ ರಿಷಭ್‌ ಪಂತ್‌(718) ಮೂರು ಸ್ಥಾನಗಳ ಕುಸಿತ ಕಂಡು 9ನೇ ಸ್ಥಾನ ಪಡೆದಿದ್ದಾರೆ. ಎರಡೂ ಟೆಸ್ಟ್‌ನಲ್ಲಿ ಬ್ಯಾಟಿಂಗ್‌ ವೈಫಲ್ಯ ಕಂಡಿರುವ ನಾಯಕ ರೋಹಿತ್‌ ಶರ್ಮ(693) 5 ಸ್ಥಾನ ಕುಸಿತ ಕಂಡು 15ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಶುಭಮನ್‌ ಗಿಲ್‌(684) 2 ಸ್ಥಾನಗಳ ನಷ್ಟದದೊಂದಿಗೆ 16ನೇ ಸ್ಥಾನ ಪಡೆದಿದ್ದಾರೆ.

ಬುಮ್ರಾ ನಂ.1 ಬೌಲರ್‌

ಬೌಲಿಂಗ್‌ ಶ್ರೇಯಾಂಕದಲ್ಲಿ ಜಸ್‌ಪ್ರೀತ್‌ ಬುಮ್ರಾ ಅವರು 870 ಅಂಕದೊಂದಿಗೆ ಅಗ್ರಸ್ಥಾನಕ್ಕೇರಿದ್ದಾರೆ. ಈ ಹಿಂದೆ ಅಗ್ರಸ್ಥಾನಿಯಾಗಿದ್ದ ಆರ್‌.ಅಶ್ವಿನ್‌(869) ಒಂದು ಸ್ಥಾನ ಕುಸಿತ ಕಂಡು ದ್ವಿತೀಯ ಸ್ಥಾನ ಪಡೆದಿದ್ದಾರೆ. ಬುಮ್ರಾ 2 ಟೆಸ್ಟ್‌ಗಳಲ್ಲಿ 49 ಓವರ್‌ಗಳನ್ನು ಬೌಲ್ ಮಾಡಿ. ಒಟ್ಟು 11 ವಿಕೆಟ್‌ಗಳನ್ನು ಕಿತ್ತಿದ್ದರು. ಅಶ್ವಿನ್‌ ಕೂಡ 12 ವಿಕೆಟ್‌ ಪಡೆದಿದ್ದರು. ಆದರೆ, ಬೌಲಿಂಗ್ ಸರಾಸರಿಯಲ್ಲಿ ಅಶ್ವಿನ್‌ಗಿಂತ ಬುಮ್ರಾ ದಾಖಲೆ ಉತ್ತಮವಾಗಿದ್ದ ಕಾರಣ ಅವರಿರಿಗೆ ಅಗ್ರಸ್ಥಾನ ಲಭಿಸಿತು. ಉಭಯ ಆಟಗಾರರ ಮಧ್ಯೆ ಕೇವಲ ಒಂದು ಅಂಕದ ವ್ಯತ್ಯಾಸವಿದೆ.

ಟಾಪ್‌-10 ಟೆಸ್ಟ್‌ ಬ್ಯಾಟರ್

ಜೋ ರೂಟ್‌-899

ಕೇನ್‌ ವಿಲಿಯಮ್ಸನ್‌-829

ಯಶಸ್ವಿ ಜೈಸ್ವಾಲ್‌-792

ಸ್ಟೀವನ್‌ ಸ್ಮಿತ್‌-757

ಉಸ್ಮಾನ್‌ ಖ್ವಾಜಾ-728

ವಿರಾಟ್‌ ಕೊಹ್ಲಿ-724

ಮೊಹಮ್ಮದ್‌ ರಿಜ್ವಾನ್‌-720

ಮಾರ್ನಸ್‌ ಲಬುಶೇನ್‌-720

ರಿಷಭ್‌ ಪಂತ್‌-718

ಡ್ಯಾರಿಲ್‌ ಮಿಚೆಲ್‌-718

ಇದನ್ನೂ ಓದಿ Womens T20 World Cup: ಮಹಿಳಾ ಟಿ20 ವಿಶ್ವಕಪ್‌ ಸಾಧಕಿಯರ ಸಾಧನೆ ಪಟ್ಟಿ

ಟಾಪ್‌-10 ಟೆಸ್ಟ್‌ ಬೌಲರ್

ಜಸ್‌ಪ್ರೀತ್‌ ಬುಮ್ರಾ-870

ಆರ್‌. ಅಶ್ವಿ‌ನ್‌-869

ಜೋಶ್‌ ಹೇಝಲ್‌ವುಡ್‌-847

ಪ್ಯಾಟ್‌ ಕಮಿನ್ಸ್‌-820

ಕಾಗಿಸೊ ರಬಾಡ-820

ರವೀಂದ್ರ ಜಡೇಜ-809

ನಥನ್‌ ಲಿಯಾನ್‌-801

ಪ್ರಭಾತ್‌ ಜಯಸೂರ್ಯ-801

ಕೈಲ್‌ ಜೇಮಿಸನ್‌-714

ಶಾಹೀನ್‌ ಶಾ ಅಫ್ರಿದಿ-709