ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ತಂತ್ರಜ್ಞಾನ ಮೂಲಕ ಶಿಕ್ಷಣ ನೀಡುತ್ತಿರುವ ಕಾರ್ಯ ಶ್ಲಾಘನೀಯ- ಡಾ.ಮಲ್ಲಿಕಾರ್ಜುನ ಮೇತ್ರಿ
ಇಂಡಿ: ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಜಗತ್ತು ಸಾಕಷ್ಟು ಅಭಿವೃದ್ದಿ ಹೊಂದುತ್ತಿದೆ. ಅಧುನಿಕ ತಂತ್ರಜ್ಞಾನ ದಿನಗಳಲ್ಲಿ ಭಾರತ ಶಿಕ್ಷಣ ಪ್ರಸಾರ ಮಾಡುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಜ್ಞಾನ , ಆಸಕ್ತಿಗೆ ತಕ್ಕಂತೆ ಶೈಕ್ಷಣಿಕ ತಂತ್ರಜ್ಞಾನಗಳ ಮೂಲಕ ಶಿಕ್ಷಣ ನೀಡಿ ಮಾನವ ಸಂಪನ್ಮೂಲ ಅಭಿವೃದ್ದಿಪಡಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಸಿಕ್ಯಾಬ್ ಮಹಿಳಾ ವಿಶ್ವವಿದ್ಯಾಲಯ ಪ್ರಾದ್ಯಾಪಕ ಸಾಹಿತಿ ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.
ಕರ್ನಾಟಕ ಸರಕಾರ ಜಿಲ್ಲಾ ಪಂಚಾಯತ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪೂರ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇಂಡಿ. ಶ್ರೀ ವ್ಹಿ. ವಾಯ್ ಪಾಟೀಲ ಪ್ರೌಢ ಶಾಲೆ ಪಡನೂರ ನೂತನ ಶಾಲಾ ಕೋಣಿಗಳ ಉದ್ಘಾಟನೆ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊಸಪಡನೂರ ನೂತನ ಸ್ಮಾರ್ಟ ಕ್ಲಾಸ್ ಉದ್ಘಾಟನಾ ಸಮಾರಂಭದ ಮಾತನಾಡಿದ ಅವರು ಹಿಂದಿನ ಇಂದಿನ ಶಿಕ್ಷಣ ಕಾಲದಲ್ಲಿ ಗುರುಕುಲ ಶಿಕ್ಷಣ ಇತ್ತು ಜಗತ್ತು ಬದಲಾಗುತ್ತಿದೆ ಶಿಕ್ಷಣ ಕೂಡಾ ನಿಂತ ನಿರಲ್ಲ ಸದಾ ಪ್ರವಾಹಿಸುತ್ತದೆ ,ವಿಧ್ಯಾರ್ಥಿಗಳಿಗೆ ಕಲಿಕೆಯಲ್ಲಿ ಆಸಕ್ತಿ ,ಅಭಿರುಚಿ ಹೆಚ್ಚಿಸಬೇಕಾದರೆ ಇಂದು ಸ್ಮಾರ್ಟ ಕ್ಲಾಸುಗಳ ಬಹಳ ಅವಶ್ಯ, ಸ್ಲಾರ್ಟ ಕ್ಲಾಸ್ ಕಲಿಕೆಗೆ ಕಲಿಸುವ ವ್ಯಕ್ತಿಯ ಜಾಣತನ ಮುಖ್ಯ ಕಲಿಯುವ ವಿಧ್ಯಾರ್ಥಿ ಕೂಡಾ ಜಾಣ ನೀರಬೇಕು ಇದರಿಂದ ಸಾಧಕ ಬಾಧಕಗಳು ಹೊರತಾಗಿಲ್ಲ ಎಂದು ಮನೋ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ದೃಶ್ಯ, ಶ್ರವಣ ಗಳಿಂದ ಕಲಿಕೆ ಗಟ್ಟಿಯಾಗುತ್ತದೆ ಎಂದು ಉಪನ್ಯಾಸ ನೀಡಿದರು.
ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ಶಿಕ್ಷಣ ಮನುಷ್ಯನಿಗೆ ಆಭರಣವಿದ್ದಂತೆ ಒಂದು ದೇಶದ ಪ್ರಗತಿಗೆ ಶಿಕ್ಷಣ ಮುಖ್ಯ ನನ್ನ ರಾಜಕೀಯ ಜೀವನದಲ್ಲಿ ಅತೀ ಹೆಚ್ಚು ಶಿಕ್ಷಣಕ್ಕೆ ಮಹತ್ವ ನೀಡಿದ್ದೇನೆ. ಮುಂಬರುವ ದಿನಗಳಲ್ಲಿ ಬೇರೆ ಬೇರೆ ವಿಧದಲ್ಲಿ ಶಿಕ್ಷಣ ಅಭಿವೃದ್ದಿಪಡಿಸೋಣ ಎಂದರು.
ಪ್ರಬುದ್ದ ರಾಜಕಾರಣಿಯಾಗಬೇಕಾದರೆ ಶಿಕ್ಷಣ ಮುಖ್ಯ. ಒಂದು ದೇಶದ ಅಭಿವೃದ್ದಿಗೆ ಶಿಕ್ಷಣ ಪ್ರಮುಖ ಸಾಧನ ದೇಶದ ಅಳಿವು ಉಳಿವು ಶಿಕ್ಷಣ ಮೇಲೆ ನಿಂತಿದೆ ವಿಧ್ಯಾರ್ಥಿಗಳಿಗೆ ಗುರಿ, ಸಾಧನೆ, ಧೃಢಸಂಕಲ್ಪ ಇದ್ದಾಗ ಯಶಸ್ವೀ ಕಟ್ಟಿಟ್ಟ ಬುತ್ತಿ ಎಂದು ಭಾಗಣ್ಣಾ ಹರಳಯ್ಯಾ ಹೇಳಿದರು.
ನ್ಯಾಯದ ಮನೆತನಕ್ಕೆ ವಿಠ್ಠಲಗೌಡ ಪಾಟೀಲ, ಧಾರ್ಮಿಕ ಹಾಗೂ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಬೀದರ ಶ್ರೀಮಠದ ಶಿವುಕುಮಾರ ಮಹಾಸ್ವಾಮಿಗಳು, ಸಾಹಿತಿಕವಾಗಿ ಡಾ.ಮೇತ್ರಿ, ರಾಜಕೀಯ ಸಂತರಾಗಿ ಯಶವಂತರಾಯಗೌಡ ಪಾಟೀಲರಾಗಿದ್ದು. ಪಡನೂರ ಗ್ರಾಮ ಪುಟ್ಟದಾದರೂ ಸಾಧನೆಯ ಶಿಖರ ಎರಿದ ಸಾಧಕರು ಅನೇಕರು ಇವರ ಆದರ್ಶಗಳು ಇಂದಿನ ಯುವಪಿಳಿಗೆ ಅಳವಡಿಸಿಕೊಳ್ಳಬೇಕು.ಶಿಕ್ಷಣ ಮನುಷ್ಯನ ಮಾನವೀಯ ಮೌಲ್ಯಗಳನ್ನು ಕಲಿಸುತ್ತದೆ. ಡಾ.ಬಿ.ಆರ್ ಅಂಬೇಡ್ಕರ ಹೇಳಿದಂತೆ ಶಿಕ್ಷಣ ಹುಲಿ ಹಾಲು ಇದ್ದಂತೆ ಯಾರು ಇದನ್ನು ಸೇವಿಸುತ್ತಾರೆ ಹಲಿಯಂತೆ ಗರ್ಜಿಸುತ್ತಾರೆ ಆದ್ದರಿಂದ್ದ ಶಿಕ್ಷಣ ಪಡೆದು ಸ್ವಾಭಿಮಾನಿ ಬದಕು ಸಾಗಿಸಿ, ಭೀಮಾತೀರ ಅಲ್ಲ ಇದು ಹೃದಯವಂತರ ಬೀಡು. ದಿವ್ಯಸಾನಿಧ್ಯ ವಹಿಸಿದ ಅಂತರಾಷ್ಟ್ರೀಯ ಯೋಗಾ ಚಾರ್ಯ ಗುರುದೇವ ಯೋಗಾಶ್ರಮ ಬಾಲಗಾಂವ-ಕಾತ್ರಾಳ ಡಾ.ಅಮೃತಾನಂದ ಮಹಾಸ್ವಾಮಿಗಳು.
ಡಾ.ಬಸವಾನಂದ ಮಹಾಸ್ವಾಮಿಗಳು , ಮ.ಫ.ಚ ಸಿದ್ದರಾಮೇಶ್ವರ ಪಟ್ಟದ ದೇವರು ಗೋರ ಚಿಂಚೋಳ್ಳಿ ಸಾನಿಧ್ಯ ವಹಿಸಿದರು.
ಪಡನೂರ ಗ್ರಾಮ ಪಂಚಾಯತ ಅಧ್ಯಕ್ಷ ಕ್ಷಡಕ್ಷರಿ ಮೇತ್ರಿ,ಪುರಸಭೆ ಅಧ್ಯಕ್ಷಲಿಂಬಾಜಿ ರಾಠೋಡ, ಉಪಾಧ್ಯಕ್ಷ ಸೌದಾಗರ, ಉಪವಿಭಾಗಾಧಿಕಾರಿ ಅಬೀದ ಗದ್ಯಾಳ, ತಹಶೀಲ್ದಾರ ಬಿ.ಎಸ್ ಕಡಕಭಾವಿ, ಪೊಲೀಸ್ ಉಪಾಧೀಕ್ಷಕ ಜಗದೀಶ ಎಸ್.ಎಚ್,ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್ ಆಲಗೂರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್ ನಡಗಡ್ಡಿ, ತಾ.ಪಂ ಯೋಜನಾಧಿಕಾರಿ ನಂದೀಪ ರಾಠೋಡ, ಅನುಧಾನಿ ಮಾಧ್ಯಮಿಕ ಸಂಘದ ಅಧ್ಯಕ್ಷ ನಿಜಣ್ಣಾ ಕಾಳೆ, ಭೀಮನಗೌಡ ಬಿರಾದಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ಭೀಮಾಶಂಕರ ಬೈರಜಿ, ಮಹಾಂತೇಶ ಅವರಾಧಿ, ಸುಧೀರ ಕರಕಟ್ಟಿ, ಶಿವಯೋಗೇಪ್ಪ ಚನಗೋಂಡ, ಕಲ್ಲನಗೌಡ ಬಿರಾದಾರ, ಹಣಮಂತ ಅರವತ್ತು ಸೇರಿದಂತೆ ಶಾಲಾ ಮುಖ್ಯ ಶಿಕ್ಷಕ ಕೆ.ಉಮರಾಣಿ, ಶಿಕ್ಷಕರಾದ ಎನ್ .ಕೆ ಶಂಕರಶೆಟ್ಟಿ, ಎಸ್.ಬಿ ಪಾಟೀಲ, ಸಿ.ಎಸ್ ಮೋಟಗಿ, ಚೇತನ ಮಠಪತಿ, ಪ್ರೀಯಾಂಕ ಹಂಚಿನಾಳ, ರೇಣುಕಾ ಕಪಾಲಿ, ಅಂಬಣ್ಣಾ ಬಡಚಿ, ದೇವಕಿ ಗಾಯಕವಾಡ, ಎಸ್.ಡಿ ಎಂ,ಸಿ ಪದಾಧಿಕಾರಿಗಳು ಗ್ರಾಮಸ್ಥರು ಅನೇಕ ಮುಖಂಡರು ಇದ್ದರು.
ವಿಶ್ವವಾಣಿ ಪತ್ರಕರ್ತ ಶರಣಬಸಪ್ಪ.ಎನ್ ಕೆ ಸ್ವಾಗತಿಸಿ, ಅರಣ್ಯ ಇಲಾಖೆ ಅಧಿಕಾರಿ ಧನರಾಜ ಮುಜಗೊಂಡ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಇದನ್ನೂ ಓದಿ: Vijayapura News: ಸಂಸ್ಕೃತ ಭಾಷೆ ದೇವವಾಣಿ, ಸರ್ವಶ್ರೇಷ್ಠ ಭಾಷೆ – ಶರಣಬಸಪ್ಪಾ ಕಾಂಬಳೆ ಅಭಿಮತ