Friday, 22nd November 2024

Gandhi Jayanti: ದೇಶಾದ್ಯಂತ 12 ಕೋಟಿಗೂ ಅಧಿಕ ಶೌಚಗೃಹ ನಿರ್ಮಾಣ; ಪ್ರಲ್ಹಾದ್‌ ಜೋಶಿ

Gandhi Jayanti

ಬೆಂಗಳೂರು: ಮಹಾತ್ಮ ಗಾಂಧೀಜಿ (Mahatma Gandhiji) ಅವರ ಸ್ವಚ್ಛ ಭಾರತ ಪರಿಕಲ್ಪನೆಯನ್ನು ನನಸು ಮಾಡಿದ್ದಾರೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಪ್ರತಿಪಾದಿಸಿದರು. ಗಾಂಧಿ ಜಯಂತಿ (Gandhi Jayanti) ಪ್ರಯುಕ್ತ ಬೆಂಗಳೂರಿನ ಯಶವಂತಪುರದ ಸಂವಿಧಾನ ವೃತ್ತದಲ್ಲಿ ಬಿಜೆಪಿ ಎಸ್ಸಿ ಎಸ್ಟಿ ಮೋರ್ಚಾ ಆಯೋಜಿಸಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಚ್ಛ ಭಾರತ ಪರಿಕಲ್ಪನೆ ಮಹಾತ್ಮ ಗಾಂಧಿಯವರ ಆಶಯವಾಗಿತ್ತು. ಅದರಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಯಲು ಶೌಚ ಮುಕ್ತಿಗೊಳಿಸುವ ಮೂಲಕ ಅದನ್ನು ಸಾಕಾರಗೊಳಿಸಿದ್ದಾರೆ ಎಂದರು.

ದೇಶಾದ್ಯಂತ 12 ಕೋಟಿ ಶೌಚಗೃಹ ನಿರ್ಮಾಣ

ದೇಶಾದ್ಯಂತ 12 ಕೋಟಿಗೂ ಅಧಿಕ ಶೌಚಗೃಹಗಳನ್ನು ನಿರ್ಮಿಸುವ ಮೂಲಕ ಮೋದಿ ಅವರು ಬಯಲು ಶೌಚ ನಿರ್ಮೂಲನೆಗೊಳಿಸಿ ಸ್ವಚ್ಛ ಭಾರತ್‌ಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಹಳ್ಳಿ ಹಳ್ಳಿಗಳಲ್ಲೂ ಸ್ವಚ್ಛತೆಗೆ ಪ್ರಥಮಾದ್ಯತೆ ನೀಡಿ, ಅರಿವು ಮೂಡಿಸಿದ್ದಾರೆ ಎಂದು ಜೋಶಿ ಹೇಳಿದರು.

ಈ ಸುದ್ದಿಯನ್ನೂ ಓದಿ | Swachh Bharat: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸ್ವಚ್ಛತಾ ಅಭಿಯಾನ; ವಿಡಿಯೊ ನೋಡಿ

ದೇಶವಾಸಿಗಳನ್ನು ಸ್ವಚ್ಛ ಭಾರತದ ರಾಯಭಾರಿಗಳನ್ನಾಗಿ ಮಾಡಿ ದೇಶದ ಕೀರ್ತಿಯನ್ನು ಬಾನೆತ್ತರಕ್ಕೆ ಕೊಂಡೊಯ್ದಿದ್ದಾರೆ ಪ್ರಧಾನಿ ಮೋದಿ ಅವರು ಎಂದು ಅವರು ಸ್ಮರಿಸಿದರು.

ಇದೇ ವೇಳೆ ಮಹಾತ್ಮ ಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್‌ ಅವರ ಪುತ್ಥಳಿಗೆ ಗೌರವ ನಮನ ಸಲ್ಲಿಸಿದರು.

ಈ ಸುದ್ದಿಯನ್ನೂ ಓದಿ | Chris Gayle : ಜಮೈಕಾ ಟು ಇಂಡಿಯಾ; ಪ್ರಧಾನಿ ಮೋದಿಯನ್ನು ಭೇಟಿಯಾದ ಸ್ಫೋಟಕ ಬ್ಯಾಟರ್‌ ಕ್ರಿಸ್‌ ಗೇಲ್‌

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಬೆಂಗಳೂರು ಉತ್ತರ ವಿಭಾಗದ ಬಿಜೆಪಿ ಅಧ್ಯಕ್ಷ ಹರೀಶ್ ಹಾಗೂ ಎಸ್ಸಿ ಮೋರ್ಚಾದ ಮುಖಂಡರು, ಪ್ರಮುಖರು, ಕಾರ್ಯಕರ್ತರು ಹಾಗೂ ಪೌರಕಾರ್ಮಿಕರು ಉಪಸ್ಥಿತರಿದ್ದರು.