ಬೆಂಗಳೂರು: ಸಿದ್ದರಾಮಯ್ಯ ಅವರೇ ನಿಮ್ಮ ಆತ್ಮಸಾಕ್ಷಿಗೆ ಮಂಕು ಕವಿದಿದೆಯೇ? ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಗಾಂಧಿ ಜಯಂತಿ ವೇಳೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ನುಡಿದ ಆತ್ಮಸಾಕ್ಷಿಯೇ ನಿಜವಾದ ನ್ಯಾಯಾಲಯ; ಆತ್ಮಸಾಕ್ಷಿಗಿಂತ ಮಿಗಿಲಾದ ನ್ಯಾಯಾಲಯವಿಲ್ಲ ಎಂಬ ಹೇಳಿಕೆಗೆ ಪ್ರಲ್ಹಾದ್ ಜೋಶಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Iran Israel War: ಇರಾನ್-ಇಸ್ರೇಲ್ ಬಳಿ ಎಂಥೆಂಥ ಶಸ್ತ್ರಾಸ್ತ್ರಗಳಿವೆ? ಏನಿವುಗಳ ಸಾಮರ್ಥ್ಯ?
ಸಿದ್ದರಾಮಯ್ಯನವರೇ, ಆತ್ಮಸಾಕ್ಷಿಯೇ ಅತ್ಯುತ್ತಮ ನ್ಯಾಯಾಲಯ ನಿಜ. ಆದರೆ ನಿಮ್ಮ ಆತ್ಮಸಾಕ್ಷಿಗೆ ಮಂಕು ಕವಿದಿದೆ ಎನಿಸುತ್ತಿದೆ. ಗಾಂಧಿ ಜಯಂತಿಯಂದು ಮಹಾ ಗಾಂಧಿವಾದಿ ಎಂಬಂತೆ ಮಾತನಾಡುವ ನೀವು ನಿಮ್ಮ ಆತ್ಮಸಾಕ್ಷಿಯನ್ನು ಒಮ್ಮೆ ಬಡಿದೆಬ್ಬಿಸಿ ಕೇಳಿ ಎಂದು ಸಿಎಂಗೆ ಕಿವಿಮಾತು ಹೇಳಿದ್ದಾರೆ.
ವಾಲ್ಮೀಕಿ, ಮುಡಾ ಸಾಕಷ್ಟು ಭ್ರಷ್ಟಾಚಾರ ನಡೆಸಿರುವ ತಾವು ರಾಜ್ಯದ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಲು ಯೋಗ್ಯರೇ? ಎಂದು ಆತ್ಮಸಾಕ್ಷಿಯನ್ನು ಕೇಳಿಕೊಳ್ಳಿ ಎಂದು ಸಲಹೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | HD Kumaraswamy: ವಿಜ್ಞಾನಿಗಳು ದೇಶದ ಆಸ್ತಿಯಷ್ಟೇ ಅಲ್ಲ, ಹೆಮ್ಮೆ: ಎಚ್.ಡಿ. ಕುಮಾರಸ್ವಾಮಿ
ಗಾಂಧೀಜಿ ಹೇಳಿದ ಆತ್ಮಸಾಕ್ಷಿ ನಿಮಗೂ ಇಲ್ಲ, ನಿಮ್ಮ ಆಡಳಿತಕ್ಕೂ ಇಲ್ಲ. ನಿಮ್ಮ ಮಾತು ಓತಿಕಾಟಕ್ಕೆ ಬೇಲಿ ಸಾಕ್ಷಿ ಎಂಬಂತಿದೆ ಎಂದು ಸಚಿವ ಪ್ರಲ್ಹಾದ್ ಜೋಶಿ ಗೇಲಿ ಮಾಡಿದ್ದಾರೆ.