ಬೆಂಗಳೂರು: ದಕ್ಷಿಣ ಲೆಬನಾನ್‌ನಲ್ಲಿ ಹೆಜ್ಬುಲ್ಲಾ ಉಗ್ರರ ನೆಲೆಗಳ ಮೇಲೆ ನಡೆಸುತ್ತಿರುವ ಸಮರದ (Israel hezbollah War) ವೇಳೆ ಎಂಟು ಇಸ್ರೇಲಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಬುಧವಾರ ಹೇಳಿದೆ. ಇದು ಇರಾನ್ ಬೆಂಬಲಿತ ಲೆಬನಾನ್ ಉಗ್ರಗಾಮಿ ಗುಂಪು ಹೆಜ್ಬುಲ್ಲಾ ಜೊತೆಗಿನ ಘರ್ಷಣೆಯಲ್ಲಿ ಇಸ್ರೇಲ್ ಪಡೆಗೆ ಆಗಿರುವ ಆಘಾತವಾಗಿದೆ.
BREAKING:
— REAL JEW (@THEREALJEW613) October 2, 2024
Heartbreaking news 💔
8 Israeli soldiers were killed in Lebanon by Hezbollah.
Captain Eitan Itzhak Oster🕯
Captain Harel Etinger 🕯
Captain Itai Ariel Giat 🕯
Sergeant First Class Noam Barzilay 🕯
Sergeant First Class Or Mantzur 🕯
Sergeant First Class Nazaar Itkin… pic.twitter.com/4DPyTopLjH
“ಕ್ಯಾಪ್ಟನ್ ಈಟಾನ್ ಇಟ್ಜಾಕ್ ಓಸ್ಟರ್, ಕ್ಯಾಪ್ಟನ್ ಹ್ಯಾರೆಲ್ ಎಟಿಂಗರ್, ಕ್ಯಾಪ್ಟನ್ ಇಟೈ ಏರಿಯಲ್ ಗಿಯಾಟ್, ಸಾರ್ಜೆಂಟ್ ಫಸ್ಟ್ ಕ್ಲಾಸ್ ನೋಮ್ ಬಾರ್ಜಿಲೆ, ಸಾರ್ಜೆಂಟ್ ಫಸ್ಟ್ ಕ್ಲಾಸ್ ಆರ್ ಮಂಟ್ಜೂರ್, ಸಾರ್ಜೆಂಟ್ ಫಸ್ಟ್ ಕ್ಲಾಸ್ ನಜಾರ್ ಇಟ್ಕಿನ್, ಸ್ಟಾಫ್ ಸಾರ್ಜೆಂಟ್ ಅಲ್ಮ್ಕೆನ್ ಟೆರೆಫ್ ಮತ್ತು ಸ್ಟಾಫ್ ಸಾರ್ಜೆಂಟ್ ಇಡೋ ಬ್ರೋಯರ್ ಹಿಜ್ಬುಲ್ಲಾ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ” ಎಂದು ಇಸ್ರೇಲ್ ರಕ್ಷಣಾ ಪಡೆಗಳು ಎಕ್ಸ್‌ನಲ್ಲಿ ಪೋಸ್ಟ್ ಮಾಡಿವೆ.
ಇದನ್ನೂಓದಿ: World War II : ಜಪಾನ್ ಏರ್‌ಪೋರ್ಟ್‌ನಲ್ಲಿ ಎರಡನೇ ಮಹಾಯುದ್ಧ ಸಂದರ್ಭದ ಬಾಂಬ್ ಸ್ಫೋಟ; 87 ವಿಮಾನ ರದ್ದು
ದಕ್ಷಿಣ ಲೆಬನಾನ್ ಮೇಲೆ ಇಸ್ರೇಲ್ ಭೂ ಸೇನೆಯ ದಾಳಿ ಪ್ರಾರಂಭಿಸಿದ ಒಂದು ದಿನದ ನಂತರ ಈ ಸಾವುನೋವುಗಳು ವರದಿಯಾಗಿವೆ. ಇದು ಸಂಘರ್ಷವನ್ನು ತೀವ್ರಗೊಳಿಸಿದೆ. ಲೆಬನಾನ್ ಭೂಪ್ರದೇಶದೊಳಗೆ ಇಸ್ರೇಲಿ ಪಡೆಗಳು ಹಿಜ್ಬುಲ್ಲಾ ಉಗ್ರರೊಂದಿಗೆ ತೀವ್ರ ಹೋರಾಟದಲ್ಲಿ ತೊಡಗಿವೆ.
ಟ್ಯಾಂಕ್‌ಗಳು ವಶಕ್ಕೆ
ಈ ಪ್ರದೇಶದ ಅತ್ಯಂತ ಶಕ್ತಿಶಾಲಿ ಮಿಲಿಟರಿ ಗುಂಪುಗಳಲ್ಲಿ ಒಂದೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಹಿಜ್ಬುಲ್ಲಾ, ಬುಧವಾರದ ಯುದ್ಧದ ಸಮಯದಲ್ಲಿ ಮೂರು ಇಸ್ರೇಲಿ ಮೆರ್ಕಾವಾ ಟ್ಯಾಂಕ್‌ಗಳನ್ನು ನಾಶಪಡಿದ್ದೇವೆ ಎಂದು ಹೇಳಿಕೊಂಡಿದೆ.
ಹಿಜ್ಬುಲ್ಲಾ ಪ್ರಕಾರ, ಟ್ಯಾಂಕ್‌ಗಳು ಗಡಿಯ ಬಳಿಯ ಮರೂನ್ ಅಲ್-ರಾಸ್ ಗ್ರಾಮದ ಕಡೆಗೆ ಸಾಗುತ್ತಿದ್ದವು. ಇಸ್ರೇಲ್ ಮಿಲಿಟರಿ ಮೂಲಗಳು ಟ್ಯಾಂಕ್ ನಷ್ಟ ಹೇಳದಿದ್ದರೂ. ವೈಮಾನಿಕ ದಾಳಿಯ ಬೆಂಬಲದೊಂದಿಗೆ ಹೋರಾಟ ಮುಂದುವರಿಸುವುದಾಗಿ ಹೇಳಿದೆ.