ಬೆಂಗಳೂರು: ಪಾದದ ಗಾಯಕ್ಕೆ ನಡೆಸಲಾದ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಪ್ರಸ್ತುತ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (NCA) ಪುನಶ್ಚೇತನಕ್ಕೆ ಒಳಗಾಗುತ್ತಿರುವ ಮೊಹಮ್ಮದ್ ಶಮಿ (Mohammad Shami) ತಮ್ಮ ಮಗಳು ಆಯಿರಾ (Mohammad Shami Daughter) ಜತೆ ಸಮಯ ಕಳೆದಿದ್ದಾರೆ. ಆ ಕುರಿತ ಭಾವನಾತ್ಮಕ ವೀಡಿಯೊ ಒಂದನ್ನು ಅವರು ಪೋಸ್ಟ್ ಮಾಡಿದ್ದಾರೆ. ಶಮಿ ತನ್ನ ಮಗಳನ್ನು ಬಹಳ ಸಮಯದ ನಂತರ ಭೇಟಿಯಾಗಿದ್ದಾರೆ. ಅಪ್ಪ- ಮಗಳು ಇಬ್ಬರೂ ಮಾಲ್fನಲ್ಲಿ ಒಟ್ಟಿಗೆ ಶಾಪಿಂಗ್ ಮಾಡುವುದನ್ನು ವಿಡಿಯೊದಲ್ಲಿ ಕಾಣಬಹುದು.
ವೇಗದ ಬೌಲರ್ ಈ ವೀಡಿಯೊಗೆ ವಿಶೇಷ ಶೀರ್ಷಿಕೆ ನೀಡಿದ್ದಾರೆ, “ಬಹಳ ಸಮಯದ ನಂತರ ನಾನು ಅವಳನ್ನು ಮತ್ತೆ ನೋಡಿದಾಗ ಗಡಿಯಾರದ ಮುಳ್ಳುಗಳೇ ನಿಂತು ಹೋದವು. ಪದಗಳಲ್ಲಿ ಹೇಳುವುದಕ್ಕಿಂತ ಹೆಚ್ಚಾಗಿ ನಿನ್ನನ್ನು ಪ್ರೀತಿಸುತ್ತೇನೆ ಮಗಳೆ ಎಂದು ಬರೆದುಕೊಂಡಿದ್ದಾರೆ.
ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್ ಮದುವೆಯಾದ ನಾಲ್ಕು ವರ್ಷಗಳಲ್ಲಿ ಪ್ರತ್ಯೇಕಗೊಂಡಿದ್ದಾರೆ. ಶಮಿ ವಿರುದ್ದ ಅವರ ಪತ್ನಿ ಹಲವಾರು ಕೇಸ್‌ಗಳನ್ನು ದಾಖಲಿಸಿದ್ದಾರೆ. ಕೌಟುಂಬಿಕ ದೌರ್ಜನ್ಯಕ್ಕಿಂತ ಮಿಗಿಲಾಗಿ ಮೋಸ, ಅನೈತಿಕ ಸಂಬಂಧದಂತ ದೂರುಗಳನ್ನು ದಾಖಲಿಸಿದ್ದಾರೆ. ಅವರ ನಡುವಿನ ವಾಜ್ಯವು ಕೋರ್ಟ್‌ನಲ್ಲಿನಡೆಯುತ್ತಿದೆ. ಹಸಿನ್ ಆಗಾಗ ಶಮಿ ವಿರುದ್ಧ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್‌ಗಳನ್ನು ಹಾಕುವ ಮೂಲಕ ಅವಮಾನ ಮಾಡಲು ಯತ್ನಿಸುತ್ತಿರುತ್ತಾರೆ.
ಮೊಹಮ್ಮದ್ ಶಮಿ ಗಾಯದ ಅಪ್ಡೇಟ್
ಮೊಹಮ್ಮದ್ ಶಮಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಯಲ್ಲಿ ಪುನಶ್ಚೇತನದ ಕಾರ್ಯದಲ್ಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ಪ್ರಕಾರ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಅವರ ಮೊಣಕಾಲುಗಳಲ್ಲಿ ಊತ ಕಂಡಿದೆ. ಇದು ಅವರ ಪುನರಾಗಮನಕ್ಕೆ ಅಡಚಣೆಯಾಗಿದೆ.
ಮೂಲಗಳ ಪ್ರಕಾರ, ಶಮಿ ಬೌಲಿಂಗ್ ಪುನರಾರಂಭಿಸಿದ್ದಾರೆ. ಶೀಘ್ರದಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಹಾದಿಯಲ್ಲಿದ್ದಾರೆ. ಆದರೆ ಅವರ ಮೊಣಕಾಲು ಗಾಯವು ಇತ್ತೀಚೆಗೆ ಹೆಚ್ಚಿದೆ. ಬಿಸಿಸಿಐನ ವೈದ್ಯಕೀಯ ತಂಡವು ಗಾಯದ ಪ್ರಮಾಣವನ್ನು ನಿರ್ಣಯಿಸುತ್ತಿದೆ.
ಸುಳ್ಳು ಸುದ್ದಿ ಹಬ್ಬಿಸಬೇಡಿ: ಗಾಯದ ಬಗ್ಗೆ ವರದಿಗಳನ್ನು ತಳ್ಳಿಹಾಕಿದ ಶಮಿ
ಮೊಹಮ್ಮದ್ ಶಮಿ ಅವರು ಮೊಣಕಾಲು ಗಾಯದಿಂದ ಬಳಲುತ್ತಿದ್ದಾರೆ ಎಂಬ ವರದಿಗಳನ್ನು ಅವರೇ ತಳ್ಳಿ ಹಾಕಿದ್ದಾರೆ. ಬುಧವಾರ ಸಂಜೆ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿರುವ ಸಮಯಕ್ಕೆ ಸರಿಯಾಗಿ ಚೇತರಿಸಿಕೊಳ್ಳಲು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇನೆ ಎಂದು ದೃಢಪಡಿಸಿದ್ದಾರೆ. ಮುಂಬರುವ ಆಸ್ಟ್ರೇಲಿಯಾ ಪ್ರವಾಸದಲ್ಲಿ ಅವರ ಭಾಗವಹಿಸುವಿಕೆ ಅಪಾಯದಲ್ಲಿದೆ ಎಂದು ಅವರು ಅಥವಾ ಬಿಸಿಸಿಐ ದೃಢಪಡಿಸಿಲ್ಲ ಎಂಬ ಸುಳ್ಳು ಸುದ್ದಿಗಳಿಂದ ದೂರವಿರಲು ಅವರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಈ ರೀತಿಯ ಆಧಾರರಹಿತ ವದಂತಿಗಳು ಏಕೆ? ನಾನು ಕಷ್ಟಪಟ್ಟು ಕೆಲಸ ಮಾಡುತ್ತಿದ್ದೇನೆ. ಚೇತರಿಸಿಕೊಳ್ಳಲು ನನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದ್ದೇನೆ. ನಾನು ಬಾರ್ಡರ್ ಗವಾಸ್ಕರ್ ಸರಣಿಯಿಂದ ಹೊರಗುಳಿದಿದ್ದೇನೆ ಎಂದು ಬಿಸಿಸಿಐ ಅಥವಾ ನಾನು ಹೇಳಿಲ್ಲ. ಅನಧಿಕೃತ ಮೂಲಗಳಿಂದ ಬರುವ ಇಂತಹ ಸುದ್ದಿಗಳಿಗೆ ಗಮನ ನೀಡುವುದನ್ನು ನಿಲ್ಲಿಸುವಂತೆ ನಾನು ಸಾರ್ವಜನಿಕರಲ್ಲಿ ವಿನಂತಿಸುತ್ತೇನೆ. ದಯವಿಟ್ಟು ಅಂತಹ ನಕಲಿ ಸುದ್ದಿಗಳನ್ನು ಹರಡಬೇಡಿ”ಎಂದು ಶಮಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಮಿ ಅವರ ಮೊಣಕಾಲು ಗಾಯವು ಉಲ್ಬಣಗೊಂಡಿದೆ, ಇದು ಅವರ ಪುನರಾಗಮನವನ್ನು ವಿಳಂಬಗೊಳಿಸುತ್ತದೆ ಎಂದು ಟೈಮ್ಸ್ ಆಫ್ ಇಂಡಿಯಾ ಈ ಹಿಂದೆ ವರದಿ ಮಾಡಿತ್ತು. ಅದನ್ನು ಅವರು ಸಂಪೂರ್ಣವಾಗಿ ನಿರಾಕರಿಸದ್ದಾರೆ.
ಇದನ್ನೂ ಓದಿ: MS Dhoni: ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಕೇಳಿಕೆ ಕೊಟ್ಟ ಫ್ರಾಂಚೈಸಿ ಸಿಇಒ
ಶಮಿ ಬೌಲಿಂಗ್ ಪುನರಾರಂಭಿಸಿದ್ದರು ಮತ್ತು ಅವರು ಶೀಘ್ರದಲ್ಲೇ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವ ಹಾದಿಯಲ್ಲಿದ್ದರು. ಆದರೆ ಈ ಮೊಣಕಾಲು ಗಾಯ ಹೆಚ್ಚಾಗಿದೆ. ಬಿಸಿಸಿಐನ ವೈದ್ಯಕೀಯ ತಂಡವು ಗಾಯವನ್ನು ನಿರ್ವಹಿಸುತ್ತಿದೆ. ಆದರೆ ಅದಕ್ಕೆ ಸ್ವಲ್ಪ ಸಮಯ ಬೇಕಾಗಬಹುದು”ಎಂದು ಬಿಸಿಸಿಐ ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.
ಇದು ಎನ್ಸಿಎ ವೈದ್ಯಕೀಯ ತಂಡಕ್ಕೆ ಆಘಾತವಾಗಿದೆ. ಅವರು ಒಂದು ವರ್ಷದಿಂದ ಅವರ ಪುನಶ್ಚೇತನಕ್ಕೆ ಕೆಲಸ ಮಾಡುತ್ತಿದೆ. ಅವರನ್ನು ಮತ್ತೆ ಬೆಂಗಳೂರಿಗೆ ಕರೆತರಲು ವೈದ್ಯಕೀಯ ತಂಡವು ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ” ಎಂದು ಮೂಲಗಳು ತಿಳಿಸಿವೆ.