Saturday, 23rd November 2024

Google Gemini : ಗೂಗಲ್ ಜೆಮಿನಿಯಲ್ಲಿ ಈಗ ಕನ್ನಡ ಸೇರಿದಂತೆ 7 ಭಾಷೆ ಲಭ್ಯ

Google Gemini

ಬೆಂಗಳೂರು: ಗೂಗಲ್‌ನ 10 ನೇ ಗೂಗಲ್ ಫಾರ್ ಇಂಡಿಯಾ ಕಾರ್ಯಕ್ರಮದಲ್ಲಿ ಗೂಗಲ್ ಎಐ ಚಾಲಿತ ಗೂಗಲ್‌ ಜೆಮಿನಿಯಲ್ಲಿ (Google Gemini) ಹೊಸ ಫೀಚರ್‌ಗಳು ಲಭ್ಯವಾಗಿವೆ. ಹಿಂದಿ, ಬಂಗಾಳಿ, ಕನ್ನಡ, ಮಲಯಾಳಂ, ಮರಾಠಿ, ತೆಲುಗು, ತಮಿಳು ಮತ್ತು ಉರ್ದು ಸೇರಿದಂತೆ ಪ್ರಮುಖ ಭಾರತೀಯ ಭಾಷೆಗಳಲ್ಲಿ ಜೆಮಿನಿ ಲೈವ್ ಎಐ ಅಸಿಸ್ಟೆಂಟ್ ಸಿಗಲಿದೆ.

ಜೆಮಿನಿ ಲೈವ್ ಬಳಕೆದಾರರಿಗೆ ಕೃತಕ ಬುದ್ಧಿಮತ್ತೆಯೊಂದಿಗೆ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಟೈಪ್ ಮಾಡುವುದನ್ನ ಮತ್ತು ಪ್ರಾಂಪ್ಟ್‌ ಮಾಡುವುದನ್ನು ತಪ್ಪಿಸಲು ಇದು ನೆರವಾಗುತ್ತದೆ. ಜೆಮಿನಿ ಲೈವ್ ಚಾಟ್ ಜಿಪಿಟಿಯಲ್ಲಿ ಜಿಪಿಟಿ -4 ಒ ಮೂಲಕ ಲಭ್ಯವಿರುವ ಧ್ವನಿ ವಿಶೇಷದ ಕಾರ್ಯನಿರ್ವಹಿಸುತ್ತದೆ ಮತ್ತು 10 ಧ್ವನಿಗಳನ್ನು ಬೆಂಬಲಿಸುತ್ತದೆ. ಇದು ತುಂಬಾ ನೈಸರ್ಗಿಕ ಧ್ವನಿ ಸಂಭಾಷಣೆಯನ್ನು ಹೊಂದುವ ಸಲುವಾಗಿ ಜೆಮಿನಿ ಎಐನಲ್ಲಿ ಮಾತನ್ನು ಮಧ್ಯದಲ್ಲಿ ನಿಲ್ಲಿಸುವ ಫೀಚರ್‌ ಕೂಡ ನೀಡಲಾಗಿದೆ.

ಇದನ್ನೂ ಓದಿ: IndiGo Flight: ವಿಮಾನ ಹಾರಿಸಲು ನಿರಾಕರಿಸಿದ ಪೈಲಟ್; ಪುಣೆ-ಬೆಂಗಳೂರು ಇಂಡಿಗೋ ಫ್ಲೈಟ್ 5 ಗಂಟೆ ವಿಳಂಬ

ಜೆಮಿನಿ ಲೈವ್ ಹ್ಯಾಂಡ್ಸ್-ಫ್ರೀ ಸಪೋರ್ಟ್‌ನೊಂದಿಗೆ ಬರುತ್ತದೆ. ಅಂದರೆ ಅಪ್ಲಿಕೇಶನ್ ಬ್ಯಾಕ್‌ಗ್ರೌಂಡ್‌ನಲ್ಲಿದ್ದಾಗ ಅಥವಾ ಅವರ ಫೋನ್ ಲಾಕ್ ಆಗಿದ್ದರೂ ಬಳಕೆದಾರರು ಎಐ ಚಾಟ್‌ಜಿಪಿಟಿ ಜತೆ ಸಂಭಾಷಣೆ ನಡೆಸಬಹುದು.

ಈ ಫೀಚರ್ ಅನ್ನು ಮೊದಲು ಆಗಸ್ಟ್‌ನಲ್ಲಿ ಗೂಗಲ್‌ ಪಿಕ್ಸೆಲ್ 9 ಸರಣಿ ಬಿಡುಗಡೆ ಸಮಾರಂಭದಲ್ಲಿ ಘೋಷಿಸಲಾಗಿತ್ತು. ಪ್ರಾರಂಭದಲ್ಲಿ ಜೆಮಿನಿ ಅಡ್ವಾನ್ಸ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿತ್ತು. ಆದಾಗ್ಯೂ, ಕೆಲವು ದಿನಗಳ ಹಿಂದೆ ಗೂಗಲ್ ಜೆಮಿನಿ ಲೈವ್ ಈಗ ಎಲ್ಲಾ ಆಂಡ್ರಾಯ್ಡ್ ಬಳಕೆದಾರರಿಗೆ ಸಿಗುತ್ತಿದೆ ಎಂದು ಘೋಷಿಸಿದೆ.